‘ಪಿಎಂ ಮೋದಿ’ ಗಳಿಕೆಯೆಷ್ಟು ಗೊತ್ತಾ?

Published : May 27, 2019, 12:00 PM ISTUpdated : May 27, 2019, 12:04 PM IST
‘ಪಿಎಂ ಮೋದಿ’ ಗಳಿಕೆಯೆಷ್ಟು ಗೊತ್ತಾ?

ಸಾರಾಂಶ

ಪಿಎಂ ನರೇಂದ್ರ ಮೋದಿ ರಿಲೀಸ್ | 2 ದಿನದಲ್ಲಿ ಬಾಕ್ಸಾಫೀಸ್ ಕಲಕ್ಷನ್ 6.68 ಕೋಟಿ | ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

ಅಂತೂ ಇಂತೂ ವಿವಾದಗಳಿಂದ ಹೊರಬಂದು ಒಮಂಗ್ ಕುಮಾರ್ ಅವರ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮೇ 24 ರಂದು ರಿಲೀಸ್ ಆಗಿದೆ. 

ಬಿಡುಗಡೆಯಾದ ಎರಡು ದಿನದಲ್ಲಿ ’ಪಿಎಂ ಮೋದಿ’ ಮಾಡಿದ ಗಳಿಕೆ ಬರೋಬ್ಬರಿ 6.64 ಕೋಟಿ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಈ ಸಿನಿಮಾ ಕಡೆ ಜನರಿಗೆ ಕುತೂಹಲ ಹೆಚ್ಚಾಗಿದೆ. ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 

ರಶ್ಮಿಕಾ ಮಂದಣ್ಣ ಸಕ್ಸಸ್ ಏರುತ್ತಿದ್ದಂತೆ ಸಂಭಾವನೆಯೂ ಏರುತ್ತಿದೆ!

ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಅಮಿತ್ ಶಾ ಪಾತ್ರದಲ್ಲಿ ಮನೋಜ್ ಜೋಷಿ, ಮೋದಿ ತಂದೆಯಾಗಿ ರಾಜೇಂದ್ರ ಗುಪ್ತಾ, ಝರೀನಾ ವಾಹಬ್ ಮೋದಿ ತಾಯಿಯಾಗಿ, ಬಿಷತ್ ಸೇನ್ ಗುಪ್ತಾ ಮೋದಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಮೋದಿ ಬಾಲ್ಯದಿಂದ ಹಿಡಿದು ಪ್ರಧಾನಿಯಾದವರೆಗಿನ ಜೀವನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ ಈ ಸಿನಿಮಾ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!