ಭಾರತಕ್ಕೆ ಒಂದು ವರ್ಶನ್, ವಿದೇಶಕ್ಕೆ ಇನ್ನೊಂದು? ಯಶ್ 'ಟಾಕ್ಸಿಕ್' ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ

Published : Jul 03, 2026, 04:17 PM IST
Yash

ಸಾರಾಂಶ

ಟಾಕ್ಸಿಕ್‌’ ಹಾಲಿವುಡ್‌ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡು ನಿರ್ಮಾಣವಾದ ಯಶ್‌ ನಟನೆಯ ಬಹುನಿರೀಕ್ಷಿತ ಚಿತ್ರ. ಟ್ಯಾಗ್‌ಲೈನ್‌ನಲ್ಲೇ ಇದು ವಯಸ್ಕರಿಗಾಗಿ ತಯಾರಾಗಿರುವ ಚಿತ್ರ ಎಂಬ ಸೂಚನೆ ಇದೆ.

‘ಟಾಕ್ಸಿಕ್‌ : ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಹಾಲಿವುಡ್‌ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡು ನಿರ್ಮಾಣವಾದ ಯಶ್‌ ನಟನೆಯ ಬಹುನಿರೀಕ್ಷಿತ ಚಿತ್ರ. ಟ್ಯಾಗ್‌ಲೈನ್‌ನಲ್ಲೇ ಇದು ವಯಸ್ಕರಿಗಾಗಿ ತಯಾರಾಗಿರುವ ಚಿತ್ರ ಎಂಬ ಸೂಚನೆ ಇದೆ. ಅದಕ್ಕೆ ತಕ್ಕಂತೆ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟೀಸರ್‌ಗಳಲ್ಲಿ ಲೈಂಗಿಕತೆ, ಹಿಂಸೆಗೆ ಸಂಬಂಧಿಸಿದ ಗ್ಲಿಂಪ್ಸ್‌ ಹೇರಳವಾಗಿದೆ ಬಂದಿದೆ. ಇದರಿಂದ ಸಿನಿಮಾಕ್ಕೆ ಸೆನ್ಸಾರ್‌ ವೇಳೆ ಸಮಸ್ಯೆ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಏನು ಸಮಸ್ಯೆ?

ಇತ್ತೀಚೆಗೆ ಸಿಬಿಎಫ್‌ಸಿ ಸಿನಿಮಾಗೆ ಸರ್ಟಿಫಿಕೇಟ್‌ ಕೊಡುವ ವೇಳೆ ಕಠಿಣ ನಿಲುವು ತಾಳುತ್ತಿರುವುದು ಸಿನಿಮಾಪ್ರೇಮಿಗಳ ಗಮನಕ್ಕೆ ಬಂದಿದೆ. ಈಗಾಗಲೇ ಟೀಸರ್‌ನಲ್ಲಿ ರಿವೀಲ್‌ ಆದಂತೆ ‘ಟಾಕ್ಸಿಕ್‌’ನಲ್ಲಿ ಹಿಂಸೆ, ಲೈಂಗಿಕತೆಗೆ ಸಂಬಂಧಿಸಿದ ಅನೇಕ ದೃಶ್ಯಗಳಿರುವ ಸಾಧ್ಯತೆ ಇದ್ದು, ಇವುಗಳಲ್ಲಿ ಕೆಲವಕ್ಕಾದರೂ ಸೆನ್ಸಾರ್‌ನಿಂದ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಇಡೀ ಸಿನಿಮಾದ ಕ್ರಾಫ್ಟ್‌ನ ಅಂದಗೆಡಬಹುದು.

