ಏನ್ರೀ ಇದು.. ರಶ್ಮಿಕಾ ಜೊತೆ ಮದುವೆ ಬಳಿಕ 10 ವರ್ಷದ ಹಿಂದಿನ 'ಆ ವ್ಯಕ್ತಿ' ನೆನಪಿಸಿಕೊಂಡ ವಿಜಯ್ ದೇವರಕೊಂಡ!

Published : Jul 31, 2026, 10:19 AM IST
Vijay Deverakonda

ಸಾರಾಂಶ

"ಇಂದಿನಿಂದ ನಾನು ಮಾಡುವ ಪ್ರತಿಯೊಂದು ಕೆಲಸವೂ ಹೃದಯದಿಂದಲೇ ಇರುತ್ತದೆ." ಸೋಲುಗಳು ಅವರನ್ನು ಬದಲಿಸಿರಬಹುದು, ಆದರೆ ಅವರಲ್ಲಿನ ಆ ಹಠ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿ ಮಾತ್ರ ಬದಲಾಗಿಲ್ಲ.. " ರಶ್ಮಿಕಾ ಮಂದಣ್ಣ ಪತಿ ವಿಜಯ್ ಹೀಗ್ ಹೇಳಿದ್ಯಾಕೆ? ಈ ಸ್ಟೋರಿ ನೋಡಿ..

Vijay Deverakonda Emotional Viral Post: ವಿಜಯ್ ದೇವರಕೊಂಡ: 'ರೌಡಿ' ಪಯಣದ ಹತ್ತು ವರ್ಷಗಳ ಹಬ್ಬ; ಸೋಲು-ಗೆಲುವಿನ ನಡುವೆ ಅರಳಿದ ಭಾವನಾತ್ಮಕ ಕಥೆ!

ತೆಲುಗು ಚಿತ್ರರಂಗದ ‘ಸೆನ್ಸೇಷನಲ್ ಸ್ಟಾರ್’, ಅಪ್ಪಟ ‘ರೌಡಿ’ ವಿಜಯ್ ದೇವರಕೊಂಡ (Vijay Deverakonda) ಈಗ ಸಂಭ್ರಮದ ಮೂಡ್‌ನಲ್ಲಿದ್ದಾರೆ. ಯಾಕೆ ಗೊತ್ತಾ? ಚಿತ್ರರಂಗಕ್ಕೆ ಅವರು ಕಾಲಿಟ್ಟು ಹತ್ತು ವರ್ಷಗಳು ಉರುಳಿವೆ. ಒಂದು ದಶಕದ ಈ ಸುದೀರ್ಘ ಪಯಣದಲ್ಲಿ ವಿಜಯ್ ಕಂಡ ಏಳು-ಬೀಳುಗಳು ಅಷ್ಟಿಷ್ಟಲ್ಲ. ಇಂದು ಅವರು ಹಂಚಿಕೊಂಡಿರುವ ಒಂದು ಭಾವನಾತ್ಮಕ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಆವತ್ತು ಆಟ ಶುರುವಾಗಿತ್ತು...

ಹತ್ತು ವರ್ಷಗಳ ಹಿಂದೆ, ಒಬ್ಬ ಸಾಮಾನ್ಯ ಯುವಕನಾಗಿ ಚಿತ್ರರಂಗಕ್ಕೆ ಬಂದ ವಿಜಯ್‌ಗೆ ಅಂದು ತಾನು ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಸ್ಟಾರ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲವೇನೋ! ವಿಜಯ್ ದೇವರಕೊಂಡ ಅಂದ್ರೆ ಕೇವಲ ಒಬ್ಬ ನಟನಲ್ಲ, ಅದೊಂದು ಎಮೋಷನ್. 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಸಿನಿಪ್ರಿಯರ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಈ ನಟ, 'ಗೀತ ಗೋವಿಂದಂ' ಮೂಲಕ ಚಾಕೊಲೇಟ್ ಬಾಯ್ ಆಗಿಯೂ ಮೋಡಿ ಮಾಡಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಅಷ್ಟಾಗಿ ಕೈ ಹಿಡಿದಿಲ್ಲ. ಆದರೂ ಅವರ ಇಮೇಜ್ ಮಾತ್ರ ಕಿಂಚಿತ್ತೂ ಕುಂದಿಲ್ಲ ಅನ್ನೋದೇ ವಿಶೇಷ.

