ಗೋವಾ ಚಲನಚಿತ್ರೋತ್ಸವ : ಕನ್ನಡ ಚಿತ್ರ ಪ್ರದರ್ಶನವಿಲ್ಲ

By Web DeskFirst Published Nov 2, 2018, 4:55 PM IST
Highlights

ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತುಳು ಚಿತ್ರ ಪಡ್ಡಾಯಿ ಆಯ್ಕೆ | ಮಲಯಾಳಂ ಚಿತ್ರ 'ಒಲು' ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿರಲಿದೆ | ಕನ್ನಡ ಚಿತ್ರಕ್ಕಿಲ್ಲ ಆದ್ಯತೆ 

ನವದೆಹಲಿ (ನ. 02): ಗೋವಾದಲ್ಲಿ ನಡೆಯಲಿರುವ 49ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತುಳು ಚಿತ್ರ ಪಡ್ಡಾಯಿ ಆಯ್ಕೆಯಾಗಿದೆ. ಹಿರಿಯ ನಿರ್ದೇಶಕ ರಾಹುಲ್ ರಾವೈಲ್ ನೇತೃತ್ವದ 13 ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು ಒಟ್ಟು 22 ಭಾರತೀಯ ಚಿತ್ರಗಳನ್ನು ಸಿನಿಮೋತ್ಸವಕ್ಕೆ ಆಯ್ಕೆ ಮಾಡಿದೆ. 

ಕನ್ನಡದ ಯಾವೊಂದು ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿಲ್ಲ. ವರ್ಷಕ್ಕೆ ನೂರಾರು ಕನ್ನಡ ಚಿತ್ರಗಳು ಬಂದರೂ ಪನೋರಮಾದಲ್ಲಿ ಪ್ರದರ್ಶನಗೊಳ್ಳುವ ಗುಣಮಟ್ಟ ಇಲ್ಲ ಎನ್ನುವ ಕಾರಣಕ್ಕೆ ಕನ್ನಡ ಚಿತ್ರವನ್ನು ಆಯ್ಕೆ ಮಾಡಿಲ್ಲ. ಇದ್ದುದರಲ್ಲೇ ಸಮಾಧಾನದ ಸಂಗತಿಯೆಂದರೆ ಕರ್ನಾಟಕದ್ದೇ ಭಾಷೆಯಾದ ತುಳು ಚಿತ್ರ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಉತ್ತಮ ಗುಣಮಟ್ಟದ ಚಿತ್ರವನ್ನು ನೀಡುವ ಹೊಣೆ ಕನ್ನಡ ಚಿತ್ರರಂಗದ ಮೇಲಿದೆ.  

ಮಲಯಾಳಂ ಚಿತ್ರ 'ಒಲು' ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿರಲಿದೆ. 'ಒಲು' ಸೇರಿದಂತೆ ಒಟ್ಟು 6 ಮಲಯಾಳಂ, 4 ತಮಿಳು, 2 ಮರಾಠಿ, 2 ಹಿಂದಿ, 4 ಬಂಗಾಳಿ, 1 ಲಡಾಕಿ ಭಾಷೆಯ ಚಿತ್ರದ ಪ್ರದರ್ಶನ ನಡೆಯಲಿದೆ. ಮುಖ್ಯವಾಹಿನಿ ಚಿತ್ರಗಳ ವಿಭಾಗದಲ್ಲಿ ಒಟ್ಟು ನಾಲ್ಕು ಚಿತ್ರಗಳು ಆಯ್ಕೆಯಾಗಿದ್ದು 3 ಹಿಂದಿ ಮತ್ತು ಒಂದು ತೆಲುಗು ಚಿತ್ರವನ್ನು ಒಳಗೊಂಡಿದೆ. ದೇಶದ ವಿವಿಧ ಭಾಷೆಗಳ 21 ನಾನ್ ಫೀಚರ್ ಸಿನಿಮಾಗಳು ಕೂಡ ಚಲನಚಿತ್ರೋತ್ಸವದ ಭಾರತೀಯ ಪನೋರಮಾದಲ್ಲಿ ಭಾಗಿಯಾಗಲಿವೆ.

click me!