ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ಈ ವಾರ ಪ್ರೇಮಾ!

Published : May 02, 2019, 10:57 AM IST
ವೀಕೆಂಡ್‌ ವಿತ್‌ ರಮೇಶ್‌ನಲ್ಲಿ ಈ ವಾರ ಪ್ರೇಮಾ!

ಸಾರಾಂಶ

‘ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 4’ ಈ ವಾರದ ಅತಿಥಿ ಕೊಡಗಿನ ಬೆಡಗಿ ನಟಿ ಪ್ರೇಮಾ. ಸದ್ಯಕ್ಕೆ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿನ ಅವರ ಮಾತುಗಳು, ಕಾರ್ಯಕ್ರಮದ ಬಗೆಗಿನ ಕಾತರ ಹೆಚ್ಚಿವೆ.

ಶಿವರಾಜ್‌ ಕುಮಾರ್‌ ಅಭಿನಯದ ‘ಸವ್ಯಸಾಚಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ‘ಓಂ’ ಚಿತ್ರದೊಂದಿಗೆ ಯಶಸ್ಸಿನ ಓಂಕಾರ ಹಾಡಿ, ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ಪ್ರೇಮಾ, 90ರ ದಶಕದಲ್ಲಿ ಸ್ಟಾರ್‌ ನಟಿ ಎಂದೆನಿಸಿಕೊಂಡ ಖ್ಯಾತಿ ಅವರದ್ದು. ಆನಂತರ ಮದುವೆ ಆಗಿ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರೂ ಗಾಸಿಪ್‌ಗಳಲ್ಲಿ ಸುದ್ದಿ ಆಗುತ್ತಲೇ ಇದ್ದರು. ಆರೋಗ್ಯವೂ ಸೇರಿ ಖಾಸಗಿ ಬದುಕಲ್ಲಿ ಹಲವು ಏರುಪೇರು ಕಂಡರೂ ಎನ್ನುವ ಸುದ್ದಿಗಳು ಹರಿದಾಡಿದ್ದವು.

 

ಆ ಮೇಲೆ ಮತ್ತೆ ಚಿತ್ರರಂಗಕ್ಕೂ ಬಂದರು. ಅಷ್ಟಾಗಿಯೂ ಅವರು ಹೆಚ್ಚಾಗಿ ಎಲ್ಲೂ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿರಲಿಲ್ಲ. ಇದೀಗ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮಲ್ಲಿ ಅವರು ಮನ ಬಿಚ್ಚಿ ಮಾತನಾಡಿರುವುದಕ್ಕೆ ಕಾರ್ಯಕ್ರಮದ ಪ್ರೋಮೋ ಸಾಕ್ಷಿ ಆಗಿದೆ. ಅವರ ಮಾತುಗಳಿಗೆ ವೀಕೆಂಡ್‌ಗೆ ಕಾಯಲೇಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
Bigg Bossಗೆ ಬಂದ ಚೈತ್ರಾ ಕುಂದಾಪುರ, ರಜತ್​ ವಾಪಸ್​ ಹೋಗದ ಗುಟ್ಟು ರಟ್ಟಾಗೋಯ್ತು! ಕುಂಟೆಬಿಲ್ಲೆ ಆಟದಲ್ಲಿ ರಿವೀಲ್​!