ಹಾಲಿವುಡ್‌ನ ಮ್ಯಾಗಜಿನ್‌ ಮುಖಪುಟದಲ್ಲಿ ನಟ ಯಶ್‌: ಜಗತ್ತು ಗೆಲ್ಲಲು ಹೊರಟ ರಾಕಿಂಗ್‌ ಸ್ಟಾರ್‌

Published : May 08, 2026, 04:33 PM IST
Yash

ಸಾರಾಂಶ

‘ವೆರೈಟಿ’ ಎಂಬ ಹಾಲಿವುಡ್‌ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಸಿನಿ ಜರ್ನಿಯ ಕತೆ. ‘ದಿ ಯಶ್‌ ಎಫೆಕ್ಟ್‌’ ಎಂಬ ಶೀರ್ಷಿಕೆಯಡಿ ಪ್ರಕಟ. ಕನ್ನಡ ನಟನೊಬ್ಬನ ಬಗ್ಗೆ ಹಾಲಿವುಡ್‌ ಮ್ಯಾಗಜಿನ್‌ನಲ್ಲಿ ಸಚಿತ್ರ ಲೇಖನ ಇದೇ ಮೊದಲು.

ಯಶ್ ಕನ್ನಡದ ಮಂದಿಗೆ ಸಿಗುವುದಿಲ್ಲ. ಭಾರತ ಮಟ್ಟದಲ್ಲೂ ಪತ್ರಕರ್ತರಿಗೆ ಮಾತಿಗೆ ಸಿಗುತ್ತಿಲ್ಲ. ಅವರು ಏನಿದ್ದರೂ ಈಗ ಗ್ಲೋಬಲ್‌ ಸ್ಟಾರ್‌ ಆಗುವತ್ತ ಚಿತ್ತ ನೆಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಿಆರ್‌ ಏಜೆನ್ಸಿಯೊಂದು ಅವರ ಪ್ರಚಾರ ಕಾರ್ಯಗಳನ್ನು ನಡೆಸಿಕೊಡುತ್ತಿದೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಮ್ಯಾಗಜೀನ್ ವೆರೈಟಿ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜಾಗತಿಕ ಪ್ರಚಾರ ತಂತ್ರದ ಕುರಿತ ವಿಶೇಷ ವಿವರಗಳು ಇಲ್ಲಿವೆ.

1. ಯಶ್‌ ಯೋಚನೆಗಳೇ ಬೇರೆ

ಯಶ್ ಏನಿದ್ದರೂ ಮೇಲಿನ ಹಂತಕ್ಕೆ ನೋಟ ನೆಟ್ಟಿರುತ್ತಾರೆ. ಮೇಲಿನ ಹಂತದಲ್ಲಿ ನಿಂತು ಏನೇ ಮಾಡಿದರೂ ಕೆಳ ಹಂತಕ್ಕೆ ತಲುಪುತ್ತದೆ ಅನ್ನುವುದು ಅವರ ನಂಬಿಕೆ. ಅದಕ್ಕೆ ಪೂರಕವಾಗಿ ಅವರು ಟಾಕ್ಸಿಕ್‌, ರಾಮಾಯಣ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ.

2. ಜಾಗತಿಕ ಪ್ರಚಾರ

ಏನೇ ಮಾಡಿದರೂ ಶ್ರೇಷ್ಠವಾದದ್ದೇ ಮಾಡಬೇಕು ಅನ್ನುವುದು ಅವರ ಹಂಬಲ. ಅದಕ್ಕೆ ತಕ್ಕಂತೆ ಅವರು ತನ್ನ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರಚಾರ ಸಂಸ್ಥೆ ಡಬ್ಲ್ಯೂಎಂಎಫ್‌ ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ತಂತ್ರದ ಭಾಗವಾಗಿಯೇ ಅವರದೊಂದು ವಿಶೇಷ ಸಂದರ್ಶನ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಸಿನಿಮಾ ಮ್ಯಾಗಜೀನ್‌ ವೆರೈಟಿಯಲ್ಲಿ ಪ್ರಕಟವಾಗಿದೆ.

