‘ರಾಮಾಯಣ’ ಸಂಭಾವನೆಯ ಒಂದೇ ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದ ವಿವೇಕ್ ಒಬೆರಾಯ್! 50 ಮಕ್ಕಳ ಪಾಲಿಗೆ ದೇವರಾದ ನಟ

Published : Nov 04, 2026, 04:15 PM IST
Vivek Oberoi plays Vidyutjihva in ramayana ramayana movie

ಸಾರಾಂಶ

ರಾಮಾಯಣ ಸಿನಿಮಾದಲ್ಲಿ ನಟಿಸಿರುವ ಹೀರೋ ಹೀರೋಯಿನ್‌ಗಳು ಪಡೆದ ಸಂಭಾವನೆ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಚಿತ್ರದಲ್ಲಿ ರಾಕ್ಷಸನ ಪಾತ್ರ ಮಾಡಿರುವ ವಿವೇಕ್ ಒಬೇರಾಯ್, ಒಂದೇ ಒಂದು ರೂಪಾಯಿ ಹಣವನ್ನ ಸ್ವಂತಕ್ಕೆ ಪಡೆದಿಲ್ಲ. ಬದಲಾಗಿ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ?

ಯಶ್ ಹಾಗೂ ರಣಬೀರ್ ಕಪೂರ್ ನಟನೆಯ ರಾಮಾಯಣ ಸಿನಿಮಾದ ಮೊದಲ ಭಾಗವು ನಾಳೆ ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಜೊತೆಗೆ ರಾಮಾಯಣ ಫೀವರ್ ಜೋರಾಗಿದೆ. ಇದರ ಮಧ್ಯೆ ರಾಮಾಯಣದಲ್ಲಿ ನಟಿಸಿರುವ ವಿವೇಕ್ ಒಬೆರಾಯ್ ಸಂಭಾವನೆ ಕುರಿತಾಗಿ ಆಡಿರುವ ಮಾತು ಎಲ್ಲರ ಮನ ಗೆಲ್ಲುತ್ತಿದೆ.

ಏನು ಹೇಳಿದ್ದಾರೆ ವಿವೇಕ್ ಒಬೆರಾಯ್?

ನಾನು ಚಿತ್ರದ ನಿರ್ಮಾಪಕ ನಮಿತ್ ಅವರಿಗೆ ನೇರವಾಗಿ ಹೇಳಿದೆ. ನನಗೆ ಈ ಸಿನಿಮಾಗಾಗಿ ಒಂದು ನಯಾಪೈಸೆಯೂ ಬೇಡ. ನಾನು ಮನಸಾರೆ ನಂಬಿರುವ ಒಂದು ಒಳ್ಳೆಯ ಕೆಲಸಕ್ಕಾಗಿ. ಅಂದರೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಮಕ್ಕಳ ಚಿಕಿತ್ಸೆಗೆ ಈ ಸಂಪೂರ್ಣ ಸಂಭಾವನೆ ದಾನ ಮಾಡಲು ಬಯಸುತ್ತೇನೆ.

ಅಷ್ಟೇ ಅಲ್ಲ, ಅವರಿಗೆ ನಾನು ಹೇಳಿದೆ. ನೀವು ಮಾಡುತ್ತಿರುವ ಈ ಅದ್ಭುತ ಕೆಲಸ ನನಗೆ ತುಂಬಾ ಇಷ್ಟವಾಗಿದೆ. ಅದಕ್ಕಾಗಿಯೇ ನಾನು ನಿಮಗೆ ಬೆಂಬಲವಾಗಿ ನಿಲ್ಲಲು ಬಯಸುತ್ತೇನೆ. ಈ ಸಿನಿಮಾ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡುತ್ತದೆ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ವಿವೇಕ್ ಒಬೆರಾಯ್ ಹೇಳಿದ್ದಾರೆ.

ಅಂದ್ಹಾಗೆ ವಿವೇಕ್ ಒಬೇರಾಯ್ ಈಗ ಈ ಮಾತನ್ನು ಹೇಳಿದ್ದಲ್ಲ. 2025 ರಲ್ಲಿಯೇ ತಮ್ಮ ನಿರ್ಧಾರ ಪ್ರಕಟಿಸಿದರು. ತಮಗೆ ಬರುವ ಹಣವನ್ನು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮಕ್ಕಳ ಬೆಂಬಲಕ್ಕಾಗಿ ನನ್ನ ಸಂಪೂರ್ಣ ಸಂಭಾವನೆ ವಿನಿಯೋಗಿಸುವುದಾಗಿ ಅಂದೆಯೇ ಪ್ರತಿಜ್ಞೆ ಮಾಡಿದರು. ವಿವೇಕ್ ಒಬೇರಾಯ್ ಕೆಲವು ವರ್ಷಗಳಿಂದ ತಮ್ಮ ಮಾನವೀಯ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಅವರು 50ನೇ ವರ್ಷಕ್ಕೆ ಕಾಲಿಟ್ಟರು.

ಈ ವೇಳೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 50 ಮಕ್ಕಳ ಚಿಕಿತ್ಸೆಯ ಜವಾಬ್ದಾರಿಯನ್ನು ತೆಗೆದುಕೊಂಡರು. ಮುಂಬರುವ ಅತಿದೊಡ್ಡ ಚಿತ್ರಗಳಲ್ಲಿ ಒಂದರಿಂದ ಬಂದ ಸಂಭಾವನೆಯನ್ನು ಯುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಹಾಯವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ಕಾರಣಕ್ಕೆ ಅವರು ರಾಮಾಯಣದಿಂದ ಬರುವ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೀಡುವಂಥ ಔದಾರ್ಯ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್‍‌ ವಿರುದ್ಧ ದೊಡ್ಡ ಜಾಗೃತಿ ಮೂಡಿಸುವ ಸಂಬಂಧ ಒಂದು ಎನ್‌ಜಿಓ ಮತ್ತಷ್ಟು ವಿಸ್ತರಿಸುವ ನಿರ್ಧಾರ ಮಾಡಿದ್ದಾರೆ.

ರಾಮಾಯಣ ಸಿನಿಮಾ ಬಗ್ಗೆ

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ' ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಬರೋಬ್ಬರಿ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೂರನೇ ಭಾಗ ಬರುವ ಸುಳಿವು ಕೂಡ ಅನಧಿಕೃತವಾಗಿ ಸಿಗುತ್ತಿದೆ. ಇನ್ನು ಮೊದಲ ಭಾಗ ಬಿಡುಗಡೆಯಾಗುವ ಮೊದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದರಲ್ಲೂ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ₹100 ಕೋಟಿ ಗಡಿ ದಾಟಿದೆ. ಭಾರತೀಯ ಸಿನಿಮಾಗಳಲ್ಲಿ ಈ ರೀತಿಯ ಸಾಧನೆ ಮಾಡಿರುವ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಇದೀಗ ಆ ವಿಶೇಷ ಪಟ್ಟಿಗೆ 'ರಾಮಾಯಣ' ಕೂಡ ಸೇರ್ಪಡೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಹೂವು ಮುಡಿಸುವ ಶಾಸ್ತ್ರ: ಫೋಟೋಗಳು ವೈರಲ್​- ಮದುವೆ ಯಾವಾಗ
‘ಕಾಂತಾರ’ ಸಕ್ಸಸ್ ಬಳಿಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ: ಮನದ ನೋವು ಹಂಚಿಕೊಂಡ ಸಪ್ತಮಿ ಗೌಡ!