ಗುಲಾಬಿ ಸೀರೆಯಲ್ಲಿ ಮಿಂಚಿದ ತ್ರಿಷಾ ಕೃಷ್ಣನ್; ವಿಜಯ್ ಜೊತೆ ಮತ್ತೊಂದು ಕಾರ್ಯಕ್ರಮದಲ್ಲಿ ಪ್ರತ್ಯಕ್ಷ! ವಿಡಿಯೋ ವೈರಲ್

Published : Nov 06, 2026, 12:15 PM IST
Trisha Krishnan

ಸಾರಾಂಶ

ಚೆನ್ನೈನಲ್ಲಿ ನಡೆದ ಅದ್ದೂರಿ ಮದುವೆ ಆರತಕ್ಷತೆಯಲ್ಲಿ ಸಿಎಂ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 80 ಸಾವಿರ ರೂ. ಬೆಲೆಯ ಗುಲಾಬಿ ಬಣ್ಣದ ಸೀರೆಯಲ್ಲಿ ತ್ರಿಷಾ ಮಿಂಚಿದ್ದು, ಇಬ್ಬರ ಸತತ ಭೇಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಮತ್ತೊಮ್ಮೆ ತಮ್ಮ ಸೌಂದರ್ಯ ಹಾಗೂ ಫ್ಯಾಷನ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆ ಚೆನ್ನೈನಲ್ಲಿ ನಡೆದ ಅದ್ದೂರಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ತ್ರಿಷಾ, ಗುಲಾಬಿ ಬಣ್ಣದ ಆಕರ್ಷಕ ಸೀರೆಯಲ್ಲಿ ಮಿಂಚಿದ್ದಾರೆ. ಈ ಸಮಾರಂಭದಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ರಾಜಕಾರಣಿ ವೈಎಸ್ ಅನಿಲ್ ರೆಡ್ಡಿ ಅವರ ಪುತ್ರಿ ಶ್ರೇಯಾ ಹಾಗೂ ಉಜ್ವಲ್ ಅವರ ವಿವಾಹ ಸಂಭ್ರಮದ ಅಂಗವಾಗಿ ಈ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚೆನ್ನೈನ ದಿ ಲೀಲಾ ಪ್ಯಾಲೇಸ್‌ನಲ್ಲಿ ನಡೆದ ಅದ್ದೂರಿ ಸಮಾರಂಭಕ್ಕೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಈ ವೇಳೆ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷ ಗಮನ ಸೆಳೆಯಿತು.

ಗುಲಾಬಿ ಸೀರೆಯಲ್ಲಿ ತ್ರಿಷಾ ಕಂಗೊಳಿಸಿದ ಪರಿ!

'ಪೊನ್ನಿಯಿನ್ ಸೆಲ್ವನ್' ಚಿತ್ರದ ಮೂಲಕ ಗಮನ ಸೆಳೆದಿರುವ ತ್ರಿಷಾ ಕೃಷ್ಣನ್, ಈ ಕಾರ್ಯಕ್ರಮಕ್ಕೆ ತಿಳಿ ಗುಲಾಬಿ ಬಣ್ಣದ ನೆಟ್ ಸೀರೆಯನ್ನು ಧರಿಸಿದ್ದರು. ಗೂಗಲ್ ಲೆನ್ಸ್ ಪ್ರಕಾರ, ಈ ಸೀರೆಯ ಬೆಲೆ ರೌಜ್ (Rouje) ಅಧಿಕೃತ ವೆಬ್‌ಸೈಟ್‌ನಲ್ಲಿ ಸುಮಾರು 80 ಸಾವಿರ ರೂಪಾಯಿ ಎನ್ನಲಾಗಿದೆ. ಪೌಡರ್ ಪಿಂಕ್ ಬಣ್ಣದ ಟ್ಯೂಲ್ ಬಟ್ಟೆಯಿಂದ ಸಿದ್ಧಪಡಿಸಿರುವ ಈ ಸೀರೆಯಲ್ಲಿ ಮುತ್ತುಗಳು, ಸೀಕ್ವಿನ್‌ಗಳು ಹಾಗೂ ಹರಳುಗಳನ್ನು ಕೈಯಿಂದ ಕಸೂತಿ ಮಾಡಲಾಗಿದೆ. ಸೀರೆಯ ಪಲ್ಲುವಿಗೆ ಅಲಂಕಾರಿಕ ಟಸೆಲ್‌ಗಳನ್ನು ಅಳವಡಿಸಿರುವುದು ಲುಕ್‌ಗೆ ಮತ್ತಷ್ಟು ಮೆರುಗು ನೀಡಿತ್ತು.

