ಹೆಚ್ಚುತ್ತಿದೆ 'ಮಂಕಿ ಬ್ರಾಂಚಿಂಗ್'.. ಸಂಗಾತಿ ಇದ್ದಕ್ಕಿದ್ದಂತೆ ಬದಲಾದ್ರಾ? ಗೊತ್ತಾಗದಂತೆ ನಡೆಸ್ತಾರೆ ಈ ಸೇಫ್ಟಿ ಗೇಮ್

Published : Mar 23, 2026, 02:45 PM IST
relationship tips

ಸಾರಾಂಶ

Relationship Safety Tips: ಒಂದು ಕೆಲಸ ಬಿಡುವ ಮೊದಲೇ ಮತ್ತೊಂದು ಕೆಲಸದ 'ಆಫರ್ ಲೆಟರ್' ಕೈಯಲ್ಲಿರಲಿ ಎಂದು ಬಯಸುವ ಜಾಣ್ಮೆ ಪ್ರೇಮದಲ್ಲಿ ನಡೆದರೆ ಹೇಗಿರುತ್ತೆ? ಅದನ್ನೇ 'ಮಂಕಿ ಬ್ರಾಂಚಿಂಗ್' ಎನ್ನುತ್ತಾರೆ.

ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಉದ್ಯೋಗದಲ್ಲಿ ಇರುವಾಗಲೇ, ಸುರಕ್ಷತೆಗಾಗಿ ಅಥವಾ ಉತ್ತಮ ಅವಕಾಶಕ್ಕಾಗಿ ಮತ್ತೊಂದು ಕೆಲಸವನ್ನು ಹುಡುಕುವುದು ಸಾಮಾನ್ಯ. ವೃತ್ತಿಜೀವನದಲ್ಲಿ ಬೆಳೆಯಲು ಅಥವಾ ಈಗಿನ ಕೆಲಸ ಇಷ್ಟವಾಗದಿದ್ದಾಗ ಜನರು ಹೀಗೆ ಮಾಡುತ್ತಾರೆ. ಉದ್ಯೋಗದ ವಿಷಯದಲ್ಲಿ ಇದು ಸರಿ ಇರಬಹುದು, ಆದರೆ ಈ 'ಬ್ಯಾಕಪ್' ಟ್ರೆಂಡ್ ಈಗ ಡೇಟಿಂಗ್ ಮತ್ತು ಪ್ರೇಮದ ಜಗತ್ತಿಗೂ ಲಗ್ಗೆ ಇಟ್ಟಿದೆ. ಇದನ್ನೇ ಮನೋವಿಜ್ಞಾನದ ಭಾಷೆಯಲ್ಲಿ 'ಮಂಕಿ ಬ್ರಾಂಚಿಂಗ್' (Monkey Branching) ಎಂದು ಕರೆಯಲಾಗುತ್ತಿದೆ.

ಏನಿದು ಮಂಕಿ ಬ್ರಾಂಚಿಂಗ್?

ಕೋತಿಗಳು ಒಂದು ಕೊಂಬೆಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಮತ್ತೊಂದು ಕೊಂಬೆ ಸಿಕ್ಕ ನಂತರವೇ ಮೊದಲಿನದನ್ನು ಬಿಡುತ್ತವೆ ಅಲ್ಲವೇ? ಪ್ರೇಮದಲ್ಲೂ ಕೆಲವರು ಇದನ್ನೇ ಅನುಸರಿಸುತ್ತಿದ್ದಾರೆ. ಅಂದರೆ, ಪ್ರಸ್ತುತ ಇರುವ ಸಂಬಂಧವನ್ನು ಪೂರ್ತಿಯಾಗಿ ಕಡಿದುಕೊಳ್ಳದೆ, ಒಳಗೊಳಗೇ ಮತ್ತೊಂದು ಹೊಸ ಸಂಬಂಧಕ್ಕಾಗಿ ಹುಡುಕಾಟ ನಡೆಸುವುದೇ ಈ ಮಂಕಿ ಬ್ರಾಂಚಿಂಗ್.

