ಪುಷ್ಕರಣೆಯಲ್ಲಿ ’ನಟ ಸಾರ್ವಭೌಮ’ ಚಿತ್ರೀಕರಣ ಮುಕ್ತಾಯ

First Published Jul 16, 2018, 12:48 PM IST
Highlights

ಬಾದಾಮಿ ಬಳಿಯ ಐತಿಹಾಸಿಕ ಮಹಾಕೂಟ ಕ್ಷೇತ್ರ  ಪುಷ್ಕರಣೆಯಲ್ಲಿ ನಟ ಸಾರ್ವಭೌಮ ಸೆಟ್ ಹಾಕಿದ್ದಕ್ಕೆ ಹೋರಾಟಗಾರರು ವಿರೋಧಿಸಿದ್ದರು.  ಹೋರಾಟಗಾರರ ಮನವೊಲಿಸಿದ ಬಳಿಕ  5 ಗಂಟೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. 1 ಪಿಎಸ್ ಐ, 15 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.  ನಿರಾಂತಕವಾಗಿ ಚಿತ್ರೀಕರಣ ನಡೆಯಿತು.  

ಬಾಗಲಕೋಟೆ  (ಜು. 16):  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟ ಸಾವರ್ವಭೌಮ ಚಿತ್ರವನ್ನು ಮಹಾಕೂಟದ ಪುಷ್ಕರಣೆಯಲ್ಲಿ ಚಿತ್ರೀಕರಣ ಮಾಡಲು ಅಪಸ್ವರ ಕೇಳಿ ಬಂದಿತ್ತು. ಕೊನೆಗೂ ಹೋರಾಟಗಾರರ ಮನವೊಲಿಸಿ ಪುಷ್ಕರಣೆಯಲ್ಲಿ ನಟ ಸಾರ್ವಭೌಮ ಚಿತ್ರದ  ಕ್ಲೈಮಾಕ್ಸ್ ಚಿತ್ರೀಕರಣ ಮುಕ್ತಾಯಗೊಂಡಿದೆ. 

ನಿನ್ನೆ ರಾತ್ರಿಯಿಂದ ನಸುಕಿನ ಐದು ಗಂಟೆಯವರೆಗೂ ನಡೆದ ಚಿತ್ರೀಕರಣ ನಡೆದಿದೆ.  ನಟ ಪುನೀತ್ ರಾಜ್ ಕುಮಾರ್, ರವಿಶಂಕರ್, ಹಾಗೂ ಸಹಕಲಾವಿದರು ಚಿತ್ರೀಕರಣ ದಲ್ಲಿ ಭಾಗಿಯಾಗಿದರು. 

click me!