
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ತಾಜ್ ವೆಸ್ಟೆಂಡ್'ನಲ್ಲಿ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಮದುವೆ ಆಗುತ್ತಿದ್ದಾರೆ. ಈ ಶುಭ ಘಳಿಗೆಗೆ ಹೋಟೆಲ್'ನಲ್ಲಿ ಸೋಮನಾಥಪುರ ರೀತಿಯ ದೇವಾಲಯವನ್ನು ಹೋಲುವ ಮಂಟಪ ರೆಡಿಯಾಗಿದೆ.
ಸ್ಯಾಂಡಲ್ವುಡ್ ತಾರಾಜೋಡಿ ಯಶ್ ಮತ್ತು ರಾಧಿಕಾ ಮದುವೆ ಮಧ್ಯಾಹ್ನ ನಡೆಯಲಿದೆ. ಇದಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್ ತಯಾರಾಗಿದೆ. ಸೋಮನಾಥಪುರದ ಟೆಂಪಲ್ ರೀತಿ ಸೆಟ್ ಹಾಕಿದ್ದು ಶಿವ-ಪಾರ್ವತಿ ಮೂರ್ತಿಗಳ ಮುಂದೆ ಸಪ್ತಪದಿ ತುಳಿಯಲಿದ್ದಾರೆ.
ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು
ಬೆಳಗ್ಗೆಯಿಂದಲೇ ತಾಜ್ ಹೋಟೆಲ್'ನಲ್ಲಿ ವಿವಾಹ ಸಂಬಂಧಿ ಕಾರ್ಯಕ್ರಮಗಳು ನಡೆಯಲಿದೆ. 12.10 ರ ಶುಭ ಮುಹೂರ್ತದಲ್ಲಿ ಯಶ್ ಮತ್ತು ರಾಧಿಕಾ ಸತಿ-ಪತಿ ಆಗಲಿದ್ದಾರೆ. ಗುರು ಹಿರಿಯರು ಮತ್ತು ಆಪ್ತರು ಹಾಗೇನೆ, ಸಿನಿರಂಗದ ಸಮ್ಮಖದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.
ಅರಮನೆ ಮೈದಾನದಲ್ಲಿ ಆರತಕ್ಷತೆ
ಇನ್ನು ನಾಳೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಇಂಡಸ್ಟ್ರೀಗೆ ಆಹ್ವಾನ ಕೊಡಲಾಗಿದೆ. ಅಭಿಮಾನಿಗಳು ಮತ್ತು ಗೆಳೆಯರಿಗಾಗಿ ಡಿಸೆಂಬರ್-11 ರಂದು ತ್ರಿಪುರ ವಾಸಿನಿಯಲ್ಲಿಯೇ ಮತ್ತೊಮ್ಮೆ ರೆಸೆಪ್ಷನ್ ಮಾಡಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಚಂದನವನದ ಅದ್ದೂರಿ ಕಲ್ಯಾಣಕ್ಕೆ ಯಶ್ ಮತ್ತು ರಾಧಿಕಾ ಸಾಕ್ಷಿಯಾಗ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.