Vihaan Kaushal: ಕತ್ರಿನಾ ಕೈಫ್-ವಿಕ್ಕಿ ಮಗ ವಿಹಾನ್ ಯಾರ ರೀತಿ ಕಾಣ್ತಾನೆ? ಮೊಮ್ಮಗನ ಬಗ್ಗೆ ಅಜ್ಜ ಹೇಳಿದ್ದೇನು?

Published : Jun 24, 2026, 07:30 PM IST
Katrina Kaif

ಸಾರಾಂಶ

Vihaan Kaushal: ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಪುತ್ರ ವಿಹಾನ್ ಕೌಶಲ್ ಬಗ್ಗೆ ಮೊದಲ ಬಾರಿಗೆ ಶ್ಯಾಮ್ ಕೌಶಲ್ ಮಾತನಾಡಿದ್ದಾರೆ. ಮೊಮ್ಮಗ ತಮ್ಮ ಜೀವನವನ್ನು ಬದಲಾಯಿಸಿದ್ದಾನೆ.

ಬಾಲಿವುಡ್‌ನ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮುದ್ದಿನ ಮಗ ವಿಹಾನ್ ಕೌಶಲ್ ಜೊತೆಗಿನ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಪುಟಾಣಿ ವಿಹಾನ್ ನೋಡಲು ಯಾರ ರೀತಿ ಇದ್ದಾನೆ ಗೊತ್ತಾ? ಈ ಪ್ರಶ್ನೆಗೆ ಮಗುವಿನ ಅಜ್ಜ ಶ್ಯಾಮ್ ಕೌಶಲ್ ಉತ್ತರ ನೀಡಿದ್ದಾರೆ!

ಮಗು ಹುಟ್ಟಿದ ಮೇಲೆ ಹೆಣ್ಣಿನ ಜೀವನವೇ ಬದಲಾಗುತ್ತೆ ಅಂತಾರೆ. ಈ ಮಾತು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೂ ಅನ್ವಯಿಸುತ್ತೆ. ಹೌದು, ದೇಶದ ಅತಿ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಕತ್ರಿನಾ, ಪತಿ-ನಟ ವಿಕ್ಕಿ ಕೌಶಲ್ ಜೊತೆ ತಮ್ಮ ಮೊದಲ ಮಗು ವಿಹಾನ್ ಕೌಶಲ್‌ನನ್ನು ಬರಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ತಮ್ಮ ಜೀವನದ ಅತ್ಯುತ್ತಮ ಹಂತದಲ್ಲಿದ್ದು, ಪ್ರತಿ ಕ್ಷಣವನ್ನೂ ಸಂಭ್ರಮಿಸುತ್ತಿದ್ದಾರೆ.

ವಿಹಾನ್ ನೋಡಲು ಯಾರ ಹಾಗೆ ಇದ್ದಾನೆ?

ಕತ್ರಿನಾ ಮತ್ತು ವಿಕ್ಕಿ ತಮ್ಮ ಮಗನ ಮುಖವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಮಗನ ತುಣುಕುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ವಿಕ್ಕಿ ತಂದೆ ಮತ್ತು ಖ್ಯಾತ ಸಾಹಸ ನಿರ್ದೇಶಕ ಶ್ಯಾಮ್ ಕೌಶಲ್, ಮಗು ವಿಕ್ಕಿ ರೀತಿ ಕಾಣುತ್ತಾನೋ ಅಥವಾ ಕತ್ರಿನಾ ರೀತಿ ಕಾಣುತ್ತಾನೋ ಎಂಬುದನ್ನು ರಿವೀಲ್ ಮಾಡಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, "ಅವನು ನನ್ನ ಜೀವನವನ್ನೇ ಬದಲಾಯಿಸಿದ್ದಾನೆ. ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಅವನನ್ನು ನೇರವಾಗಿ ತಬ್ಬಿಕೊಳ್ಳಲು ಆಗದಿದ್ದರೆ, ಒಂದೆರಡು ಬಾರಿ ವಿಡಿಯೋ ಕಾಲ್ ಮಾಡಿ ಮಾತನಾಡುತ್ತೇನೆ. ಅವನು ತುಂಬಾ ಮುದ್ದಾಗಿದ್ದಾನೆ. ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು," ಎಂದಿದ್ದಾರೆ.

