
ನವದೆಹಲಿ[ಏ.01]: ಹಿಂದಿ ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಹರ್ಯಾಣದಲ್ಲಷ್ಟೇ ಅಲ್ಲದೇ ಭೋಜ್ ಪುರಿ, ಪಂಜಾಬಿ ಹಾಗೂ ಬಾಲಿವುಡ್ ನ್ಲಲೂ ತಮ್ಮ ಹಾಡು ಹಾಗೂ ಡಾನ್ಸ್ಗೆ ಬಹಳ ಫೇಮಸ್ ಆಗಿದ್ದಾರೆ. ಇವರ 'ತೇರಿ ಅಖಿಯಾಂ ಕಾ ಯೋ ಕಾಜಲ್' ಎಂಬ ಹಾಡು ಕೇಳಿದರೆ ಜನರು ತಾವಾಗೇ ಸ್ಟೆಪ್ಸ್ ಹಾಕಲಾರಂಭಿಸುತ್ತಾರೆ. ಇಂತಹುದೇ ಘಟನೆಯೊಂದು ದೆಹಲಿಯ ಮಹಿಳಾ IPS ಅಧಿಕಾರಿಗಳ ಕಾರ್ಯಕ್ರಮದಲ್ಲೂ ನಡೆದಿದೆ.
ಮಾರ್ಚ್ 20ರಂದು ನೈರುತ್ಯ ದೆಹಲಿಯಲ್ಲಿ ವಿಭಿನ್ನ ಘಟನೆ ನಡೆದಿದೆ. ಇಲ್ಲಿ ಎಲ್ಲಾ ವರ್ಗದ ಮಹಿಳೆಯರಿಗಾಗಿ 'ಸುನೋ ಸಹೇಲಿ[ಕೇಳು ಸಖೀ]' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹಾಕಜರಾಗಿದ್ದ ಮಹಿಳಾ IPS ಅಧಿಕಾರಿಗಳು ವೇದಿಕೆ ಮೇಲೇರಿ ಸಪ್ನಾ ಚೌಧರಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಸಪ್ನಾರ 'ತೇರಿ ಅಖಿಯಾಂ ಕಾ ಯೋ ಕಾಜಲ್' ಹಾಡು ಬಹಳಷ್ಟು ಫೇಮಸ್ ಆಗಿದೆ. ಕಾರ್ಯಕ್ರಮದಲ್ಲಿ ಈ ಹಾಡು ಹಾಕುತ್ತಿದ್ದಂತೆಯೇ ಡಾನ್ಸ್ ಮಾಡಲಾರಂಭಿಸಿದ ಪೊಲೀಸ್ ಅಧಿಕಾರಿಗಳು ಬಳಿಕ ನಿಧಾನವಾಗಿ ವೇದಿಕೆ ಏರಿದ್ದಾರೆ. ಇದನ್ನು ನೋಡಿದ ಇತರ ಮಹಿಳೆಯರೂ ಡಾನ್ಸ್ ಮಾಡಲು ಜೊತೆಯಾಗಿದ್ದಾರೆ. ಈ ಕಾರ್ಯಕ್ರಮ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಲಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಸಪ್ನಾ ಚೌಧರಿ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಸುದ್ದಿ ಜೋತರಾಗುತ್ತಿದ್ದಂತೆಯೇ ತಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಖುದ್ದು ಸಪ್ನಾ ಚೌಧರಿಯೆ ಸ್ಪಷ್ಟನೆ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.