ಕಪಲ್ ಗೋಲ್ಸ್ ಅಂದ್ರೆ ದೀಪಿಕಾ ಮತ್ತು ರಣವೀರ್ ಸಿಂಗ್.. ಇಬ್ಬರೂ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಇದೀಗ ರಣವೀರ್ ಬೆಳಗ್ಗೆ ಲೇಟಾಗಿ ಏಳ್ತಾರೆ ಎಂಬ ಬಗ್ಗೆ ಮಾತಾಡಿರೋ ನಟಿ ಪತಿಯ ಕಾಲೆಳೆದಿದ್ದಾರೆ.
ಕಪಲ್ ಗೋಲ್ಸ್ ಅಂದ್ರೆ ದೀಪಿಕಾ ಮತ್ತು ರಣವೀರ್ ಸಿಂಗ್.. ಇಬ್ಬರೂ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಇದೀಗ ರಣವೀರ್ ಬೆಳಗ್ಗೆ ಲೇಟಾಗಿ ಏಳ್ತಾರೆ ಎಂಬ ಬಗ್ಗೆ ಮಾತಾಡಿರೋ ನಟಿ ಪತಿಯ ಕಾಲೆಳೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ ದೀಪಿಕಾ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸೆಷನ್‌ನಲ್ಲಿ ರಣವೀರ್ ಸಿಂಗ್‌ಗೆ ದೀಪಿಕಾ ಏನಾದರೂ ಮೆಸೇಜ್ ಕಳುಹಿಸುವುದಿದ್ದರೆ ಏನದು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.
ಶಾರುಖ್ ಖಾನ್ ಜತೆ ನಟಿಸಲ್ಲ; ನಯನತಾರಾ ಕೊಟ್ಟ ಕಾರಣ ವೈರಲ್!
ಇದಕ್ಕೆ ಉತ್ತರಿಸಿದ ದೀಪಿಕಾ ರಣವೀರ್ ಬೆಳಗಿನ ತಿಂಡಿಗೆ ತಮ್ಮೊಂದಿಗಿದ್ದರೆ ಚೆನ್ನಾಗಿತ್ತು ಎಂದು ಉತ್ತರಿಸಿದ್ದಾರೆ. ನೀವು ಈಗಾಗಲೇ 35 ಸಾವಿರ ಸಲ ಅಲರಾಮ್ ಸ್ನೂಝ್ ಮಾಡಿದ್ದೀರಿ. ಕಮಾನ್.. ತಿಂಡಿ ಟೇಬಲ್‌ನಲ್ಲಿ ರೆಡಿಯಾಗಿದೆ ಎಂದು ಬರೆದಿದ್ದಾರೆ.
ನಿಮಗೆ ಬೆಳಗ್ಗಿನ ತಿಂಡಿ ಜೊತೆ ಫಿಲ್ಟರ್ ಕಾಫಿ ಬೇಕಾ ಚಹಾ ಬೇಕಾ ಎಂಬ ಪ್ರಶ್ನೆಗೆ ಎರಡೂ ಬೇಕು ಎಂದು ಉತ್ತರಿಸಿದ್ದಾರೆ. ದಕ್ಷಿಣ ಭಾರತ ಫೀಲ್ಟರ್ ಕಾಫಿ ಹಾಗೂ ಚಹಾವನ್ನು ಮಾಡುತ್ತೇನೆ. ನಾನು ಟೀ ಬಹಳ ರುಚಿಯಾಗಿ ಮಾಡ್ತೀನಿ ಎಂದಿದ್ದಾರೆ.
ಹೆಂಡ್ತಿ ಬಯ್ತಾಳಂತ ಇನ್‌ಸ್ಟಾ ಲೈವ್‌ನಿಂದ ಓಡಿದ್ರು ರಣವೀರ್ ಸಿಂಗ್..!
ಲಾಕ್‌ಡೌನ್ ನಂತ್ರ ನೀವು ಮಾಡೋ ಮೊದಲ ಕೆಲಸ ಏನು ಎಂದಿದ್ದಕ್ಕೆ ಉತ್ತರಿಸಿದ ಅವರು, ಬೆಂಗಳೂರಲ್ಲಿರೋ ಪೇರೆಂಟ್ಸ್ ಮತ್ತು ತಂಗಿಯನ್ನು ಭೇಟಿಯಾಗಬೇಕು ಎಂದಿದ್ದಾರೆ.
ಲಾಕ್‌ಡೌನ್ ನಂತರ ರಣವೀರ್ ಸಿಂಗ್ ಅವರ 83 ಹಾಗೂ ಜಯೇಶ್ ಭಾಯ್ ಜೋರ್ರಾರ್ ಸಿನಿಮಾ ಚಿತ್ರೀಕರಣ ಸ್ಥಗಿತವಾಗಿದೆ. ಕಬೀರ್ ಖಾನ್ ನಿರ್ದೇಶನದ 83 ಎಪ್ರಿಲ್‌ನಲ್ಲಿ ತೆರೆ ಕಾಣಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಬಾಕಿಯಾಗಿದೆ.