
ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಈ ಸತ್ಯವನ್ನು ರಾಜಮೌಳಿ ಅವರೇ ಬಹಿರಂಗ ಪಡಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಯಶ್ ನನಗೆ ಕೆಜಿಎಫ್ ವಿಶುವಲ್ಸ್ ತೋರಿಸಿದ್ದರು. ನಾನೇ ಬಾಲಿವುಡ್‌ನ ಅನಿಲ್ ತಡಾನಿಗೆ ಈ ಸಿನಿಮಾ ನೋಡಿ ಅಂತ ಹೇಳಿದ್ದೆ ಎಂದಿದ್ದಾರೆ. ಅಲ್ಲದೇ ಯಶ್ ಮತ್ತು ಅವರ ತಂದೆಯನ್ನು ಭಾರಿ ಹೊಗಳಿದ್ದಾರೆ. ರಾಜಮೌಳಿ ಹೃದಯ ವೈಶಾಲ್ಯತೆಯನ್ನು ಯಶ್ ಕೊಂಡಿದ್ದಾರೆ.
ರಾಜಮೌಳಿ ಹೇಳಿದ ಮಾತುಗಳು
* ಯಶ್ ಒಬ್ಬರು ಡ್ರೈವರ್ ಮಗ ಎಂದು ಕೇಳಿ ತಿಳಿದಿದ್ದೇನೆ. ಅಂಥಾ ಹಿನ್ನೆಲೆ ಇರುವ ಯಶ್ ಈಗ ಸೂಪರ್‌ಸ್ಟಾರ್. ಈಗಲೂ ಅವರ ತಂದೆ ಡ್ರೈವರ್ ಕೆಲಸ ಮಾಡುತ್ತಿದ್ದಾರೆ ಅಂತ ಯಾರೋ ಹೇಳಿದರು. ಅವರಿಗೆ ಯಶ್ ಕೆಲಸ ಮಾಡಿದ್ದು ಸಾಕು ಎಂದು ಹೇಳಿದಾಗ ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದ್ದಾರಂತೆ. ಅವರು ನಿಜವಾದ ಸೂಪರ್‌ಸ್ಟಾರ್.
* ನಾಲ್ಕೈದು ತಿಂಗಳುಗಳ ಹಿಂದಿನ ಮಾತು. ನಾನು ಆರ್‌ಆರ್ ಆರ್ ಚಿತ್ರದ ಕತೆಯ ಚರ್ಚೆಗಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅದೇ ಹೋಟೆಲ್‌ನಲ್ಲಿ ಯಶ್ ಕೂಡ ಇದ್ದರು. ಅವರು ನನ್ನ ಬಳಿ ಬಂದು ‘ಕೆಜಿಎಫ್’ ಚಿತ್ರದ ಐದು ನಿಮಿಷದ ವಿಷ್ಯುವಲ್ಸ್ ತೋರಿಸಿದರು. ನಾನು ದೃಶ್ಯಗಳನ್ನು ನೋಡಿ ಅಚ್ಚರಿಗೊಂಡೆ. ಯಾವುದೇ ಚಿತ್ರದಿಂದ ನಕಲು ಮಾಡಿಲ್ಲ. ಫ್ರೆಶ್ ವಿಶ್ಯುವೆಲ್ಸ್. ನೇಟಿವಿಟಿಗೆ ಹತ್ತಿರವಾದ ಸಿನಿಮಾ ಅನಿಸಿತು. ಇದು ಚಿತ್ರತಂಡದ ಮೂರು ವರ್ಷಗಳ ಶ್ರಮ ಎಂದು ತಿಳಿದೆ.
* ಆಗಲೇ ನನಗೆ ಇದು ಕನ್ನಡ ಸಿನಿಮಾ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಅನಿಸಿತು. ಕೂಡಲೇ ಬಾಲಿವುಡ್‌ನ ಅನಿಲ್ ತದಾನಿಗೆ ಫೋನ್ ಮಾಡಿ ‘ಕೆಜಿಎಫ್’ ಕುರಿತು ಹೇಳಿದೆ. ಹಾಗೆ ಯಶ್ ಹಿಂದಿಗೆ ಹೋದರು. ಜತೆಗೆ ತೆಲುಗಿನ ನಿರ್ಮಾಪಕರಾದ ಶೋಭು ಯಾರ್ಲಗಡ್ಡ ಹಾಗೂ ಸಾಯಿ ಅವರಿಗೂ ಕೆಜಿಎಫ್ ಕುರಿತು ಹೇಳಿದೆ. ಹೀಗೆ ಕನ್ನಡ ಸಿನಿಮಾ ತೆಲುಗಿಗೂ ಬಂತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.