ಭಾರತದಲ್ಲಿ ಎಲ್ಲೇ ಹುಡುಕಿದರೂ ಸಾಯಿ ಪಲ್ಲವಿಯಂಥ ಸೀತೆ ಸಿಗಲ್ಲ: ನಟ ಧನುಷ್​ ಮೆಚ್ಚುಗೆಯ ಮಾತು

Published : Nov 10, 2026, 07:29 PM IST
Dhanush and Sai Pallavi

ಸಾರಾಂಶ

ರಾಮಾಯಣ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಬಗ್ಗೆ ನಟ ಧನುಷ್ ಹಾಡಿ ಹೊಗಳಿದ್ದಾರೆ. ಭಾರತದಾದ್ಯಂತ ಹುಡುಕಿದರೂ ಸಾಯಿ ಪಲ್ಲವಿಯಂಥ ಸೀತೆ ಸಿಗುವುದಿಲ್ಲ ಎಂದು 'ಓಂ' ಚಿತ್ರದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಮುಂಬೈ: ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರ (Ramaya Movie-Part-1)ನಲ್ಲಿ ಸೀತಾ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿಯ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಟೀಕೆಗಳು ಕೇಳಿಬರುತ್ತಲೇ ಇವೆ. ಸಹಜ ಸುಂದರಿಯಾಗಿರುವ ಸಾಯಿ ಪಲ್ಲವಿ, ಸೀತಾ ಪಾತ್ರಕ್ಕೆ ನ್ಯಾಯ ಒದಗಿಸಿರುವ ಬಗ್ಗೆ ಮೊದಲು ಟ್ರೋಲ್​ ಮಾಡಿದವರ ಪೈಕಿ ಹಲವರು ಶಹಬ್ಬಾಸ್​ಗಿರಿ ನೀಡುತ್ತಿದ್ದರೆ, ಇನ್ನು ಕೆಲವರು ಅವರು ಮಾಡಬೇಕಿತ್ತು, ಇವರು ಮಾಡಬೇಕಿತ್ತು ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ಹಲವು ಸೆಲೆಬ್ರಿಟಿಗಳು ಕೂಡ ಸಾಯಿ ಪಲ್ಲವಿ ಪರವಾಗಿ ನಿಂತಿದ್ದಾರೆ. ತಮ್ಮ ಮುಂಬರುವ 'ಓಂ' ಚಿತ್ರದ ಪೂರ್ವಬಿಡುಗಡೆ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಅವರನ್ನು ನಟ ಧನುಷ್​ ಅವರು ಹಾಡಿ ಹೊಗಳಿದ್ದಾರೆ.. ಇದರ ವಿಡಿಯೋ ವೈರಲ್​ ಆಗುತ್ತಿದೆ.

ಇಡೀ ಭಾರತದಲ್ಲಿ ಹುಡುಕಿದರೂ...

"ಸೀತಾ ಪಾತ್ರದ ಸುತ್ತಲೂ ತುಂಬಾ ಗದ್ದಲ ಮತ್ತು ಗಲಾಟೆ ಇದೆ. ನನಗೆ ಅದು ನಿಜವಾಗಿಯೂ ಅರ್ಥವಾಗುತ್ತಿಲ್ಲ. ಚಿತ್ರೀಕರಣದ ನಡುವಿನ ವಿರಾಮದ ಸಮಯದಲ್ಲಿಯೂ ಸಹ ಇಂಥ ಗಲಾಟೆ ಕೇಳಿದ್ದೇನೆ. ಆದರೆ ಒಂದು ಮಾತನ್ನಂತೂ ಹೇಳಬಲ್ಲೆ. ನೀವು ಭಾರತದಾದ್ಯಂತ ಹುಡುಕಿದರೂ, ಸಾಯಿ ಪಲ್ಲವಿ ಅವರಂಥ ಇನ್ನೊಬ್ಬ ಸೀತೆ ಸಿಗುವುದಿಲ್ಲ. ಅವರು ದೇವರ ಬಗ್ಗೆ ಅಂತಹ ಆಳವಾದ ಭಕ್ತಿ ಮತ್ತು ಶುದ್ಧ ಹೃದಯ ಹೊಂದಿರುವ ವ್ಯಕ್ತಿ. ಅವರು ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಅವರು ಉತ್ತಮ ಕಲಾವಿದೆ" ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

