ವಜ್ರಮುನಿ ಟೈಟಲ್’ಗೆ ಹೆಂಡತಿ, ಮಗನ ವಿರೋಧ

 |  First Published Jul 14, 2018, 9:51 AM IST

ಕನ್ನಡದ ಖ್ಯಾತ ಖಳನಟ ವಜ್ರಮುನಿ ಹೆಸರಲ್ಲಿ ಸಿನಿಮವೊಂದು ಬರುತ್ತಿದೆ. ಆದರೆ ಈ ಟೈಟಲ್’ಗೆ ಅವರ ಮಗ, ಪತ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ವಜ್ರಮುನಿ ಟೈಟಲ್ ವಿವಾದಕ್ಕೀಡಾಗಿದೆ. 


ಬೆಂಗಳೂರು (ಜು. 14): ಕನ್ನಡದ ಹೆಸರಾಂತ ಖಳನಟ ‘ವಜ್ರುಮುನಿ’ ಅವರ ಹೆಸರಲ್ಲೊಂದು ಸಿನಿಮಾ ಸೆಟ್ಟೇರಿದೆ. ನಿರ್ದೇಶಕ ಭರತ್ ಚಕ್ರವರ್ತಿ ನೇತೃತ್ವದ ಹೊಸಬರ ತಂಡ ಮೊನ್ನೆಯಷ್ಟೇ ಆ ಚಿತ್ರಕ್ಕೆ ಮುಹೂರ್ತವೂ ಮುಗಿಸಿದೆ.

ಆದರೆ  ಮುಹೂರ್ತ ಕಂಡ ಮೂರೇ ದಿವಸದಲ್ಲಿ ಆ ಚಿತ್ರದ ಟೈಟಲ್  ವಿವಾದಕ್ಕೆ ಸಿಲುಕಿದೆ. ವಜ್ರಮುನಿ ಹೆಸರಲ್ಲಿ ಸಿನಿಮಾ ಮಾಡಲು ನಾವು ಯಾರಿಗೂ ಅನುಮತಿ ಕೊಟ್ಟಿಲ್ಲ. ಅವರ ಹೆಸರು ಬಳಸಿಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ. ಹಾಗೇನಾದರೂ ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ವಜ್ರಮುನಿ ಪತ್ನಿ ಲಕ್ಷ್ಮೀ ಹಾಗೂ ಮಗ ಜಗದೀಶ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಜತೆಗೇ ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಲಾಗಿದೆ.

Tap to resize

Latest Videos

‘ನಮ್ಮ ಕುಟುಂಬದ ಅನುಮತಿ ಇಲ್ಲದೆ ವಜ್ರಮುನಿ ಅವರನ್ನು ಚಿತ್ರದ ಟೈಟಲ್‌ಗೆ ಬಳಸಿಕೊಳ್ಳಲಾಗಿದೆ. ಆ ಕಾರಣಕ್ಕಾಗಿ ನಮ್ಮ ತಕರಾರು. ಅದನ್ನು ಮೀರಿ ವಜ್ರುಮುನಿ ಟೈಟಲ್ ಬಳಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲೂ ಮನವಿ ಮಾಡಿದ್ದೇವೆ’ ಎಂದು ಜಗದೀಶ್ ವಜ್ರಮುನಿ ತಿಳಿಸಿದ್ದಾರೆ. 

click me!