
ನಟ ವಿಕ್ಕಿ ಕೌಶಲ್ ತಮ್ಮ ಪತ್ನಿ ಕತ್ರಿನಾ ಕೈಫ್ ಜೊತೆ ಮುಂಬೈ ಮಳೆಯನ್ನು ಆನಂದಿಸುತ್ತಿರುವ ರೊಮ್ಯಾಂಟಿಕ್ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪೋಷಕರಾದ ಈ ಜೋಡಿಯ ಈ ಫೋಟೋಗೆ "ಮಳೆ ಮತ್ತು ನೀನು" ಎಂದು ವಿಕ್ಕಿ ಕ್ಯಾಪ್ಶನ್ ನೀಡಿದ್ದಾರೆ. ಬಾಲಿವುಡ್‌ನ ಸ್ಟಾರ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಬ್ಯುಸಿ ಲೈಫ್‌ನಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಮುಂಬೈ ಮಳೆಯನ್ನು ಎಂಜಾಯ್ ಮಾಡಿದ್ದಾರೆ.
ವಿಕ್ಕಿ ತಮ್ಮ ಪತ್ನಿ ಜೊತೆಗಿನ ಒಂದು ಸುಂದರ ಕ್ಷಣದ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಬಾಲ್ಕನಿಯಲ್ಲಿ ನಿಂತು ಮಳೆ ನೋಡುತ್ತಿರುವಂತೆ ಈ ಫೋಟೋ ಇದೆ. ಫೋಟೋದಲ್ಲಿ 'ಉರಿ' ಖ್ಯಾತಿಯ ನಟ ವಿಕ್ಕಿ ಮುಂದೆ ಕುಳಿತಿದ್ದರೆ, ಕತ್ರಿನಾ ಹಿಂದಿನಿಂದ ಅವರನ್ನು ಅಪ್ಪಿಕೊಂಡು, ತಮ್ಮ ಮುಖ ಮತ್ತು ಕೈಗಳನ್ನು ವಿಕ್ಕಿ ಹೆಗಲ ಮೇಲೆ ಇಟ್ಟಿದ್ದಾರೆ. "ಮಳೆ ಮತ್ತು ನೀನು," ಎಂದು ವಿಕ್ಕಿ ಈ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ತಂದೆ-ತಾಯಿಯಾದ ಸಂಭ್ರಮ
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇತ್ತೀಚೆಗೆ ಪೋಷಕರಾದ ಸಂಭ್ರಮದಲ್ಲಿದ್ದಾರೆ. ನವೆಂಬರ್ 7, 2025 ರಂದು ಈ ಜೋಡಿಗೆ ಗಂಡು ಮಗು ಜನಿಸಿದ್ದು, ಅವನಿಗೆ ವಿಹಾನ್ ಎಂದು ಹೆಸರಿಟ್ಟಿದ್ದಾರೆ. ತಮ್ಮ "ಬದುಕಿನ ಸಂತೋಷದ ಕಂತೆ"ಯ ಆಗಮನವನ್ನು ಈ ಜೋಡಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದರು. ನಂತರ ಜನವರಿಯಲ್ಲಿ ಮಗುವಿನ ಪುಟ್ಟ ಕೈಯ ಫೋಟೋ ಹಾಕಿ, ಜಂಟಿ ಅಪ್‌ಡೇಟ್ ಮೂಲಕ ಮಗನ ಹೆಸರನ್ನು ಬಹಿರಂಗಪಡಿಸಿದ್ದರು.
ಈ ಜೋಡಿ ಸೆಪ್ಟೆಂಬರ್ 2025 ರಲ್ಲಿ ತಮ್ಮ ಪ್ರೆಗ್ನೆನ್ಸಿ ವಿಷಯವನ್ನು ಖಚಿತಪಡಿಸಿದ್ದರು. "ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಆರಂಭಿಸಲು ಹೊರಟಿದ್ದೇವೆ, ಹೃದಯದಲ್ಲಿ ಸಂತೋಷ ಮತ್ತು ಕೃತಜ್ಞತೆ ತುಂಬಿದೆ" ಎಂದು ಬರೆದುಕೊಂಡಿದ್ದರು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9, 2021 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಮದುವೆಯಾಗಿದ್ದರು.
ಸಿನಿಮಾ ವಿಚಾರಕ್ಕೆ ಬಂದರೆ, ಕತ್ರಿನಾ ಕೈಫ್ ಕೊನೆಯದಾಗಿ ವಿಜಯ್ ಸೇತುಪತಿ ಜೊತೆ 'ಮೆರ್ರಿ ಕ್ರಿಸ್‌ಮಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಡೆಲಿವರಿ ನಂತರ ಅವರು ಇನ್ನೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇತ್ತ ವಿಕ್ಕಿ ಕೌಶಲ್ 'ಲವ್ ಅಂಡ್ ವಾರ್' ಚಿತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ನಟಿಸುತ್ತಿದ್ದಾರೆ.
ಜನವರಿ 2024 ರಲ್ಲಿ ಅಧಿಕೃತವಾಗಿ ಘೋಷಣೆಯಾದ ಈ ರೊಮ್ಯಾಂಟಿಕ್ ಡ್ರಾಮಾ, ಜನವರಿ 21, 2027 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಪ್ರಾಜೆಕ್ಟ್ ಮೂಲಕ ಕೌಶಲ್ ಮೊದಲ ಬಾರಿಗೆ ಭನ್ಸಾಲಿ ಜೊತೆ ಕೆಲಸ ಮಾಡುತ್ತಿದ್ದಾರೆ. ಇದು ಭನ್ಸಾಲಿಯವರ ಅತ್ಯಂತ ಮಹತ್ವಾಕಾಂಕ್ಷೆಯ ರೊಮ್ಯಾಂಟಿಕ್ ಡ್ರಾಮಾ ಎಂದು ಹೇಳಲಾಗುತ್ತಿದೆ. 'ಸಾವರಿಯಾ' ನಂತರ ರಣಬೀರ್ ಕಪೂರ್ ಮತ್ತು 'ಗಂಗೂಬಾಯಿ ಕಾಠಿಯಾವಾಡಿ' ನಂತರ ಆಲಿಯಾ ಭಟ್ ಮತ್ತೆ ಭನ್ಸಾಲಿ ಜೊತೆ ಈ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.