ವಿದೇಶಕ್ಕೆ ಮತ್ತೊಂದು ಕಾಪಿ

ಸೆನ್ಸಾರ್‌ನಿಂದ ಇಂಥಾದ್ದೊಂದು ಸಮಸ್ಯೆ ಎದುರಾಗುವುದನ್ನು ಮೊದಲೇ ಮನಗಂಡಿರುವ ಚಿತ್ರತಂಡ ವಿದೇಶಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಪ್ರತ್ಯೇಕ ಕಾಪಿ ರೆಡಿ ಮಾಡಿ ಇಟ್ಟುಕೊಂಡಿದೆ ಎಂಬ ಮಾತು ಕೇಳಿಬಂದಿದೆ. ಇಂಗ್ಲಿಷ್‌ನಲ್ಲಿರುವ ಈ ಕಾಪಿಯಲ್ಲಿ ಹೆಚ್ಚಿನ ಲೈಂಗಿಕತೆ ಹಾಗೂ ಹಿಂಸೆಯ ದೃಶ್ಯಗಳಿವೆ ಎನ್ನಲಾಗಿದೆ. ಭಾರತೀಯ ಭಾಷೆಯ ವರ್ಶನ್‌ ಅನ್ನು ಸಿಬಿಎಫ್‌ಸಿ ನಿಯಮದಂತೇ ರಿಲೀಸ್‌ ಮಾಡಿ, ವಿದೇಶಗಳಲ್ಲಿ ಒರಿಜಿನಲ್‌ ಕಾಪಿಯನ್ನು ಬಿಡುಗಡೆ ಮಾಡುವ ಪ್ಲಾನಿಂಗ್‌ ನಡೆಯುತ್ತಿದೆ ಎನ್ನಲಾಗಿದೆ.

ಎ ಸರ್ಟಿಫಿಕೇಟ್‌ ಸಾಧ್ಯತೆ

ಈಗಾಗಲೇ ಹೊರಬಂದಿರುವ ಸಿನಿಮಾದ ದೃಶ್ಯ ನೋಡಿರುವವರು ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್‌ ಸಿಗುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಎ’ ಸರ್ಟಿಫಿಕೇಟ್‌ ಕೊಟ್ಟೂ, ಅನೇಕ ಕಡೆ ಕಟ್‌ ಮತ್ತು ಮ್ಯೂಟ್‌ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.

ಸದ್ಯ ‘ಟಾಕ್ಸಿಕ್‌’ ಸಿನಿಮಾವನ್ನು ಇನ್ನೂ ಸಿಬಿಎಫ್‌ಸಿ ಪರಿಶೀಲನೆಗೆ ನೀಡಿದಂತಿಲ್ಲ. ಸಿಬಿಎಫ್‌ಸಿ ಈ ಸಿನಿಮಾ ನೋಡಿದ ಬಳಿಕ ಅದು ಸೂಚಿಸಿದ ತಿದ್ದುಪಡಿ ಮಾಡಿ ಸಿನಿಮಾ ಬಿಡುಗಡೆ ಮಾಡುವುದು ಅಂದುಕೊಂಡಷ್ಟು ಸುಲಭದ ಪ್ರಕ್ರಿಯೆ ಅಲ್ಲ. ‘ಟಾಕ್ಸಿಕ್‌’ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್‌ ಪ್ರೊಡಕ್ಷನ್‌ ಈಗಾಗಲೇ ‘ಜನನಾಯಗನ್‌’ ಸಿನಿಮಾ ವಿಚಾರದಲ್ಲಿ ಸೆನ್ಸಾರ್‌ನಿಂದ ಸಮಸ್ಯೆ ಅನುಭವಿಸಿದ್ದು ‘ಟಾಕ್ಸಿಕ್‌’ನಲ್ಲೂ ಇದು ಮರುಕಳಿಸದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೆಲವೇ ದಿನಗಳಲ್ಲಿ ನಟಿ Mokshitha Pai 'ಜಗದ್ದಾತ್ರಿ' ಧಾರಾವಾಹಿ ಆರಂಭ; ಯಾವ ಸೀರಿಯಲ್‌ ಅಂತ್ಯ ಆಗಲಿದೆ?
Sathish Ninasam-Rachita Ram: ಸತೀಶ್-ರಚಿತಾ ಜೋಡಿಯ ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾ 'ಅಯೋಗ್ಯ 2' ರಿಲೀಸ್‌ಗೆ ಕೌಂಟ್‌ಡೌನ್!