ಆಂಕರ್‌ ಅನುಶ್ರೀ ಅವರ ನಿಜವಾದ ಹೆಸರೇನು? ಗೋಲ್ಡನ್‌ ಸ್ಟಾರ್‌ ಗಣೇಶ್‌ ಎದುರಲ್ಲಿ ಸೀಕ್ರೆಟ್‌ ರಿವಿಲ್‌ ಮಾಡಿದ ನಿರೂಪಕಿ

Published : Nov 18, 2026, 09:52 PM IST
Kannada Anchor Anushree real name

ಸಾರಾಂಶ

ಕನ್ನಡ ಕಿರುತೆರೆಯ ಮಟ್ಟಿಗೆ ‘ಅನುಶ್ರೀ’ ಎಂಬುದು ಕೇವಲ ಮೂರಕ್ಷರದ ಹೆಸರಲ್ಲ; ಅದು ವರ್ಷಗಳ ಶ್ರಮ, ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಮನೆಮಂದಿಯ ಮುಖದಲ್ಲಿ ನಗು ತರಿಸುವ ಒಂದು ಭಾವನೆ ಮತ್ತು ದೊಡ್ಡ ಬ್ರ್ಯಾಂಡ್. ವೇದಿಕೆಯ ಮೇಲೆ ಇವರ ಹೆಸರು ಕೇಳಿದರೆ ಸಾಕು, ಟಿವಿ ಮುಂದೆ ಕುಳಿತವರಲ್ಲಿ ತಾನಾಗಿಯೇ ಉತ್ಸಾಹ ಮೂಡುತ್ತದೆ. ಕನ್ನಡಿಗರ ಬದುಕಿನ ಭಾಗವೇ ಆಗಿ ಹೋಗಿರುವ ಅನುಶ್ರೀ ನಿಜವಾದ ಹೆಸರು ಏನು ಗೊತ್ತಾ? ಇಲ್ಲಿದೆ ಆ ಅಚ್ಚರಿಯ ವಿವರ!

ಕನ್ನಡ ಕಿರುತೆರೆಯ ವೇದಿಕೆಗೆ ಕಳೆ ತರುವ ನಗುಮುಖದ ನಿರೂಪಕಿ, ತಮ್ಮ ಪಟಪಟನೆ ಮಾತಿನಿಂದಲೇ ಕರುನಾಡಿನ ಮನೆಮನಗಳನ್ನು ಗೆದ್ದಿರುವ ಜನಪ್ರಿಯ ಪ್ರತಿಭೆ ಎಂದರೆ ಅದು ಅನುಶ್ರೀ. ವೇದಿಕೆಯ ಮೇಲೆ ಇವರು ಮೈಕ್ ಹಿಡಿದು ನಿಂತರೆ ಸಾಕು, ಅಲ್ಲಿ ನಗು, ಸಂಭ್ರಮ ಮತ್ತು ಲವಲವಿಕೆ ತಾನಾಗಿಯೇ ಮನೆಮಾಡುತ್ತದೆ. ಕನ್ನಡಿಗರ ಮನೆಮಗಳಾಗಿ ಎಲ್ಲರ ಪ್ರೀತಿ ಗಳಿಸಿರುವ ಇವರನ್ನು ಇಡೀ ರಾಜ್ಯವೇ 'ಅನುಶ್ರೀ' ಎಂದು ಗುರುತಿಸುತ್ತದೆ. ಆದರೆ, ನಿರೂಪಣೆಯ ಮೂಲಕವೇ ಮನೆಮಾತಾಗಿರುವ ಇವರ ನಿಜವಾದ ಹೆಸರು ಬೇರೆಯೇ ಇದೆ ಎಂಬ ಅಚ್ಚರಿಯ ವಿಚಾರ ಇಂದು ರಿವೀಲ್ ಆಗಿದೆ!