ಇಲ್ಲಿ ವ್ಯಕ್ತಿಯು ತನ್ನ ಸಂಗಾತಿಗೆ ಕಿಂಚಿತ್ತೂ ಅನುಮಾನ ಬರದಂತೆ ಮತ್ತೊಬ್ಬರ ಕಡೆಗೆ ಆಕರ್ಷಿತನಾಗುತ್ತಾನೆ. ಇದರಲ್ಲಿ ದೈಹಿಕ ದ್ರೋಹ ಇರಲಿಕ್ಕಿಲ್ಲ, ಆದರೆ ಭಾವನಾತ್ಮಕ ದ್ರೋಹ (Emotional Infidelity) ಖಂಡಿತ ಇರುತ್ತದೆ. ಹೊಸ ಸಂಬಂಧ ಪಕ್ಕಾ ಆಯಿತು ಎಂದಾದ ಮೇಲೆ ಮಾತ್ರ ಹಳೆಯ ಸಂಗಾತಿಗೆ ಬ್ರೇಕಪ್ ಹೇಳುತ್ತಾರೆ. ಇದು ಎದುರಿಗಿರುವ ವ್ಯಕ್ತಿಯ ನಂಬಿಕೆಯನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ ಮತ್ತು ಸಾಮಾನ್ಯ ಬ್ರೇಕಪ್‌ಗಿಂತಲೂ ಹೆಚ್ಚು ನೋವು ನೀಡುತ್ತದೆ.

ಹೀಗೆ ಮಾಡಲು ಕಾರಣಗಳೇನು?

ಪ್ರೀತಿಯಲ್ಲಿ ಇಂತಹ ಮೋಸ ಮಾಡಲು ಮುಖ್ಯ ಕಾರಣ ಅವರಲ್ಲಿರುವ ಅಭದ್ರತಾ ಭಾವನೆ.
*ಇವರಿಗೆ ಒಂಟಿಯಾಗಿ ಇರಲು ವಿಪರಿತ ಭಯವಿರುತ್ತದೆ.
*ತಮ್ಮ ಭಾವನಾತ್ಮಕ ಅಗತ್ಯಗಳಿಗಾಗಿ ಯಾವಾಗಲೂ ಮತ್ತೊಬ್ಬರ ಮೇಲೆ ಅವಲಂಬಿತರಾಗಿರುತ್ತಾರೆ.
*ಒಬ್ಬರಿಗೇ ಕಟ್ಟುಬಿದ್ದಿರಲು ಇಷ್ಟಪಡದ ಇವರು, ಯಾವಾಗಲೂ ಒಂದು 'ಬ್ಯಾಕಪ್ ಆಪ್ಷನ್' ಸಿದ್ಧವಾಗಿಟ್ಟುಕೊಳ್ಳುತ್ತಾರೆ.
*ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಡೇಟಿಂಗ್ ಎಂದರೆ ಅದು ಮದುವೆಗೆ ದಾರಿಯಾಗುತ್ತದೆ ಎಂಬ ಒತ್ತಡವಿರುತ್ತದೆ. ಹೀಗಾಗಿ ಸಂಗಾತಿಯೊಂದಿಗೆ ಹೊಂದಾಣಿಕೆಯಾಗದಿದ್ದಾಗ, ಒಂಟಿಯಾಗಲು ಇಷ್ಟವಿಲ್ಲದೆ ಏಕಕಾಲದಲ್ಲಿ ಮತ್ತೊಬ್ಬರ ಹುಡುಕಾಟ ನಡೆಸುತ್ತಾರೆ.