ಭಾವುಕರಾದ ವಿಜಯ್: ಹಳೆಯ ನೆನಪುಗಳ ಮೆಲುಕು

ತಮ್ಮ ಸಿನಿ ಜರ್ನಿಯ ಬಗ್ಗೆ ಒಂದು ವೀಡಿಯೊ ಹಂಚಿಕೊಂಡಿರುವ ವಿಜಯ್, "ಬೆಳಗ್ಗೆ 7 ಗಂಟೆಯ ಚಿತ್ರೀಕರಣಕ್ಕಾಗಿ 6.30ಕ್ಕೇ ಸೆಟ್‌ನಲ್ಲಿ ಇರಬೇಕಾದ ಅನಿವಾರ್ಯತೆ ಇತ್ತು. ಆ ದಿನಗಳ ಕಷ್ಟ, ಆ ಯುವಕನ ಕನಸುಗಳು ಇಂದು ನನಗೆ ತುಂಬಾ ಹತ್ತಿರ ಅನಿಸುತ್ತಿವೆ" ಎಂದು ಬರೆದುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಭೇಟಿ ಮಾಡಿದ್ದು ನೆನಪಿಸಿಕೊಂಡರೆ ಅವರಿಗೆ ಈಗಲೂ ಮೈ ರೋಮಾಂಚನವಾಗುತ್ತದೆಯಂತೆ. "ನನ್ನ ಬಂಡಾಯ ಮನಸ್ಸಿನ ಕನಸುಗಳು ಮೂರ್ಖತನವಲ್ಲ ಎಂದು ಸಾಬೀತಾಗಿದೆ. ತೆಲುಗು ಪ್ರೇಕ್ಷಕರೇ, ನಿಮ್ಮ ಪ್ರೀತಿಗೆ ನಾನು ಚಿರಋಣಿ" ಎಂದು ಭಾವುಕರಾಗಿ ನುಡಿದಿದ್ದಾರೆ.

ಸೋಲಿನ ಕಹಿ, ಗೆಲುವಿನ ಹಂಬಲ

'ಡಿಯರ್ ಕಾಮ್ರೇಡ್' ನಂತರ ವಿಜಯ್ ಪಾಲಿಗೆ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅವರ ಮಹತ್ವಾಕಾಂಕ್ಷೆಯ 'ಹೀರೋ' ಮತ್ತು 'ಜನ ಗಣ ಮನ' ಚಿತ್ರಗಳು ಅರ್ಧಕ್ಕೇ ನಿಂತುಹೋದವು. 2024ರಲ್ಲಿ ಬಂದ 'ದಿ ಫ್ಯಾಮಿಲಿ ಸ್ಟಾರ್' ಮತ್ತು ಈ ವರ್ಷದ 'ಕಿಂಗ್‌ಡಮ್' ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು. ಇಷ್ಟೆಲ್ಲಾ ಆದರೂ ವಿಜಯ್ ಕುಗ್ಗಿಲ್ಲ. 'ಕಲ್ಕಿ 2898 ಎಡಿ' ಸಿನಿಮಾದ ಅರ್ಜುನನ ಪಾತ್ರದಲ್ಲಿ ಅವರು ನೀಡಿದ ಗೆಸ್ಟ್ ಅಪಿಯರೆನ್ಸ್ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿತ್ತು.

ಮುಂದಿದೆ ಬಿಗ್ ಪ್ಲಾನ್!

ಸದ್ಯ ವಿಜಯ್ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ರವಿ ಕಿರಣ್ ಕೋಲಾ ನಿರ್ದೇಶನದ 'ರೌಡಿ ಜನಾರ್ದನ' ಚಿತ್ರದಲ್ಲಿ ಕೀರ್ತಿ ಸುರೇಶ್ ಜೊತೆ ವಿಜಯ್ ಮಿಂಚಲಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳ ನೆಚ್ಚಿನ ಜೋಡಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮತ್ತೆ 'ರಣಬಾಲಿ' ಚಿತ್ರದ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ರೌಡಿ ಫ್ಯಾನ್ಸ್‌ಗೆ ಹಬ್ಬದಂತಿದೆ.

ಕೊನೆಯಲ್ಲಿ ವಿಜಯ್ ಒಂದು ಮಾತು ಹೇಳಿದ್ದಾರೆ- "ಇಂದಿನಿಂದ ನಾನು ಮಾಡುವ ಪ್ರತಿಯೊಂದು ಕೆಲಸವೂ ಹೃದಯದಿಂದಲೇ ಇರುತ್ತದೆ." ಸೋಲುಗಳು ಅವರನ್ನು ಬದಲಿಸಿರಬಹುದು, ಆದರೆ ಅವರಲ್ಲಿನ ಆ ಹಠ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿ ಮಾತ್ರ ಬದಲಾಗಿಲ್ಲ. ಹತ್ತು ವರ್ಷಗಳ ಈ ಸಾರ್ಥಕ ಪಯಣಕ್ಕೆ ಶುಭಾಶಯಗಳು ವಿಜಯ್! ನಿಮ್ಮ ಮುಂದಿನ ಇನ್ನಿಂಗ್ಸ್ 'ಬ್ಲಾಕ್ ಬಸ್ಟರ್' ಆಗಿರಲಿ ಎಂಬುದು ಎಲ್ಲರ ಹಾರೈಕೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾವ ಜೈಲು ಪಾಲು, ಅಳಿಯನ ಕನಸು ಮಣ್ಣು ಪಾಲು..? ದರ್ಶನ್ ಕುಟುಂಬದ ಕುಡಿ ಚಂದು ಸಿನಿಮಾ ಏನಾಯ್ತು? ಈ ಸ್ಟೋರಿ ನೋಡಿ..
ಸಂಭಾವನೆ ಕಡಿಮೆ ಮಾಡಲು ಸಿದ್ಧ ಎಂದ ಪ್ರಜ್ವಲ್ ದೇವರಾಜ್: ಆದರೆ ಈ ಷರತ್ತು ಅನಿವಾರ್ಯ!