ಟ್ರಾಫಿಕ್ ನಲ್ಲೂ ಜೋರಾಗಿದೆ ರಾಕಿ ಭಾಯ್ ಹವಾ | ಟ್ರಾಫಿಕ್ ರೂಲ್ಸ್ ಫಾಲೋ ಮಾಡಲು ಕೆಜಿಎಫ್ ಮೊರೆ ಹೋದ ಪೊಲೀಸರು | KGF ಗೂ ಟ್ರಾಫಿಕ್‌ಗೂ ಏನ್ ಸಂಬಂಧ?
ಟ್ರಾಫಿಕ್ ರೂಲ್ಸ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಷ್ಟೇ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಟ್ರಾಫಿಕ್ ಉಲ್ಲಂಘನೆ ಮಾಡುವವರಿಂದ ಬೇಸತ್ತು ಹೋಗಿರುವ ಉತ್ತರ ಪ್ರದೇಶ ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.
ರಾಕಿ ಭಾಯ್ ಕೆಜಿಎಫ್ ಹವಾ ಸೃಷ್ಟಿಸಿದ್ದು ಗೊತ್ತೇ ಇದೆ. ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಖ್ಯಾತಿ ಕೆಜಿಎಫ್ ದು. ಕೆಜಿಎಫ್ ಹೆಸರನ್ನು ಕೇಳದವರು ಬಹಳ ಕಡಿಮೆ ಎನ್ನುವಷ್ಟರ ಮಟ್ಟಿಗೆ ಜನ ಮಾನಸದಲ್ಲಿ ಹೆಸರು ಮಾಡಿದೆ. ಅದೇ ಕೆಜಿಎಫ್ ಟೈಟಲನ್ನು ಬಳಸಿಕೊಂಡು ಉತ್ತರ ಪ್ರದೇಶ ಪೊಲೀಸರು ಟ್ರಾಫಿಕ್ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಮೂಲಕವಾದರೂ ಜನ ಜಾಗೃತರಾಗುತ್ತಾರೆ ಎಂಬ ನಂಬಿಕೆ ಅವರದ್ದು.
ಕೆಜಿಎಫ್ ಹೆಸರು ಹೇಳಿದರೆ ಜನರಿಗೆ ಬೇಗ ತಲುಪುತ್ತದೆನ್ನುವ ಆಶಾವಾದದಿಂದ ಉತ್ತರ ಪ್ರದೇಶ ಪೊಲೀಸರು ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
K- Know the Rules
G - Grip Well
F- Focus