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಬೃಂದವಿಹಾರಿ' ಸಿನಿಮಾವು ನವೆಂಬರ್ 20 ರಂದು ರಿಲೀಸ್ ಆಗ್ತಿದೆ. ಈ ಹಿನ್ನೆಲೆಯಲ್ಲಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರತಂಡದ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾತಿನ ಮಧ್ಯೆ ದೇವರ ವಿಚಾರ ಬಂದಿದೆ. ಆಗ ಗಣೇಶ್ ಅವರು ನಾನು ದೇವರನ್ನು ನಂಬುತ್ತೇನೆ. ನಾವೆಲ್ಲ ದೇವರನ್ನ ನಂಬುತ್ತೇವೆ ಅಂದುಕೊಳ್ತೀನಿ. ನಮಗೆ ಧೈರ್ಯ ಬೇಕು ಎಂದಾಗ ಆಂಜನೇಯನ್ನ ಪ್ರಾರ್ಥನೆ ಮಾಡುತ್ತೇವೆ. ವಿದ್ಯೆ ಬುದ್ಧಿಗಾಗಿ ಸರಸ್ವತಿಯನ್ನು ಬೇಡಿಕೊಳ್ಳುತ್ತೇವೆ. ದುಡ್ಡಿಗಾಗಿ ಲಕ್ಷ್ಮೀಯನ್ನ ಬೇಡುತ್ತೇವೆ. ನಮ್ಮ ಹಿರಿಯರು ಬದ್ಧಿವಂತರು. ಅದಕ್ಕೆ ಅವರು ಗ್ರಾಮದೇವತೆಯನ್ನ ಆರಾಧನೆ ಮಾಡುತ್ತಿದ್ದರು ಎಂದು ಗಣೇಶ್ ಹೇಳುತ್ತಾರೆ.

ಆಗ ಅನುಶ್ರೀ ಮಧ್ಯ ಪ್ರವೇಶ ಮಾಡಿ ಸರ್, 'ನೀವು ಧೈರ್ಯಕ್ಕೆ ಯಾರನ್ನು ಪ್ರಾರ್ಥನೆ ಮಾಡ್ತೀರಿ' ಎಂದು ಕೇಳುತ್ತಾರೆ. ಅದಕ್ಕೆ ಗಣೇಶ್ 'ಆಂಜನೇಯ' ಎನ್ನುತ್ತಾರೆ. ಮುಂದುವರಿದು 'ಲಕ್ಷ್ಮೀಗಾಗಿ' ಎಂದು ಪ್ರಶ್ನೆ ಮಾಡುತ್ತಾರೆ. ಆಗ ಗಣೇಶ್ ಅವರು 'ನಾನು ಲಲಿತಾ ಸಹಸ್ರನಾಮ ಪಠಣ ಮಾಡುತ್ತೇನೆ' ಎಂದು ಎನ್ನುತ್ತಾರೆ. ಅದಕ್ಕೆ ಅನುಶ್ರೀ ಮತ್ತಷ್ಟು ಎಕ್ಸೈಟ್ ಆಗಿ.. 'ನನಗೆ ಒಂದು ಮಂತ್ರವನ್ನು ಹೇಳಿಕೊಡಿ' ಎಂದು ಮನವಿ ಮಾಡುತ್ತಾರೆ. 'ಯಾವುದಾರೂ ಪರವಾಗಿಲ್ಲ. ನನಗೆ ಲಲಿತಾ ಸಹಸ್ರನಾಮದ ಒಂದು ಮಂತ್ರವನ್ನು ಹೇಳಿಕೊಡಿ' ಎನ್ನುತ್ತಾರೆ.

