
ಒರು ಅದಾರ್ ಲವ್ ಚಿತ್ರದ ಹಾಡಿನ ಕಣ್'ಮಿಟುಕಿಸುವ ದೃಶ್ಯದ ಮೂಲಕ ಲಕ್ಷಾಂತರ ಪಡ್ಡೆ ಹುಡುಗರ ಹೃದಯ ಕದ್ದ ಚೋರಿ ಪ್ರಿಯಾ ಪ್ರಕಾಶ್ ವಾರಿಯರ್ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇದೆ. ತಮ್ಮ ಇನ್ಸ್ಟಾ'ಗ್ರಾಮ್ ಖಾತೆಯ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪ್ರಿಯಾ ಪ್ರಕಾಶ್ ಅವರ ಸಂಕ್ಷಿಪ್ತ ಭಾವಾನುವಾದ
'ಎಲ್ಲರಿಗೂ ನಮಸ್ಕಾರ, ನಾನು ನಟಿಸಿರುವ ಒರು ಅದಾರ್ ಚಿತ್ರದ ಹಾಡಿನ ಕಣ್'ಮಿಟುಕಿಸುವ ದೃಶ್ಯಕ್ಕೆ ನಿರೀಕ್ಷಿಸದಷ್ಟು ಅಪಾರ ಬೆಂಬಲ ನೀಡಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಜ ಹೇಳಬೇಕೆಂದರೆ ನಾನು ಆ ಚಿತ್ರದ ಸಣ್ಣ ಪಾತ್ರಕಷ್ಟೆ ಆಯ್ಕೆಯಾಗಿದ್ದೆ ಆದರೆ ಅಂತಿಮವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ನನಗೆ ನಟನೆ ಮಾಡುತ್ತೇನೆಂದು ಎಂದಿಗೂ ಅಂದುಕೊಂಡಿರಲಿಲ್ಲ. ನಿರ್ದೇಶಕ ಮರ್ ಲಾಲು ಅವರು ನಟಿಸಲು ಅವಕಾಶ ನೀಡಿದರು. ಕಣ್'ಮಿಟುಕಿಸುವ ದೃಶ್ಯ ನಿರೀಕ್ಷಿಸದ ಮಟ್ಟದಲ್ಲಿ ಯಶಸ್ವಿಯಾಗಿರುವುದಕ್ಕೆ ನಿರ್ದೇಶಕರೆ ಕಾರಣ. ಛಾಯಾಚಿತ್ರಗ್ರಾಹಕ ಸೀನು ಸಿದ್ಧಾರ್ಥ, ಸಂಗೀತ ನಿರ್ದೇಶಕ ಶಾನ್ ರೆಹಮಾನ್ ಒಳಗೊಂಡಂತೆ ಎಲ್ಲ ತಂತ್ರಜ್ಞರಿಗೂ ನಾನು ಆಭಾರಿಯಾಗಿದ್ದೇನೆ.
ಸಿನಿಮದಲ್ಲಿ ಹೊಸ ಮುಖಗಳನ್ನು ಸ್ವೀಕರಿಸುವುದಕ್ಕೆ ಈ ಚಿತ್ರವೇ ಜೀವಂತ ಉದಾಹರಣೆ. ಈ ಸಂದರ್ಭದಲ್ಲಿಯೇ ನನಗೆ ಉದ್ಯಮದಿಂದ ಹಲವು ಅವಕಾಶಗಳು ಹರಿದುಬರುತ್ತಿದೆ. ಆದರೆ ಆಗಸ್ಟ್'ವರೆಗೂ ಒರು ಅದಾರ್ ಮುಗಿಯುವವರೆಗೂ ನಾನು ಯಾವುದೇ ಚಿತ್ರದಲ್ಲಿ ನಟಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ನಿರ್ದೇಶಕರು ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಬೆಳಗಿಕೆ ತರುವುದನ್ನು ಇಷ್ಟಪಡುತ್ತೇನೆ. ಎಲೆಮರೆ ಕಾಯಿಯಂತೆ ಹಲವು ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಮತ್ತೊಮ್ಮೆ ನನಗೆ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.