ಮೇಘನಾ ರಾಜ್​ ಜೊತೆ ಮದ್ವೆ ಸುದ್ದಿ ಕುರಿತು ಕೊನೆಗೂ ಮೌನ ಮುರಿದ ನಟ!

Published : Jul 12, 2025, 12:34 PM IST
Vijaya Raghavendra and Meghana Raj

ಸಾರಾಂಶ

ಮೇಘನಾ ರಾಜ್​ ಜೊತೆ ವಿಜಯ ರಾಘವೇಂದ್ರ ಅವರ ಮದುವೆಯ ಸುದ್ದಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಕೊನೆಗೂ ನಟ ಮೌನ ಮುರಿದಿದ್ದಾರೆ. ಅವರು ಹೇಳಿದ್ದೇನು? 

ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಒಂದೂವರೆ ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್​ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ. ಈಚೆಗಷ್ಟೇ, ವಿಜಯ್ ರಾಘವೇಂದ್ರ ಮಗನ ಪರೀಕ್ಷೆ ಮುಗಿದ ನಂತರವೇ ಆತನಿಗೆ ಬೇಸರವನ್ನು ಮರೆಸಲೆಂದು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅಮ್ಮನ ಸ್ಥಾನವನ್ನು ತುಂಬುವುದಕ್ಕೆ ಪ್ರಯತ್ನ ಮಾಡಿದ್ದರು.

ಇದರ ನಡುವೆಯೇ, ಅವರು ಒಂಟಿಯಾಗಿ ಇರಬಾರದು, ಇನ್ನೊಂದು ಮದುವೆಯಾಗಬೇಕು ಎನ್ನುವುದು ಸಹಜವಾಗಿ ಅವರ ಅಭಿಮಾನಿಗಳ ಆಸೆ. ಹಾಗೆಂದು ಯಾರದ್ಯಾರದ್ದೋ ಜೊತೆ ಸಂಬಂಧ ಕಲ್ಪಿಸಿದರೆ, ಯಾರಿಗಾದರೂ ಅದು ತುಂಬಾ ಹಿಂಸೆ ಆಗುತ್ತದೆ. ಜೊತೆಗೆ ನೋವು ಕೂಡ ಆಗುತ್ತದೆ. ಅದೇ ರೀತಿ ವಿಜಯ ರಾಘವೇಂದ್ರ ಅವರಿಗೂ ಆಗಿದೆ. ನಟಿ ಮೇಘನಾ ರಾಜ್​ ಜೊತೆ ವಿಜಯ್​ ಅವರ ಮದುವೆ ಎನ್ನುವ ಸುದ್ದಿಯನ್ನು ಹರಡಿ, ಸಾಕಷ್ಟು ಯುಟ್ಯೂಬರ್​ಗಳು ಅದನ್ನು ಬಂಡವಾಳವಾಗಿಸಿಕೊಂಡರು. ತಮ್ಮ ಚಾನೆಲ್​ಗೆ ವ್ಯೂವ್ಸ್​ ಹೆಚ್ಚು ಬರಲಿ ಎನ್ನುವ ಕಾರಣಕ್ಕೆ ಯಾರಯಾರದ್ದೋ ಜೀವನದ ಜೊತೆ ಚೆಲ್ಲಾಟ ಆಡುವುದು ಕೆಲವರಿಗೆ ತುಂಬಾ ಸಲೀಸಾದ ಕೆಲಸ. ಅದರಲ್ಲಿಯೂ ಹೆಸರು ಮಾಡಿದ ಸೆಲೆಬ್ರಿಟಿಗಳ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೂ ಇದ್ದಾರೆ. ಅದೇ ರೀತಿ ವಿಜಯ ರಾಘವೇಂದ್ರ ಮತ್ತು ಮೇಘನಾ ರಾಜ್​ ಅವರ ವಿಷಯದಲ್ಲಿಯೂ ಆಗಿದೆ.

ಈ ಬಗ್ಗೆ FDFS ಯುಟ್ಯೂಬ್​ ಚಾನೆಲ್​ಗೆ ವಿಜಯ ರಾಘವೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ವಿಷಯದಲ್ಲಿ ಸ್ಪಷ್ಟೀಕರಣ ಕೊಡುವುದೇ ಹಿಂಸೆ ಆಗುತ್ತದೆ, ಜೊತೆಗೆ ಕೋಪನೂ ಬರುತ್ತದೆ. ಕೆಲವು ಅಭಿಮಾನಿಗಳಿಗೆ ಕನ್​ಸರ್ನ್​ ಇರುವುದು ತಿಳಿಯುತ್ತದೆ. ಹಾಗೆಂದು ಏನೇನೋ ಸುದ್ದಿಗಳನ್ನು ಹರಡುವಲ್ಲಿ ಅರ್ಥವಿಲ್ಲ. ಎಲ್ಲರಿಗೂ ಅವರ ಕುಟುಂಬ ಕೂಡ ಇರುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನನಗೂ ಮಗ ಇದ್ದಾನೆ. ಇಂಥ ಗಾಸಿಪ್​ಗಳೆಲ್ಲಾ ಕುಟುಂದವರ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದು ನೋವಿನಿಂದ ನುಡಿದಿದ್ದಾರೆ.

ಮೇಘನಾ ಆಗಲಿ ಅಥವಾ ಇನ್ಯಾರೇ ಆಗಲಿ, ಎರಡನೆಯ ಮದುವೆಯ ಬಗ್ಗೆ ಯಾವುದೇ ಸದ್ಯ ಯೋಚನೆಗಳಿಲ್ಲ. ಅವೆಲ್ಲಾ ಸುಮ್ಮನೇ ಗಾಸಿಪ್​ಗಳಷ್ಟೇ. ನನ್ನ ಲೈಫ್​ನಲ್ಲಿ ಇನ್ನೊಬ್ಬರನ್ನು ಬರಮಾಡಿಕೊಳ್ಳುವುದು ಆಗದೇ ಇರುವ ಕೆಲಸ ಎನ್ನುತ್ತಲೇ ಎರಡನೆಯ ಮದುವೆಯ ವಿಷಯವನ್ನೂ ಅಲ್ಲಗಳೆದಿದ್ದಾರೆ ವಿಜಯ ರಾಘವೇಂದ್ರ. ಇದನ್ನು ಕೇಳಿಯಾದರೂ ಸುಮ್ಮನೇ ಗಾಸಿಪ್​ ಹರಡುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ ವಿಜಯ ರಾಘವೇಂದ್ರ ಫ್ಯಾನ್ಸ್​. ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್​ ಅವರು. ಮಗನ ಪರೀಕ್ಷೆಯ ಸಂದರ್ಭದಲ್ಲಿ ವಿಜಯ್​ ರಾಘವೇಂದ್ರ ಜೊತೆ ಪತ್ನಿ ಸ್ಪಂದನಾ ಕೂಡ ಹೀಗೆ ಕಾಳಜಿ ತೋರುತ್ತಿದ್ದರು. ವಿಧಿಯ ಆಟದ ಮುಂದೆ ಏನು ಹೇಳಬೇಕು ಎಂದು ಅಭಿಮಾನಿಗಳು ವಿಜಯ್​ ಅವರ ವಿಡಿಯೋಗೆ ಕಮೆಂಟ್​ ಮೂಲಕ ಕಂಬನಿ ಮಿಡಿಯುತ್ತಿದ್ದಾರೆ. ಮಗ ಶೌರ್ಯನಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಆತ ಕೂಡ ಅಪ್ಪನಂತೆ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್