ಮುಂದುವರಿದು.. 'ದಯವಿಟ್ಟು ಹೇಳಿ. ನಾನು ಕೂಡ ದೇವಿಯ ಆರಾಧಕಿ. ಇವತ್ತು ಒಂದು ವಿಷಯವನ್ನು ಹೇಳುತ್ತಿದ್ದೇನೆ. ನನ್ನ ನಿಜವಾದ ಹೆಸರು ಅನುಶ್ರೀ ಅಲ್ಲ. ನಾನು, 'ನಮ್ಮ ತಾಯಿ ಲಲಿತಾ ಸಹಸ್ರನಾಮ ಓದಿ ಹುಟ್ಟಿರುವ ಮಗಳು'. ನನ್ನ ನಿಜವಾದ ಹೆಸರು 'ಲಲಿತಾ' ಎಂದು ನಕ್ಕಿದ್ದಾರೆ. ಆಗ ಗಣೇಶ್ ಅವರು ಅಚ್ಚರಿಯಿಂದ ಅನುಶ್ರೀಯನ್ನ ನೋಡಿದ್ದಾರೆ. ನಂತರ ಗಣೇಶ್ ಅವರು ಲಲಿತಾ ಸಹಸ್ರನಾಮದ ಮಂತ್ರನ್ನು ಹೇಳಿದ್ದಾರೆ. ಹೀಗೆ ಅವರ ಮಾತುಕತೆ ಮುಂದುವರಿದಿದೆ.

ಅನುಶ್ರೀ ಸಾಧನೆ

ಮಂಗಳೂರಿನ ಸ್ಥಳೀಯ 'ನಮ್ಮ ಟಿವಿ' ವಾಹಿನಿಯ 'ಟೆಲಿ ಅಂತ್ಯಾಕ್ಷರಿ' ಕಾರ್ಯಕ್ರಮದ ಮೂಲಕ ಸಣ್ಣ ಮಟ್ಟದಲ್ಲಿ ನಿರೂಪಣಾ ವೃತ್ತಿ ಆರಂಭಿಸಿದ ಅನುಶ್ರೀ, ಇಂದು ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ. 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಶೋ ಮೂಲಕ ಮನೆಮಾತಾದ ಅವರು, ಬಳಿಕ 'ಸರಿಗಮಪ', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ನಂತಹ ಮೆಗಾ ರಿಯಾಲಿಟಿ ಶೋಗಳು ಹಾಗೂ ಸೈಮಾ (SIIMA), ಫಿಲ್ಮ್‌ಫೇರ್‌ನಂತಹ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ನಿರೂಪಿಸಿ ಸೈ ಎನಿಸಿಕೊಂಡಿದ್ದಾರೆ. ಕೇವಲ ನಿರೂಪಣೆಗಷ್ಟೇ ಸೀಮಿತವಾಗದೆ 'ಬೆಂಕಿಪಟ್ಟಣ', 'ಉಪ್ಪು ಹುಳಿ ಖಾರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, 2011ರಲ್ಲಿ 'ಮುರಳಿ ಮೀಟ್ಸ್ ಮೀರಾ' ಚಿತ್ರದ ಕಂಠದಾನಕ್ಕಾಗಿ ಪ್ರತಿಷ್ಠಿತ 'ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ'ಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಸತತವಾಗಿ ಹಲವು 'ಝೀ ಕುಟುಂಬ ಅವಾರ್ಡ್ಸ್', 'ಕೆಂಪೇಗೌಡ ಪ್ರಶಸ್ತಿ' ಹಾಗೂ ತಮ್ಮದೇ ಯಶಸ್ವಿ ಯೂಟ್ಯೂಬ್ ಚಾನೆಲ್‌ನೊಂದಿಗೆ ಅನುಶ್ರೀ ಇಂದಿಗೂ ಕನ್ನಡಿಗರ ನೆಚ್ಚಿನ ಆಂಕರ್ ಆಗಿ ಮಿಂಚುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪ್ಪು ಸಿನಿಮಾ ಕಥೆಯಾದ ಗೌರಿಪುತ್ರ: ಮೂರೇ ದಿನಕ್ಕೆ ಡಿಕೋಡ್ ಆಯ್ತು ಸೀರಿಯಲ್ ಸ್ಟೋರಿ
'ಮತ್ತೊಮ್ಮೆ ಹುಟ್ಟಿದರೂ..' ನಯನತಾರಾಗೆ ಪತಿ ಬರೆದ ರೊಮ್ಯಾಂಟಿಕ್ ಸಾಲುಗಳು ವೈರಲ್! ಬೆನ್ನಲ್ಲೇ ಕಾಮೆಂಟ್ ಆಫ್ ಮಾಡಿ ಅಚ್ಚರಿ