ವೈರಲ್ ಆಯಿತು ಉದ್ಘರ್ಷ ಫಸ್ಟ್‌ಲುಕ್; ಏನಿದೆ ಅಂತದ್ದು?

Published : Aug 28, 2018, 01:50 PM ISTUpdated : Sep 09, 2018, 09:21 PM IST
ವೈರಲ್ ಆಯಿತು ಉದ್ಘರ್ಷ ಫಸ್ಟ್‌ಲುಕ್; ಏನಿದೆ ಅಂತದ್ದು?

ಸಾರಾಂಶ

ಸುನೀಲ್ ಕುಮಾರ್ ದೇಸಾಯಿಯವರ ’ಉದ್ಘರ್ಷ’  ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಿದೆ ಅಂತದ್ದು?  

ಬೆಂಗಳೂರು (ಆ. 28): ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದ ಫಸ್ಟ್ ಲುಕ್ ನೋಡಿದರೆ ದೇಸಾಯಿಯವರು ಮತ್ತೆ ಬೆಚ್ಚಿ ಬೀಳಿಸಲು ರೆಡಿಯಾಗಿರುವುದು ನಿಶ್ಚಿತ ಅನ್ನಿಸುತ್ತದೆ.

ತರ್ಕ, ನಿಷ್ಕರ್ಷದಂತಹ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿದ ದೇಸಾಯಿ ಮತ್ತೆ ತಮ್ಮ ಇಷ್ಟದ ಜಾನರ್‌ಗೆ ಮರಳಿ ಸಿನಿಮಾ ಮಾಡಿರುವುದು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಇದು ಕನ್ನಡ, ತೆಲುಗು, ತಮಿಳಿನಲ್ಲಿ ಮೂಡಿ ಬರುತ್ತಿರುವ ತ್ರಿಭಾಷಾ ಸಿನಿಮಾ. ವರಮಹಾಲಕ್ಷ್ಮೀ ಹಬ್ಬದ ಕೊಡುಗೆ ಎಂಬಂತೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಆ ಪೋಸ್ಟರ್‌ನಲ್ಲಿ ಒಂದು ಹುಡುಗಿಯ ರಕ್ತಸಿಕ್ತ ಕಾಲುಗಳಿವೆ. ಈ ಕುರಿತು, ‘ರಕ್ತಸಿಕ್ತ ಕಾಲುಗಳನ್ನು ಒಳಗೊಂಡಿರುವ ಈ ಪೋಸ್ಟರ್‌ನಲ್ಲೇ ಮೂರು ವಿಷಯಗಳಿವೆ. ಅದೇ ಸಿನಿಮಾ ಕತೆ. ರಕ್ತ, ಅರೆಬೆತ್ತಲೆ ಹುಡುಗಿ, ಬೆಡ್‌ರೂಮ್ ಇಲ್ಲಿದೆ. ಹೀಗಾಗಿ ಫಸ್ಟ್ ಲುಕ್ ಬಗ್ಗೆ ನಾನು ಹೇಳುವುದಕ್ಕಿಂತ ಜನ ಮಾತನಾಡಿಕೊಳ್ಳಬೇಕು. ಆ ಕಾರಣಕ್ಕೆ ಇಂಥ ಪೋಸ್ಟರ್ ಅನ್ನು ಹಬ್ಬಕ್ಕೇ ಅಂತಲೇ ಬಿಡುಗಡೆ ಮಾಡಿರುವುದು.

ಆ ಕಾರಣಕ್ಕೆ ಇಂಥ ಪೋಸ್ಟರ್‌ಗಳಿಂದ ಚಿತ್ರಕ್ಕೆ ಯಾವುದೇ ರೀತಿಯ ನೆಗೆಟಿವ್ ಆಗಲ್ಲ ಎಂಬುದು ನನ್ನ ನಂಬಿಕೆ’ ಎನ್ನುತ್ತಾರೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ‘ಕಬಾಲಿ’ ಚಿತ್ರದಲ್ಲಿ ರಜನಿಕಾಂತ್ ಪುತ್ರಿಯಾಗಿ ಕಾಣಿಸಿಕೊಂಡಿದ್ದ ಧನ್ಸಿಕಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತೆಲುಗಿನ ಶ್ರದ್ಧಾ ದಾಸ್ ಹಾಗೂ ಖಳನಟ ಠಾಕೂರ್ ಅನೂಪ್ ಸಿಂಗ್, ತಾನ್ಯ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ.

ಹಿಂದಿಯಲ್ಲಿ ಬೇಬಿ, ಎಮ್.ಎಸ್ ಧೋನಿ, ಗೋಲ್‌ಮಾಲ್ 3 ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಸಂಜೋಯ್ ಚೌಧರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ದೇವರಾಜ್ ಆರ್ ನಿರ್ಮಿಸುತ್ತಿದ್ದಾರೆ. ರಾಜೇಂದ್ರ ಕುಮಾರ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
ಅಮ್ಮನಿಗೆ ಇರಿಟೇಟ್‌ ಮಾಡ್ಬೇಡ, ಕೂಗ್ತಾಳೆ ಅಂತ ಮಗನಿಗೆ ದರ್ಶನ್‌ ಹೇಳ್ತಾರೆ; ಪತ್ನಿ