3. ಪ್ರಾಯೋಜಿತ ಸಂದರ್ಶನ

ವಿಶೇಷ ಇರುವುದು ಇಲ್ಲೇ, ತಾನು ಅಂದುಕೊಂಡಿದ್ದು ಮಾಡದೇ ಬಿಡುವ ಜಾಯಮಾನ ಯಶ್ ಅವರದಲ್ಲ. ಒಂದು ನಿರ್ದಿಷ್ಟ ಗುರಿ ಇಟ್ಟರು ಎಂದರೆ ಆ ಗುರಿ ಸಾಧಿಸಬೇಕು ಎಂಬ ಮನಸ್ಥಿತಿ. ವೆರೈಟಿ ಪತ್ರಿಕೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ಬಳಿಕ ಪ್ರಾಯೋಜಿತವಾದರೂ ಸರಿ, ಅಲ್ಲಿ ಕಾಣಿಸಿಕೊಳ್ಳಬೇಕು. ಇದೀಗ ವೆರೈಟಿ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಪ್ರಾಯೋಜಿತ ಅನ್ನುವುದು ಅವರ ಪ್ರಚಾರ ವೈಖರಿಯನ್ನು ಹೇಳುತ್ತದೆ. ಆ ಮುಖಪುಟ ಪ್ರಕಟವಾಗಿದೆ ಅನ್ನುವ ಸುದ್ದಿಯೇ ಈಗ ಭಾರತದಾದ್ಯಂತ ಓಡುತ್ತಿದೆ. ಅಲ್ಲಿಗೆ ಆ ಮುಖಪುಟ ಸುದ್ದಿ ಸಾರ್ಥಕವಾಗಿದೆ.

4. ದಿ ಯಶ್ ಎಫೆಕ್ಟ್‌ ಎಂಬ ಬ್ರಾಂಡಿಂಗ್‌

ಈ ಸಂದರ್ಶನದಲ್ಲಿ ‘ದಿ ಯಶ್‌ ಎಫೆಕ್ಟ್‌’ ಎಂಬ ಒಂದೇ ಸಾಲಿನಲ್ಲಿ ಯಶ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶ್‌ ತನ್ನನ್ನು ಪ್ರಸ್ತುತಪಡಿಸಿದ್ದಾರೆ. ಪಾಶ್ಚಿಮಾತ್ಯ ಸಿನಿಮಾ ನಿರ್ಮಾಪಕರು ಹಾಗೂ ಹೂಡಿಕೆದಾರರ ಮುಂದೆ ತಾನು ಗ್ಲೋಬಲ್‌ ಮಟ್ಟದಲ್ಲಿ ದೊಡ್ಡ ಹೂಡಿಕೆಗೆ ಯೋಗ್ಯ ಮತ್ತು ಜಾಗತಿಕ ಸಿನಿಮಾ ಜಗತ್ತನ್ನು ಆಳುವ ಸಾಮರ್ಥ್ಯವಿರುವ ನಟ ಎಂದು ಮನವರಿಕೆ ಮಾಡುವ ಪ್ರಯತ್ನ ಇದರ ಹಿಂದಿದೆ.

5. ವಿಶ್ವಮಟ್ಟದಲ್ಲಿ ಟಾಕ್ಸಿಕ್‌ ಹವಾ

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಟಾಕ್ಸಿಕ್‌ ಅನ್ನು ಸಾಮಾನ್ಯ ಆ್ಯಕ್ಷನ್‌ ಸಿನಿಮಾವಾಗಿ ಬಿಂಬಿಸದೇ ಅದನ್ನೊಂದು ದೊಡ್ಡ ಮಟ್ಟದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌, ಭಿನ್ನ ಬಗೆಯ ಪ್ರಯತ್ನ ಎಂದು ಬಿಂಬಿಸಲಾಗಿದೆ. ಇದು ಸಿನಿಮಾ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

6. ಗ್ಲೋಬಲ್‌ ಲೆವೆಲ್‌ಗೆ ತಕ್ಕಂಥಾ ಲುಕ್

ಕವರ್‌ ಪೇಜ್‌ನಲ್ಲಿರುವ ಯಶ್‌ ಫೋಟೋ ‘ಗ್ಲೋಬರ್‌ ನೋಯರ್‌’ ಸ್ಟೈಲ್‌ನಲ್ಲಿದೆ. ಕೆನೆ ಬಣ್ಣದ ಪ್ಯಾಟರ್ನ್ಡ್‌ ಸೂಟ್‌, ಹ್ಯಾಟ್‌, ಕ್ಲಾಸಿಕ್‌ ಕಾರು ಇವೆಲ್ಲವೂ ಜಾಗತಿಕ ಪ್ರೇಕ್ಷಕರನ್ನು ಸೆಳೆಯುವಂತಿದೆ.

