ಬರೋಬ್ಬರಿ 39 ವರ್ಷ BJPಗೆ ಅಂಟಿಕೊಂಡಿದ್ದ 2 ನಟರು ಇದೀಗ ವಿಜಯ್ TVKಗೆ ಜಂಪ್!

Published : Jun 14, 2026, 03:50 PM IST
Thalapathy Vijay

ಸಾರಾಂಶ

ಈಗಾಗಲೇ ಎಐಎಡಿಎಂಕೆ ಮಾಜಿ ಸಚಿವರಾದ ಕಡಂಬೂರ್ ರಾಜು ಮತ್ತು ಉಡುಮಲೈ ರಾಧಾಕೃಷ್ಣನ್ ಅವರಂತಹ ಪ್ರಭಾವಿ ನಾಯಕರು ವಿಜಯ್ ಪಕ್ಷದತ್ತ ಒಲವು ತೋರುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಿರಲಿ, ಈ ಇಬ್ಬರು ನಟರು ಯಾರು ನೋಡಿ..

ದಳಪತಿ ವಿಜಯ್ 'ಪೊಲಿಟಿಕಲ್' ಹವಾ: 39 ವರ್ಷಗಳ ಬಿಜೆಪಿ ನಂಟು ಕಡಿದುಕೊಂಡು ಟಿವಿಕೆ ಸೇರಿದ ಖ್ಯಾತ ನಟರು!

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ಈಗ ಎಲ್ಲಿ ನೋಡಿದರೂ 'ದಳಪತಿ' ವಿಜಯ್ (Vijay Joseph) ಅವರ "ತಮಿಳಗ ವೆಟ್ರಿ ಕಳಗಂ" (TVK) ಪಕ್ಷದದ್ದೇ ಚರ್ಚೆ. ಸಿನಿಮಾ ಪರದೆಯ ಮೇಲೆ ಮಿಂಚುತ್ತಿದ್ದ ವಿಜಯ್ ಈಗ ರಾಜಕೀಯದ ರಂಗಸ್ಥಳದಲ್ಲೂ ಘಟಾನುಘಟಿ ನಾಯಕರಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಇತರ ಪಕ್ಷಗಳ ಪ್ರಮುಖ ನಾಯಕರು ಹಾಗೂ ಸಿನಿಮಾ ತಾರೆಯರು ಸಾಲು ಸಾಲಾಗಿ ವಿಜಯ್ ಅವರ ಕೈ ಹಿಡಿಯುತ್ತಿದ್ದಾರೆ. ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಬರೋಬ್ಬರಿ 39 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಖ್ಯಾತ ನಟರೊಬ್ಬರು ಕಮಲ ತೊರೆದು ವಿಜಯ್ ಸೈನ್ಯ ಸೇರಿಕೊಂಡಿದ್ದಾರೆ!

39 ವರ್ಷಗಳ ನಿಷ್ಠೆಗೆ ಸಿಗದ ಬೆಲೆ: ಬಿಜೆಪಿಗೆ ಬಿಗ್ ಶಾಕ್!

ತಮಿಳು ಚಿತ್ರರಂಗದ ಖ್ಯಾತ ಪೋಷಕ ನಟ ಪಾಂಡಿ ರವಿ ಅವರು ಬಿಜೆಪಿ ತೊರೆದು ಟಿವಿಕೆ ಸೇರ್ಪಡೆಯಾಗಿರುವುದು ಈಗ ಕಾಲಿವುಡ್ ಮತ್ತು ರಾಜಕೀಯ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಪಾಂಡಿ ರವಿ ಅವರು ಸಾಮಾನ್ಯ ನಟನಲ್ಲ, 1987 ರಿಂದ ಅಂದರೆ ಕಳೆದ 39 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. "ನನ್ನನ್ನು ಪಾಂಡಿಚೇರಿಯ 10 ಲಕ್ಷ ಜನರಲ್ಲಿ 8 ಲಕ್ಷ ಜನ ಗುರುತಿಸುತ್ತಾರೆ. ಆದರೆ ಬಿಜೆಪಿ ನನ್ನ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇಷ್ಟು ವರ್ಷಗಳ ಕಾಲ ದುಡಿದರೂ ನನಗೆ ಸೂಕ್ತ ಮನ್ನಣೆ ಸಿಗಲಿಲ್ಲ" ಎಂಬ ನೋವಿನೊಂದಿಗೆ ಅವರು ಕೇಸರಿ ಪಡೆಗೆ ಗುಡ್ ಬೈ ಹೇಳಿ ವಿಜಯ್ ಸಾರಥ್ಯದ ಟಿವಿಕೆಗೆ ಜೈ ಎಂದಿದ್ದಾರೆ.

