ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

Published : Dec 11, 2018, 01:49 PM IST
ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

ಸಾರಾಂಶ

ವೆಡ್ಡಿಂಗ್ ಆ್ಯನಿವರ್ಸರಿಯಂದು ವಿರಾಟ್ ಅಲ್ಲ, ರಣವೀರ್ ಫೋಟೋ ಶೇರ್ ಮಾಡ್ಕೊಂಡ್ರು ಅನುಷ್ಕಾ!

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ವೃತ್ತಿ ವಿಚಾರವಾಗಿ ಅದೆಷ್ಟು ಸೀರಿಯಸ್ ಆಗಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇಬ್ಬರೂ ಸೂಪರ್ ಸ್ಟಾರ್ ಗಳು ತಮ್ಮ ವೈಯುಕ್ತಿಕ ಜೀವನಕ್ಕಿಂತ ಮೊದಲು ವೃತ್ತಿ ಬದುಕಿಗೆ ಆದ್ಯತೆ ನೀಡುತ್ತಾರೆ. ಈ ವಿಚಾರಕ್ಕೆ ಅನುಷ್ಕಾ ಮಾಡಿರುವ ಪೋಸ್ಟ್ ಸಾಕ್ಷಿಯಂತಿದೆ.

ಡಿಸೆಂಬರ್ 11 ವಿರಾಟ್ ಹಾಗೂ ಅನುಷ್ಕಾರ ಮೊದಲ ವಿವಾಹ ವಾರ್ಷಿಕೋತ್ಸವ. ಆದರೆ ಅನುಷ್ಕಾ ಮಾತ್ರ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಿಸುವ ಫೋಟೋ ಶೇರ್ ಮಾಡಿಕೊಳ್ಳದೆ ತನ್ನ ಸಿನಿಮಾವೊಂದು 8 ವರ್ಷ ಪೂರೈಸುತ್ತಿರುವ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಹೌದು 2017ರ ಡಿಸೆಂಬರ್ 11 ರಂದು ಅನುಷ್ಕಾ, ವಿರಾಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯ ಫ್ಲಾರೆನ್ಸ್ನ ಬೋರ್ಗೋ ಫಿನೊಶಿಟೋ ರೆಸಾರ್ಟ್ ನಲ್ಲಿ ಈ ಜೋಡಿ ಸದ್ದಿಲ್ಲದೆ ಮದುವೆಯಾಗಿತ್ತು. ಕೇವಲ ಆತ್ಮೀಯ ಗೆಳೆಯರು ಹಾಗೂ ಕುಟುಂಬಸ್ಥರ ಉಪಸ್ಥಿತಿಯಲ್ಲಿ ವಿವಾಹವಾಗಿದ್ದ ವಿರುಷ್ಕಾ ಭಾರತಕ್ಕೆ ಮರಳಿ ಡಿಸೆಂಬರ್ 21ರಂದು ದೆಹಲಿಯ ಹೋಟೆಲ್ ತಾಜ್ ಹಾಗೂ ಡಿಸೆಂಬರ್ 27 ರಂದು ಮುಂಬೈನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ಇಟ್ಟುಕೊಂಡಿದ್ದರು.

ಆದರೀಗ ತಮ್ಮ ದಾಂಪತ್ಯ ಬದುಕಿನ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಅನುಷ್ಕಾ ಮಾತ್ರ ತಮ್ಮ ಸಿನಿಮಾ 8 ವರ್ಷ ಪೂರೈಸುತ್ತಿರುವ ಖುಷಿ ಹಂಚಿಕೊಂಡಿದ್ದಾರೆ. 2010ರಲ್ಲಿ ಅನುಷ್ಕಾರ 'ಬ್ಯಾಂಡ್ ಬಾಜಾ ಭಾರಾತ್' ಸಿನಿಮಾ ರಿಲೀಸ್ ಆಗಿತ್ತು. ಇದು ರಣವೀರ್ ಸಿಂಗ್ ನಟಿಸಿದ್ದ ಮೊದಲ ಸಿನಿಮಾ ಎಂಬುವುದು ಕೂಡಾ ಗಮನಾರ್ಹ. 

ಇತ್ತ ಅನುಷ್ಕಾರ ಪೋಸ್ಟ್ ನೋಡಿದ ಅಭಿಮಾನಿಗಳು ವಿರಾಟ್ ಜೊತೆಗಿನ ಫೋಟೋ ಶೇರ್ ಮಾಡಿಲ್ಲ ಎಂದು ಮುನಿಸುಗೊಂಡಿದ್ದಾರೆ. ಆದರೆ ತನ್ನ ಅಭಿಮಾನಿಗಳಿಗೆ ನೋವು ನೀಡದ ಅನುಷ್ಕಾ ಕೆಲವೇ ಕ್ಷಣಗಳ ಬಳಿಕ ಕಣ್ಣಿಗೆ ಹಬ್ಬ ನೀಡುವ ವಿಡಿಯೋವನ್ನು ಸೇರ್ ಮಾಡಿಕೊಂಡಿದ್ದಾಋಎ.

ಮದುವೆಯಾಗಿ ಒಂದು ವರ್ಷವಾದರೂ ಮದುವೆಯ ಒಂದೆರಡು ಫೋಟೋಗಳನ್ನು ಹೊರತುಪಡಿಸಿ ಬೇರಾವ ವಿಡಿಯೋಗಳು ಲೀಕ್ ಆಗಿರಲಿಲ್ಲ. ಆದರೀಗ ಬರೋಬ್ಬರಿ 1 ವರ್ಷದ ಬಳಿಕ ಅಭಿಮಾನಿಗಳ ಈ ಕುತೂಹಲಕ್ಕೆ ತೆರೆ ಎಳೆದಿರುವ ಬಾಲಿವುಡ್ ಬೆಡಗಿ ಅನುಷ್ಕಾ ಕೊನೆಗೂ ತಮ್ಮ ವೆಡ್ಡಿಂಗ್ ವಿಡಿಯೋ ರಿಲೀಸ್ ಮಾಡಿ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅಂಕಿತಾ ಜೊತೆ ಡಿಸೆಂಬರ್‌ನಲ್ಲಿ ಪಕ್ಕಾ ಮದುವೆ' ಎಂದಿದ್ದ ಸುಶಾಂತ್ ಸಿಂಗ್ ರಜಪೂತ್! ಆದರೆ.. ಆಮೇಲೇನಾಯ್ತು?
Shobhaa De: ಸೈಫ್ ಅಲಿ ಖಾನ್ ಚಾಕು ಇರಿತದ ಪ್ರಕರಣ; ಹಲವು ಸಂಶಯ ಹೇಳಿ ಪ್ರಶ್ನೆಗಳನ್ನು ಕೇಳಿದ ಶೋಭಾ ಡೇ!