7. ಸಿನಿಮಾ ನಿರ್ಮಾಣದಲ್ಲೂ ಹೊಸತನ

ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಶನ್ಸ್‌ ಯಶ್‌ ಅವರ ನಿರ್ಮಾಣ ಸಂಸ್ಥೆ. ಈ ಬ್ಯಾನರ್‌ನಡಿ ಯಶ್‌ ತನ್ನ ಬ್ರಾಂಡ್‌ ಅನ್ನು ವಿಶ್ವಮಟ್ಟದಲ್ಲಿ ಬಹಳ ಕ್ರಿಯೇಟಿವ್‌ ಆಗಿ ನಿಯಂತ್ರಿಸುತ್ತಿದ್ದಾರೆ. ದುಡ್ಡು ಪೋಲಾಗಬಾರದು, ತಾನು ಹಾಕುವ ಪ್ರತೀ ಪೈಸೆಯೂ ತನಗೆ ಜಾಗತಿಕ ಮಟ್ಟದಲ್ಲಿ ಹೆಸರು, ಹಣ ತರುವಂತಿರಬೇಕು ಅನ್ನೋದನ್ನು ಕರೆಕ್ಟಾಗಿ ಪ್ಲಾನ್‌ ಮಾಡಿ ಕಾರ್ಯಗತಗೊಳಿಸುತ್ತಿದ್ದಾರೆ.

8. ಟಾಕ್ಸಿಕ್‌, ರಾಮಾಯಣ ಎರಡಕ್ಕೂ ಆದ್ಯತೆ

ಯಶ್‌ ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್‌’ ಹಾಗೂ ‘ರಾಮಾಯಣ’ ಎರಡೂ ಸಂಪೂರ್ಣ ಭಿನ್ನ ನೆಲೆಯ ಕಥೆಗಳು. ಟಾಕ್ಸಿಕ್‌ ರಾಯನಾಗಿ ಯಶ್‌ ಆಧುನಿಕ ಲುಕ್‌ನಲ್ಲಿದ್ದರೆ, ‘ರಾಮಾಯಣ’ದಲ್ಲಿ ಪ್ರಾಚೀನ ಕಾಲದ ರಾವಣನ ಪಾತ್ರ ನಿರ್ವಹಿಸಿದ್ದಾರೆ. ಇವೆರಡಕ್ಕೂ ಆದ್ಯತೆ ನೀಡಿ ತನ್ನ ಪ್ರತಿಭೆಯ ಭಿನ್ನ ಮುಖವನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿದ್ದಾರೆ.

9. ಮಾತು ಕಡಿಮೆ, ಕೆಲಸ ಹೆಚ್ಚು

ಯಶ್‌ ಖಚಿತ ತಂತ್ರಗಾರಿಕೆ ಅವರ ಕೆಲಸದ ವಿಚಾರದಲ್ಲಿ ಎದ್ದುಕಾಣುತ್ತದೆ. ಮಾತಲ್ಲಿ ಹೇಳುವುದಕ್ಕಿಂತ ಸ್ಮಾರ್ಟ್‌ ವಿಧಾನದಲ್ಲಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಾಲಿವುಡ್‌ ಮ್ಯಾಗಜಿನ್‌ನಲ್ಲಿ ಬಂದಿರುವ ಬರಹ ಸಿನಿಮಾದ ಹೆಚ್ಚುಗಾರಿಕೆಯನ್ನು ಪರಿಣಾಮಕಾರಿಯಾಗಿ ಜಗತ್ತಿನ ಮುಂದಿಡುವಂತಿದೆ.

10. ಇನ್ನು ಯಶ್ ಪ್ಯಾನ್‌ ಇಂಡಿಯಾ ಅಲ್ಲ, ಪ್ಯಾನ್‌ ವರ್ಲ್ಡ್‌ ಸ್ಟಾರ್‌

ತನ್ನ ‘ಟಾಕ್ಸಿಕ್‌’ ಹಾಗೂ ‘ರಾಮಾಯಣ’ ಸಿನಿಮಾಗಳ ಮೂಲಕ ಯಶ್‌ ತಾನು ಪ್ಯಾನ್‌ ಇಂಡಿಯಾ ಅಲ್ಲ, ಪ್ಯಾನ್‌ ವರ್ಲ್ಡ್‌ ಲೆವಲ್‌ನಲ್ಲಿ ಮಿಂಚುವ ಐಕಾನ್‌ ಅನ್ನುವುದನ್ನು ಸಾಬೀತು ಮಾಡಲು ಹೊರಟಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನು ಆ ಚಿತ್ರಕ್ಕೆ ಕರೆಕ್ಟ್ ಆಯ್ಕೆ ಅಲ್ಲ ಅನ್ನಿಸಿತ್ತು: ನಟಿ ಸಾಯಿ ಪಲ್ಲವಿ ಹೀಗಾ ಹೇಳೋದು!
Nandagokula Serial: ಪಿನ್‌ ಇಟ್ಟು ತಂದಿಡ್ತಿದ್ದ ಪ್ರಿಯಾಗೆ, ಕತ್ತಿಯೇಟು ಕೊಟ್ಟ ಅತ್ತೆ ಗಿರಿಜಾ!