Jailer 2 ಚಿತ್ರದಲ್ಲಿ ಶಿವಣ್ಣನ 'ನರಸಿಂಹ' ಅವತಾರ ಹೇಗಿರಲಿದೆ? ಸಿಕ್ರೇಟ್ ರಿವೀಲ್ ಮಾಡಿದ ಸಾಹಸ ನಿರ್ದೇಶಕ ಚೇತನ್

Published : Oct 11, 2026, 04:05 PM IST
Shivanna in Rajinikanth starrer Jailer 2

ಸಾರಾಂಶ

ಅಕ್ಟೋಬರ್ 15ರಂದು ಬಿಡುಗಡೆಯಾಗಲಿರುವ 'ಜೈಲರ್ 2' ಚಿತ್ರದಲ್ಲಿ ರಜಿನಿಕಾಂತ್ ಮತ್ತು ಶಿವರಾಜ್‌ಕುಮಾರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶಿವಣ್ಣನ ನರಸಿಂಹ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಸ್ಟಂಟ್ ನಿರ್ದೇಶಕ ಚೇತನ್ ಡಿಸೋಜಾ ಈ ಬಗ್ಗೆ ಸುಳಿವು ನೀಡಿದ್ದಾರೆ. ಇಬ್ಬರು ಸೂಪರ್‌ಸ್ಟಾರ್‌ಗಳ ಎನರ್ಜಿ ಮತ್ತು ಗುಣಲಕ್ಷಣಗಳು ಒಂದೇ ರೀತಿ ಇವೆ ಎಂದು ಅವರು ಹೇಳಿದ್ದಾರೆ.

ಸೂಪರ್ ಸ್ಟಾರ್ ರಜಿನಿಕಾಂತ್ (Super star Rajinikanth) ಅವರ ಜೈಲರ್ 2 (Jailer 2) ಚಿತ್ರವು ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ. ರಜಿನಿ ಅಭಿಮಾನಿಗಳು ತುಂಬಾನೇ ಎಕ್ಸೈಟ್ ಆಗಿದ್ದು ದೊಡ್ಡ ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಸಿನಿಮಾ ತಂಡ ಚಿತ್ರದ ಪ್ರಮೋಷನ್‌ ಅನ್ನು ಭರ್ಜರಿಯಾಗಿ ನಡೆಸ್ತಿದೆ.

ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ಕನ್ನಡದ ಕಲಾವಿದರು ಕೂಡ ಕೆಲಸ ಮಾಡಿರೋದು. ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಇದ್ದಾರೆ. ಅಂದರೆ ಅಭಿಮಾನಿಗಳಿಗೆ ಒಂದೇ ಸಿನಿಮಾದಲ್ಲಿ ಇಬ್ಬರು ಸೂಪರ್ ಸ್ಟಾರ್‍ಗಳನ್ನ ನೋಡುವ ಅವಕಾಶ ಸಿಗಲಿದೆ. ಹಾಗಾಗಿ ಜೈಲರ್ 2ನ ಹವಾ ಕರ್ನಾಟಕದಲ್ಲೂ ಜೋರಾಗಿದೆ. ರಜಿನಿಕಾಂತ್ ಅಭಿಮಾನಿಗಳಂತೆ ಶಿವಣ್ಣನ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಜೈಲರ್‍‌ನ ಮೊದಲ ಭಾಗದಲ್ಲಿ ಶಿವಣ್ಣನ ಪಾತ್ರ ಚಿಕ್ಕದಾಗಿ ಬಂದು ಹೋಗಿತ್ತು. ಆದರೆ ಈ ಬಾರಿ ಶಿವಣ್ಣನ ಪಾತ್ರ ಹೇಗಿರಲಿದೆ ಎಂಬ ಪ್ರಶ್ನೆಗಳಿವೆ. ಕಳೆದ ಬಾರಿ ಜೈಲರ್ ನೋಡಿದ್ದ ಅಭಿಮಾನಿಗಳು ಕೊಂಚ ನಿರಾಸೆ ಮಾಡಿಕೊಂಡಿದ್ದರು. ರಜಿನಿ ಚಿತ್ರದಲ್ಲಿ ಶಿವಣ್ಣನ ನರಸಿಂಹ ಪಾತ್ರವು ಚಿತ್ರದ ಉದ್ದಕ್ಕೂ ಇರಬೇಕಿತ್ತು. ಆದರೆ ಚಿಕ್ಕದಾಗಿ ಮುಗಿದು ಹೋಗಿದೆ ಎಂದಿದ್ದರು.