ವಿಜಯ್ ಚಿತ್ರಗಳಲ್ಲೇ ಮಿಂಚಿದ್ದ ಪಾಂಡಿ ರವಿ:

ಪಾಂಡಿ ರವಿ ಅವರು ವಿಜಯ್ ಅವರ ಆಪ್ತ ವಲಯದ ನಟ ಕೂಡ ಹೌದು. ವಿಜಯ್ ಅವರ ಬ್ಲಾಕ್‌ಬಸ್ಟರ್ ಚಿತ್ರಗಳಾದ 'ಗಿಲ್ಲಿ' ಮತ್ತು 'ಜಿಲ್ಲಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ಪೊಲೀಸ್ ಅಧಿಕಾರಿಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಕೇವಲ ಬೆಳ್ಳಿ ಪರದೆಯಲ್ಲಷ್ಟೇ ಅಲ್ಲದೆ, ಕಿರುತೆರೆಯಲ್ಲೂ ಇವರು ಫೇಮಸ್. ವಿಜಯ್ ಟಿವಿಯ ಖ್ಯಾತ ಧಾರಾವಾಹಿ 'ಪಾಂಡ್ಯನ್ ಸ್ಟೋರ್ಸ್' ಮೂಲಕ ಇವರು ಮನೆಮಾತಾಗಿದ್ದಾರೆ. ಛಾಯಾಗ್ರಾಹಕರಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಇವರು ಈಗ ರಾಜಕೀಯದಲ್ಲಿ ದಳಪತಿ ವಿಜಯ್ ಅವರ ಬಲವರ್ಧನೆಗೆ ನಿಂತಿದ್ದಾರೆ.

ಸಾಲಾಗಿ ಸೇರುತ್ತಿರುವ ಗಣ್ಯರು:

ಪಾಂಡಿ ರವಿ ಮಾತ್ರವಲ್ಲದೆ, ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿ.ಎಸ್.ಆರ್. ಶ್ರೀನಿವಾಸನ್ ಕೂಡ ಪಣಯೂರಿನಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಟಿವಿಕೆ ಸೇರ್ಪಡೆಗೊಂಡಿದ್ದಾರೆ. ಇವರ ಜೊತೆಗೆ ಮಾಜಿ ಶಾಸಕಿ ವಿಜಯಧರಣಿ ಅವರ ಎಂಟ್ರಿ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನಲ್ಲಿ ದೀರ್ಘಕಾಲವಿದ್ದ ವಿಜಯಧರಣಿ, ನಂತರ ಬಿಜೆಪಿ ಸೇರಿದ್ದರು. ಆದರೆ ಅಲ್ಲಿಯೂ ಅಸಮಾಧಾನಗೊಂಡು ಈಗ ವಿಜಯ್ ಅವರ ಸಿದ್ಧಾಂತಕ್ಕೆ ಮಾರುಹೋಗಿ ಟಿವಿಕೆ ಸೇರಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯೇ ಟಾರ್ಗೆಟ್:

ಈಗಾಗಲೇ ಎಐಎಡಿಎಂಕೆ ಮಾಜಿ ಸಚಿವರಾದ ಕಡಂಬೂರ್ ರಾಜು ಮತ್ತು ಉಡುಮಲೈ ರಾಧಾಕೃಷ್ಣನ್ ಅವರಂತಹ ಪ್ರಭಾವಿ ನಾಯಕರು ವಿಜಯ್ ಪಕ್ಷದತ್ತ ಒಲವು ತೋರುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ, ಸಿನಿಮಾ ಸ್ಟೈಲ್‌ನಲ್ಲಿಯೇ ವಿಜಯ್ ಅವರು ಇತರ ಪಕ್ಷಗಳ ವಿಕೆಟ್ ಉರುಳಿಸುತ್ತಿದ್ದು, 2026ರ ವಿಧಾನಸಭಾ ಚುನಾವಣೆಯಲ್ಲಿ ದಳಪತಿಯ ಆರ್ಭಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇಡೀ ತಮಿಳುನಾಡು ಈಗ 'ದಳಪತಿ' ಮ್ಯಾಜಿಕ್ ನಿರೀಕ್ಷೆಯಲ್ಲಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಒಂದೇ ಒಂದು ಸಾಂಗ್ಸ್‌ಗೆ ಇಂದು ಕೋಟಿ ಸಂಭಾವನೆ ಪಡೆಯುವ ನಟಿ ಸಮಂತಾಗೆ ಬಾಲ್ಯದಲ್ಲಿ ಏನಾಗಿತ್ತು ಗೊತ್ತಾ?
ಕೊಟ್ಟ ಮಾತನ್ನು ಉಳಿಸಿಕೊಂಡ್ರು ನಟ ವಿಜಯ್ ದೇವರಕೊಂಡ; ರಶ್ಮಿಕಾ ಜೊತೆ ಸ್ವಗ್ರಾಮಕ್ಕೆ ಭೇಟಿ