ಈ ದ್ರೋಹವನ್ನು ಪತ್ತೆ ಹಚ್ಚುವುದು ಹೇಗೆ?
ಮಂಕಿ ಬ್ರಾಂಚಿಂಗ್ ಮಾಡುವವರನ್ನು ಗುರುತಿಸುವುದು ಕಷ್ಟವಾದರೂ, ಈ ಕೆಳಗಿನ ಸಂಕೇತಗಳಿಂದ ಪತ್ತೆ ಹಚ್ಚಬಹುದು
*ಸಂಗಾತಿಯು ಇದ್ದಕ್ಕಿದ್ದಂತೆ ನಿಮ್ಮಿಂದ ದೂರವಾಗುತ್ತಾರೆ. ಮೊದಲಿನಂತೆ ಮನಸು ಬಿಚ್ಚಿ ಮಾತನಾಡಲ್ಲ, ನಿಮ್ಮ ಕೆಲಸಗಳಲ್ಲಿ ಆಸಕ್ತಿ ತೋರಿಸಲ್ಲ.
*ಭವಿಷ್ಯ ಅಥವಾ ಮದುವೆಯ ಪ್ರಸ್ತಾಪ ಬಂದರೆ ಮಾತನ್ನು ಬೇರೆಡೆಗೆ ತಿರುಗಿಸುತ್ತಾರೆ.
*ಅವರ ಗಮನ ಯಾವಾಗಲೂ ಬೇರೆ ಎಲ್ಲೋ ಇದ್ದಂತೆ ಇರುತ್ತದೆ.
*ಮೊಬೈಲ್ ಅನ್ನು ಅತಿಯಾಗಿ ಬಚ್ಚಿಡಲು ಪ್ರಾರಂಭಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅಥವಾ ಹೊರಗಿನ ಪ್ರಪಂಚದಲ್ಲಿ ನಿಮ್ಮೊಂದಿಗೆ ಕಾಣಿಸಿಕೊಳ್ಳಲು ಇಷ್ಟಪಡಲ್ಲ.
*ನಿಮ್ಮ ನಡುವೆ ಗಲಾಟೆಗಳಾದರೆ ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಿಲ್ಲ.

ಪ್ರೀತಿಯಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆ ಅತಿ ಮುಖ್ಯ. ಮಂಕಿ ಬ್ರಾಂಚಿಂಗ್ ಎನ್ನುವುದು ಎದುರಿನ ವ್ಯಕ್ತಿಯ ಭಾವನೆಗಳೊಂದಿಗೆ ಆಡುವ ಅಪಾಯಕಾರಿ ಆಟವಾಗಿದೆ. ಸಂಬಂಧದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಅಥವಾ ಗೌರವಯುತವಾಗಿ ಬ್ರೇಕಪ್ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಬ್ಯಾಕಪ್ ಹುಡುಕುವುದು ಮಾನವೀಯತೆಯಲ್ಲ.

ಪ್ರೀತಿಯಲ್ಲಿ ನಂಬಿಕೆ ಎಷ್ಟು ಮುಖ್ಯವೋ, ಎಚ್ಚರಿಕೆ ಕೂಡ ಅಷ್ಟೇ ಅಗತ್ಯ. ಯಾವುದೇ ವ್ಯಕ್ತಿಯನ್ನು ಅತಿಯಾಗಿ ನಂಬುವ ಮೊದಲು ಅವರ ನಡೆ-ನುಡಿಗಳ ಮೇಲೆ ನಿಗಾ ಇರಿಸಿ. ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ಅತಿಯಾದ ಬದಲಾವಣೆ ಕಂಡುಬಂದಾಗ ಮೊದಲು ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಅನುಮಾನಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವ ಬದಲು 'ಕ್ಲಾರಿಟಿ' ಪಡೆದುಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧುರಂಧರ್' ಚಿತ್ರವು 2 ಭಾಗಗಳಾಗಿ ಮೂಡಿಬಂದಿದ್ದರ ಹಿಂದಿದೆ ಅಚ್ಚರಿಯ ರಹಸ್ಯ! ಗುಟ್ಟು ಬಿಟ್ಟುಕೊಟ್ಟ ನಿರ್ದೇಶಕ ಆದಿತ್ಯ ಧರ್
ಜೀವನದಲ್ಲಿ ಫೋಕಸ್ಡ್ ಆಗಿರಬೇಕು ಅಂದ್ರೆ ಈ ಪುಸ್ತಕಗಳನ್ನ ಓದಿ