ಅಭಿಮಾನಿಗಳ ಎಕ್ಸೈಟ್‌ಮೆಂಟ್‌ಗೆ ಉತ್ತರ 

ಅದೇ ಕಾರಣಕ್ಕೆ ಜೈಲರ್-2 ಸಿನಿಮಾದಲ್ಲಿ ಶಿವಣ್ಣನ ನರಸಿಂಹನ ಅವತಾರ ಕೊನೆಯವರೆಗೂ ಇರಲಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ. ರಜಿನಿಕಾಂತ್ ಮತ್ತು ಶಿವಣ್ಣನ ಕಾಂಬಿನೇಷನ್‌ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ಇದರ ಮಧ್ಯೆ ಜೈಲರ್ ಟು ಸಿನಿಮಾದಲ್ಲಿ ಸ್ಟಾರ್‍‌ ನಟರಿಗೆ ಸಹಾಸ ನಿರ್ದೇಶನ ಮಾಡಿರುವ ಕನ್ನಡಿಗ ಚೇತನ್ ಡಿಸೋಜಾ (Stunt Director Chethan D'Souza) ಅವರು ಅಭಿಮಾನಿಗಳ ಎಕ್ಸೈಟ್‌ಮೆಂಟ್ ಅನ್ನು ಹೆಚ್ಚಿಸಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನ್ನಾಡಿರುವ ಚೇತನ್ ಡಿಸೋಜಾ, ಜೈಲರ್ 2 ಸಿನಿಮಾದಲ್ಲಿ ಶಿವಣ್ಣನ ನರಸಿಂಹ ಪಾತ್ರ ಕೊನೆಯವರೆಗೆ ಇರುತ್ತದೆಯೋ? ಇರಲ್ವೋ ಎಂದು ನಾನು ಹೇಳೋಕೆ ಆಗಲ್ಲ. ರಜಿನಿಕಾಂತ್ ಹಾಗೂ ಶಿವಣ್ಣನ ಕಾಂಬಿನೇಷನ್ ಮಾತ್ರ ಸಖತ್ ಆಗಿದೆ. ಚಿತ್ರದ ಕೊನೆಯವೆರೆಗೂ ಇಂಟರೆಸ್ಟಿಂಗ್ ಉಳಿದಿಕೊಂಡು ಬರಲಿದೆ. ಶಿವಣ್ಣನ ಪಾತ್ರ ಹೇಗಿರಲಿದೆ ಅಂತಾ ನಾನು ಬಿಟ್ಟು ಕೊಟ್ಟರೆ ನಿಮಗೆ ಇಂಟರೆಸ್ಟಿಂಗ್ ಕಡಿಮೆ ಆಗಲಿದೆ. ನೀವು ಸಿನಿಮಾ ನೋಡಿದ್ರೆ ಅಲ್ಲಿರೋ ಮಜಾ ಗೊತ್ತಾಗಲಿದೆ. ಮೊದಲ ಅನುಭವವನ್ನು ಸಿನಿಮಾ ಮಂದಿರದಲ್ಲಿ ಬಂದು ನೋಡಿದ್ರೆಯೇ ಒಳ್ಳೆಯದು. ಅದಕ್ಕೆ ನಾವು ಟೀಸರ್ ಹಾಗೂ ಟ್ರೈಲರ್‍‌ನಲ್ಲಿ ಜಾಸ್ತಿ ವಿಚಾರವನ್ನು ಬಿಟ್ಟುಕೊಟ್ಟಿಲ್ಲ ಎಂದಿದ್ದಾರೆ.

ಇದೇ ವೇಳೆ ಶಿವಣ್ಣ ಮತ್ತು ರಜಿನಿಕಾಂತ್ ನಡುವಿನ ಸಿಮಿಲಾರಿಟಿ ಬಗ್ಗೆ ಚೇತನ್ ಡಿಸೋಜಾ ಮಾತನಾಡಿದ್ದಾರೆ. ಜೈಲರ್ 2 ಸಿನಿಮಾದಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಹೆಚ್ಚು ಮಾತನ್ನಾಡಲ್ಲ. ಸಿನಿಮಾ ನೋಡಿದ್ರೆನೇ ಗೊತ್ತಾಗುತ್ತದೆ. ಆದರೆ ನಾನು ಗಮನಿಸಿರಬೇಕಾದ ವಿಚಾರ ಏನೆಂದರೆ.. ನಾನು ರಜಿನಿ ಸರ್ ಬಳಿ ಏನು ನೋಡ್ತೀವೋ.. ಅದೇ ಸಿಮಿಲರ್ ವಿಷಯಗಳನ್ನ ಶಿವಣ್ಣನ ಹತ್ತಿರವೂ ಸಿಗುತ್ತದೆ. ಶಿವಣ್ಣ ಬಳಿಯೂ ಸೇಮ್ ವಿಷಯಗಳು ಸಿಗುತ್ತವೆ. ರಜಿನಿಗೆ ಇರುವ ಎನರ್ಜಿಯೇ ಶಿವಣ್ಣನ ಬಳಿಯೂ ಇದೆ. ಜನರಿಗೆ ಅವರು ಕೊಡುವ ರೆಸ್ಪೆಕ್ಟ್ ಕೂಡ ಸೇಮ್ ಇದೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ. ಕೆಲಸ ಮಾಡುವಾಗ ಬೈತಾರೆ.. ಅಲ್ಲಿ ಪ್ರೀತಿ ಇರುತ್ತದೆ. ಅದು ಪ್ರೀತಿಯಿಂದ. ಅದು ಶಿವಣ್ಣನಲ್ಲಿರುವ ಪ್ರೀತಿ. ಶಿವಣ್ಣ ಮತ್ತು ರಜಿನಿಕಾಂತ್ ಜೊತೆ ಕೆಲಸ ಮಾಡುವ ಅನುಭವವೇ ಬೇರೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಜನಿಕಾಂತ್ ‘ಜೈಲರ್ 2’ಗೆ ಇಷ್ಟೊಂದು ಡಿಮ್ಯಾಂಡಾ? ಅಡ್ವಾನ್ಸ್ ಬುಕ್ಕಿಂಗ್ ಅಂಕಿಅಂಶ ನೋಡಿ!
Suriya-Jyothika: 20 ವರ್ಷಗಳು ಬಚ್ಚಿಟ್ಟಿದ್ದ ಪತಿಯ 'ಆ ಸೀಕ್ರೆಟ್' ಹೇಳಿದ ಪತ್ನಿ ಜ್ಯೋತಿಕಾ; ಮಕ್ಕಳ ಗುಟ್ಟೂ ರಟ್ಟು!