"ನಾನು ಮಾರಿ 2 ರ ಸಮಯದಲ್ಲಿ ಸಾಯಿ ಪಲ್ಲವಿಯನ್ನು ಮೊದಲು ಭೇಟಿಯಾದಾಗ, ಅವರು ತುಂಬಾ ಮುಗ್ಧರಾಗಿದ್ದರು ಮತ್ತು ತುಂಬಾ ಕಡಿಮೆ ಮಾತನಾಡಿದರು. ಅವರು ಏನನ್ನೂ ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸುತ್ತಿದ್ದರು ಮತ್ತು ಮಾತನಾಡಲು ಹಿಂಜರಿಯುತ್ತಿದ್ದರು. ಅವರು ಅಂತಹ ವ್ಯಕ್ತಿಯಾಗಿದ್ದರು. ಒಂಬತ್ತು ವರ್ಷಗಳ ನಂತರ ಈ ಚಿತ್ರದ ಸೆಟ್‌ಗಳಲ್ಲಿ ಅವರನ್ನು ನೋಡಿದಾಗ, ಅವರು ಸಂಪೂರ್ಣವಾಗಿ ರೂಪಾಂತರಗೊಂಡಿರುವುದನ್ನು ನಾನು ಕಂಡುಕೊಂಡೆ. ಅವರು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದರು. ಅವರು ಸಿನಿಮಾವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡವರಾಗಿ ನಿಂತರು. ಅವರ ಭಾಷಣ, ಅವರ ನಡಿಗೆ ಮತ್ತು ಅವರ ಅಭಿವ್ಯಕ್ತಿಗಳಲ್ಲಿ ಎಲ್ಲವೂ ಅಪಾರ ಆತ್ಮವಿಶ್ವಾಸ ಮತ್ತು ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಇದು ಆಶ್ಚರ್ಯಕರವಾಗಿತ್ತು," ಎಂದು ಅವರು ಹೇಳಿದರು.

ಓಂ ಚಿತ್ರದಲ್ಲಿ ಸವಾಲಿನ ಪಾತ್ರವನ್ನು ಸಾಯಿ ಪಲ್ಲವಿ ವಹಿಸಿಕೊಂಡಿದ್ದರು. ಇದಕ್ಕೆ ನೆನಪಿಸಿಕೊಂಡ ನಟ ಧನುಷ್​, "ಈ ಪಾತ್ರವನ್ನು ನಿರ್ವಹಿಸುವುದು ಸುಲಭವಲ್ಲ. ಸಾಯಿ ಪಲ್ಲವಿ ಅದನ್ನು ಧೈರ್ಯದಿಂದ ಮತ್ತು ಧೈರ್ಯದಿಂದ ಕೈಗೆತ್ತಿಕೊಂಡರು ಮತ್ತು ಅದ್ಭುತ ಅಭಿನಯವನ್ನು ನೀಡಿದರು ಎಂದಿದ್ದಾರೆ. 'ಮಾರಿ 2' ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಧನುಷ್, ಇತ್ತೀಚಿನ ವರ್ಷಗಳಲ್ಲಿ ಸಾಯಿ ಪಲ್ಲವಿ ಒಬ್ಬ ನಟಿಯಾಗಿ ಹೇಗೆ ವಿಕಸನಗೊಂಡಿದ್ದಾರೆ ಎಂಬುದರ ಕುರಿತೂ ಮಾತನಾಡಿದ್ದಾರೆ. 'ಓಎಂ' ಚಿತ್ರದ ಸೆಟ್‌ನಲ್ಲಿ ಅವರು ಪ್ರದರ್ಶಿಸಿದ ಆತ್ಮವಿಶ್ವಾಸ ಮತ್ತು ಪಾತ್ರದ ಮೇಲಿನ ಹಿಡಿತವನ್ನು ಕಂಡು ತಮಗೆ ಆಶ್ಚರ್ಯವಾಯಿತು ಎಂದು ಅವರು ತಿಳಿಸಿದರು.

