‘ಕುರುಕ್ಷೇತ್ರ’ದಲ್ಲಿ ಪಾತ್ರ ಮಾಡಿದ ದರ್ಶನ್‌ಗೆ ಮಹಾಭಾರತ ಬರೆದವರೇ ಗೊತ್ತಿಲ್ಲ!

Published : Aug 05, 2019, 03:33 PM IST
‘ಕುರುಕ್ಷೇತ್ರ’ದಲ್ಲಿ ಪಾತ್ರ ಮಾಡಿದ ದರ್ಶನ್‌ಗೆ ಮಹಾಭಾರತ ಬರೆದವರೇ ಗೊತ್ತಿಲ್ಲ!

ಸಾರಾಂಶ

  ಧುರ್ಯೋದನ ಪಾತ್ರದಲ್ಲಿ ಮಿಂಚಿದ ದರ್ಶನ್ ಕುರುಕ್ಷೇತ್ರ ಪ್ರಚಾರದ ವೇಳೆ ಕೊಟ್ಟ ತಪ್ಪು ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಕೌರವಾಧಿಪತಿ ಧುರ್ಯೋದನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರೀಕರಣದ ಆರಂಭದಿಂದಲೂ ಭರ್ಜರಿ ಸೌಂಡ್‌ ಮಾಡುತ್ತಿದ್ದು ಒಂದಾದ ಮೇಲೊಂದು ವಿವಾದಕ್ಕೆ ಗುರಿಯಾಗುತ್ತಿದೆ.

 

ಕುರುಕ್ಷೇತ್ರ ಪ್ರೆಸ್‌ ಮೀಟ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡುವಾಗ 'ಕುರುಕ್ಷೇತ್ರ ನಡೆದಿರೋದು ಬೇರೆ, ನಾವೆಲ್ಲಾ ನೋಡಿ ತಿಳಿದುಕೊಂಡಿದ್ದು ಬೇರೆ, ಕೇಳಿ, ಓದು ತಿಳಿದುಕೊಂಡಿರುವುದು ಬೇರೆ. ಗಧಾಯುದ್ಧನೇ ಒಂದು ಭಾಗ ಇದೆ. ಕುರುಕ್ಷೇತ್ರಕ್ಕೆ ಬೇರೆ ಬೇರೆ ಆಯಾಮಗಳಿವೆ. ವಾಲ್ಮೀಕಿ ಬರೆದಿರೋದೆ ಒಂದು ರೀತಿ. ಹಾಗಾಗಿ ಮಹಾಭಾರತ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರ ವಹಿಸಬೇಕು' ಎಂದು ಹೇಳಿದರು. ದರ್ಶನ್ ಈ ಹೇಳಿಕೆ ಟ್ರೋಲ್ ಹೈಕಳಿಗೆ ಆಹಾರವಾಗಿದೆ.

ಕಿಚ್ಚನ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ದರ್ಶನ್ ಗರಂ!

ರಾಮಾಯಣ ಬರೆದಿರೋದು ವಾಲ್ಮೀಕಿ. ಮಹಾಭಾರತ ಬರೆದಿರುವುದು ವ್ಯಾಸ. ಆದರೆ ದರ್ಶನ್ ಮಹಾಭಾರತ ಬರೆದಿರುವುದು ವಾಲ್ಮೀಕಿ ಎಂದು ಮಾತಿನ ಭರದಲ್ಲಿ ಹೇಳಿದ್ದೇ ಹೇಳಿದ್ದು ಟ್ರೋಲ್ ಆಗುತ್ತಿದೆ. ಕೆಲವೊಮ್ಮೆ ಸ್ಟಾರ್ ನಟರು ತಪ್ಪು ಮಾಡೋದು ಸಹಜ ಬಿಡಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕುಟುಂಬದೊಂದಿಗೆ ರಣಬೀರ್-ಆಲಿಯಾ ಕ್ರಿಸ್‌ಮಸ್ ಸಂಭ್ರಮ: ಫ್ಯಾನ್ಸ್ ಮನಗೆದ್ದ ಆ ಕ್ಯೂಟ್ ಫೋಟೋಗಳು ಇಲ್ಲಿವೆ!
Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