
ಮುಂಬೈ(ಡಿ.08): ಸ್ಟಾಂಡಪ್ ಕಾಮಿಡಿಯನ್ ಕಪಿಲ್ ಶರ್ಮಾ ದೊಡ್ಡ ಪರದೆಗೆ ಮತ್ತೆ ಬರ್ತಿದ್ದಾರೆ. ಕಿರುತೆರೆಯಲ್ಲಿ ಕಾಮಿಡಿ ಮಾಡುತ್ತಲೇ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕಪಿಲ್ ಶರ್ಮಾ, 2015 ರಲ್ಲಿ ಕಿಸ್ ಕಿಸ್ ಕೋ ಪ್ಯಾರ್ ಕರೂ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟಿದ್ದರು. ಆದರೆ, ಈ ಚಿತ್ರದಲ್ಲಿ ಅಂತಹ ಗೆಲುವು ಸಿಗಲಿಲ್ಲ.
ಈಗ ಫಿರಂಗಿ (‘Firangi’) ಹೆಸರಿನ ಪಂಜಾಬಿ ಚಿತ್ರವನ್ನ ಮಾಡುತ್ತಿದ್ದಾರೆ. ಕಪಿಲ್ ಸ್ನೇಹಿತ ರಾಜೀವ್ ಧಿಂಗ್ರಾ (Rajiv Dhingra)ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.ಕಪಿಲ್ ಇಲ್ಲೂ ಕಾಮಿಡಿಯನ್ನೇ ಮಾಡಲಿದ್ದಾರೆ. ಅಜಯ್ ದೇವಗನ್ ಅಭಿನಯದ ದೃಶ್ಯಂ ಚಿತ್ರದಲ್ಲಿ ಮಗಳ ಪಾತ್ರ ಮಾಡಿದ್ದ ಇಷಿತಾ ದತ್ತಾ ಈ ಚಿತ್ರದಲ್ಲಿ ಕಪಿಲ್ ಗೆ ಜೋಡಿಯಾಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.