ತುಂಬಾ ಮುಗ್ಧ ನಟಿ

"ನಾನು ಮೊದಲ ಬಾರಿಗೆ 'ಮಾರಿ 2' ಚಿತ್ರದ ಸಮಯದಲ್ಲಿ ಸಾಯಿ ಪಲ್ಲವಿ ಅವರನ್ನು ಭೇಟಿಯಾದಾಗ, ಅವರು ತುಂಬಾ ಮುಗ್ಧರಾಗಿದ್ದರು ಮತ್ತು ಬಹಳ ಕಡಿಮೆ ಮಾತನಾಡುತ್ತಿದ್ದರು. ಏನನ್ನಾದರೂ ಹೇಳುವ ಮೊದಲು ಚೆನ್ನಾಗಿ ಯೋಚಿಸುತ್ತಿದ್ದರು, ಮಾತನಾಡಲು ಹಿಂಜರಿಯುತ್ತಿದ್ದರು. ಅಂತಹ ವ್ಯಕ್ತಿತ್ವ ಅವರದ್ದಾಗಿತ್ತು. ಒಂಬತ್ತು ವರ್ಷಗಳ ನಂತರ ಈ ಚಿತ್ರದ ಸೆಟ್‌ನಲ್ಲಿ ಅವರನ್ನು ನೋಡಿದಾಗ, ಅವರು ಸಂಪೂರ್ಣ ಬದಲಾಗಿದ್ದರು. ಅವರು ಒಬ್ಬ ಭಿನ್ನ ವ್ಯಕ್ತಿಯಾಗಿ ರೂಪುಗೊಂಡಿದ್ದರು. ಸಿನಿಮಾ ಕಲೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದವರಂತೆ ಅವರು ಅಲ್ಲಿ ನಿಂತಿದ್ದರು. ಅವರ ಮಾತು, ನಡಿಗೆ ಮತ್ತು ಹಾವಭಾವಗಳಲ್ಲಿ ಅಪಾರ ಆತ್ಮವಿಶ್ವಾಸ ಹಾಗೂ ಘನತೆ ಎದ್ದು ಕಾಣುತ್ತಿತ್ತು. ಇದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು" ಎಂದು ಧನುಷ್ ಹೇಳಿದ್ದಾರೆ.

ಮಾರಿ-2 ಚಿತ್ರದ ಬಳಿಕ ನಟ ಧನುಷ್ಯ ಜೊತೆ ಎರಡನೇ ಬಾರಿ ಸಾಯಿ ಪಲ್ಲವಿ ಓಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು, ಶ್ರೀಗಂಧದ ಮರದ ಅಕ್ರಮ ವ್ಯಾಪಾರದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಿಬಿಐ ಅಧಿಕಾರಿ ನಿತ್ಯಾ ರೆಡ್ಡಿ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕ್ರಿಕೆಟಿಗ ಪೃಥ್ವಿ ಶಾ ಲವ್​ಸ್ಟೋರಿಯಲ್ಲಿ ಮತ್ತೆ ಟ್ವಿಸ್ಟ್​: ಒಂದಾದ ದಂಪತಿ- ಹುಚ್ಚು ಹಿಡೀತಿದೆ ಅಂತಿರೋ ಫ್ಯಾನ್ಸ್​​
ರಾಘವೇಂದ್ರ ಪಾತ್ರಧಾರಿ ಪರೀಕ್ಷಿತ್ ಅಭಿನಯಕ್ಕೆ ಜಗ್ಗೇಶ್ ಫಿದಾ! ನವರಸನಾಯಕನ ಭೇಟಿಗೆ ಧಾರಾವಾಹಿ ನಟ ಹೇಳಿದ್ದೇನು?