ಸೊಸೆ ಕತ್ರಿನಾಳನ್ನು ಹೊಗಳಿದ ಶ್ಯಾಮ್

ವಿಕ್ಕಿಯ ತುಂಟ ಬಾಲ್ಯವನ್ನು ನೆನಪಿಸಿಕೊಂಡ ಅವರು, ಸೊಸೆ ಕತ್ರಿನಾಳನ್ನು ತಾಯಿಯಾಗಿ ಹೊಗಳಿದ್ದಾರೆ. "ಜಗತ್ತಿನಲ್ಲಿ ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳಿಂದ ಆಶೀರ್ವಾದ ಸಿಗುತ್ತದೆ. ನಾನೂ ಅವರಲ್ಲಿ ಒಬ್ಬ. ನಾನಿದನ್ನು ಎಂದಿಗೂ ಊಹಿಸಿರಲಿಲ್ಲ. ನನಗೆ ಇಬ್ಬರು ಅದ್ಭುತ ಮಕ್ಕಳಿದ್ದಾರೆ ಮತ್ತು ನನ್ನ ಸೊಸೆ ತುಂಬಾ ಒಳ್ಳೆಯವಳು. ದೇವರಿಗೆ ಧನ್ಯವಾದಗಳು," ಎಂದು ಅವರು ಹೇಳಿದ್ದಾರೆ.

ಕತ್ರಿನಾ-ವಿಕ್ಕಿ ಮಗನ ಬಗ್ಗೆ

ವಿಕ್ಕಿ ಮತ್ತು ಕತ್ರಿನಾ 2025ರಲ್ಲಿ ತಮ್ಮ ಗಂಡು ಮಗುವನ್ನು ಬರಮಾಡಿಕೊಂಡರು. "ನಮ್ಮ ಬದುಕಿಗೆ ಖುಷಿಯ ಕಂತೆ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ, ನಮ್ಮ ಮಗನನ್ನು ಸ್ವಾಗತಿಸುತ್ತಿದ್ದೇವೆ," ಎಂದು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಜನವರಿ 7 ರಂದು, ದಂಪತಿ ತಮ್ಮ ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟರು.

ವಿಕ್ಕಿ ಕೌಶಲ್ ಮುಂದಿನ ಸಿನಿಮಾ

ಸದ್ಯ ವಿಕ್ಕಿ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ ಅಂಡ್ ವಾರ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ನಟಿಸುತ್ತಿದ್ದಾರೆ. ಆದರೆ, ಈ ಚಿತ್ರದ ಸೆಟ್‌ನಲ್ಲಿ 42 ವರ್ಷದ ಬಡಗಿ ಚಂದ್ರಧಾರಿ ಸಿಂಗ್ ಯಾದವ್ ಮೃತಪಟ್ಟ ನಂತರ ಸಿನಿಮಾ ವಿವಾದಕ್ಕೆ ಸಿಲುಕಿದೆ. ವರದಿಯ ಪ್ರಕಾರ, ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (AICWA) ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದೆ. ಸಂಜಯ್ ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ವಿಷಯದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂದು ಸಂಘ ಒತ್ತಾಯಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Hansika Motwani: ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ 'ಬಿಂದಾಸ್' ಬೆಡಗಿ ಮಾಡಿದ ಪೋಸ್ಟ್ ಏನು?
Ram Charan: ಮಗಳು ಈಗ 'ಅಪ್ಪ' ಅಂತ ಕರೆಯಲ್ಲ, ಹೀಗೆ ಅಂತಾಳೆ! ಕಾರಣ ಬಿಚ್ಚಿಟ್ಟ ರಾಮ್ ಚರಣ್