ಬೆಂಗಳೂರು ಹುಡುಗಿ ಕೈ ಸೇರಿತು 500 ಕೋಟಿ ‘ರಾಮಾಯಣ’!

Published : Aug 02, 2019, 03:07 PM IST
ಬೆಂಗಳೂರು ಹುಡುಗಿ ಕೈ ಸೇರಿತು 500 ಕೋಟಿ  ‘ರಾಮಾಯಣ’!

ಸಾರಾಂಶ

ಬಾಲಿವುಡ್ ಹೈ ಬಜೆಟ್ ಪೌರಾಣಿಕ ಸಿನಿಮಾ ‘ರಾಮಾಯಣ’ದ ಸೀತೆಯಾಗಿ ಮಿಂಚಲಿದ್ದಾಳೆ ಬೆಂಗಳೂರು ಡಿಂಪಲ್ ಹುಡುಗಿ.

ಬಾಲಿವುಡ್ ಪೌರಾಣಿಕ ಸಿನಿಮಾಗಳೆಂದರೇನೇ ಹಾಗೆ. ಗಗನ ಮುಟ್ಟುವ ಬಜೆಟ್, ಮನ ಮುಟ್ಟುವ ಕಥೆ ಹಾಗೂ ಮಿಸ್ ಮಾಡದ ಬಾಕ್ಸ್ ಆಫೀಸ್ ಕಲೆಕ್ಷನ್. ಎವರ್ ಗ್ರೀನ್ ಲಿಸ್ಟ್ ಸೇರಲು ರೆಡಿಯಾಗುತ್ತಿದೆ ‘ರಾಮಾಯಣ’.

 

ಪೌರಾಣಿಕ ಕಥನವಾದ ರಾಮಾಯಣವನ್ನು ಮೂರು ಭಾಗಗಳಲ್ಲಿ, ‘ತ್ರೀಡಿ’ ಮಾದರಿಯಲ್ಲಿ ತೆರೆಯ ಮೇಲೆ ತರಲು ತೆಲುಗು ಚಿತ್ರರಂಗದ ಘಟಾನುಘಟಿಗಳಾದ ಅಲ್ಲು ಅರವಿಂದ್‌, ಪ್ಯಾಂಟಮ್‌ ಫಿಲ್ಮ್ ಸಂಸ್ಥಾಪಕ ಮಧು ಮಂಟೆನಾ ಮತ್ತು ಪ್ರೈಂ ಫೋಕಸ್‌ ಸ್ಟುಡಿಯೋ ಸಂಸ್ಥಾಪಕ ನಮಿತ್‌ ಮಲ್ಹೋತ್ರಾ ಅಣಿಯಾಗಿದ್ದಾರೆ.

ರಾಮಾಯಣ ಕುರಿತು ಬರಲಿದೆ ಮೆಗಾ ಬಜೆಟ್ ಚಿತ್ರ

ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ದಂಗಲ್‌ ಚಿತ್ರದ ನಿರ್ದೇಶಕ ನಿತೀಶ್‌ ತಿವಾರಿ ಮತ್ತು ಮಾಮ್‌ ಚಿತ್ರದ ನಿರ್ದೇಶಕ ರವಿ ಉದ್ಯಾವರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಖ್ಯವಾಗಿ ಪಾತ್ರ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡ ಚಿತ್ರತಂಡ ರಾಮನ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡರೆ ಸೀತಾ ಪಾತ್ರದಲ್ಲಿ ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಟಾಪ್​-5 ಯಾರು? ಐಶ್ವರ್ಯ ಸಿಂಧೋಗಿ ಅಚ್ಚರಿ ಹೇಳಿಕೆ- ಅಪ್ಪಿತಪ್ಪಿಯೂ ಬರಲಿಲ್ಲ ಈ ಹೆಸರು!
ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್