ಸೀರೆಯೊಂದಿಗೆ ತ್ರಿಷಾ ಧರಿಸಿದ್ದ ಬ್ಲೌಸ್ ಕೂಡ ವಿಶೇಷವಾಗಿತ್ತು. ಕೈಯಿಂದ ಕಸೂತಿ ಮಾಡಿರುವ ಬ್ಲೌಸ್‌ನ ಸೊಂಟದ ಭಾಗದಲ್ಲಿ ಟಸೆಲ್‌ಗಳ ಅಲಂಕಾರವಿದ್ದರೆ, ತೋಳುಗಳ ಬಳಿ ಗರಿಗಳ ವಿನ್ಯಾಸ ಗಮನ ಸೆಳೆಯುತ್ತಿತ್ತು. ಸೀರೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉಟ್ಟಿದ್ದ ತ್ರಿಷಾ, ಮುಂಭಾಗದಲ್ಲಿ ನೆರಿಗೆಗಳನ್ನು ಹಾಕಿ ಪಲ್ಲುವನ್ನು ಭುಜದ ಮೇಲೆ ಅಚ್ಚುಕಟ್ಟಾಗಿ ಹರಡಿಕೊಂಡಿದ್ದರು.

ಆಭರಣ, ಮೇಕಪ್‌ನಲ್ಲೂ ಪಿಂಕ್ ಥೀಮ್!

ತಮ್ಮ ಸೀರೆಯ ಲುಕ್‌ಗೆ ಹೊಂದಿಕೆಯಾಗುವಂತೆ ತ್ರಿಷಾ ಭಾರೀ ವಿನ್ಯಾಸದ ಚೋಕರ್ ನೆಕ್ಲೆಸ್ ಹಾಗೂ ಅದಕ್ಕೆ ಹೊಂದುವ ಕಿವಿಯೋಲೆಗಳನ್ನು ಧರಿಸಿದ್ದರು. ಮೇಕಪ್‌ನಲ್ಲೂ ಗುಲಾಬಿ ಬಣ್ಣಕ್ಕೆ ಆದ್ಯತೆ ನೀಡಿದ್ದರು. ಕೆನ್ನೆಗಳಿಗೆ ತಿಳಿ ಪಿಂಕ್ ಬ್ಲಶ್, ತುಟಿಗಳಿಗೆ ಗಾಢ ಗುಲಾಬಿ ಲಿಪ್‌ಸ್ಟಿಕ್ ಹಾಗೂ ಕಣ್ಣುಗಳಿಗೆ ಪಿಂಕ್ ಐಶ್ಯಾಡೋ ಬಳಸಿದ್ದರು. ಕಣ್ಣುಗಳ ರೆಪ್ಪೆಗಳ ಅಂಚಿನಲ್ಲಿ ತೆಳುವಾದ ಐಲೈನರ್ ಹಚ್ಚಿಕೊಂಡು, ಹಣೆಗೆ ಪುಟ್ಟ ಬಿಂದಿಯನ್ನೂ ಇಟ್ಟಿದ್ದರು. ಕೂದಲನ್ನು ಮಧ್ಯದಲ್ಲಿ ಸೀಳಿಕೊಂಡು ಮೃದುವಾದ ಅಲೆಗಳಂತೆ ಬಿಡಲಾಗಿತ್ತು. ಒಟ್ಟಾರೆ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಮಿಶ್ರಣದೊಂದಿಗೆ ತ್ರಿಷಾ ಎಲ್ಲರ ಗಮನ ಸೆಳೆದರು.

ಕಂದು ಬಣ್ಣದ ಸೂಟ್‌ನಲ್ಲಿ ವಿಜಯ್!

ಇನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೂಡ ಈ ಕಾರ್ಯಕ್ರಮದಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡರು. ಕಂದು ಬಣ್ಣದ ಪ್ಯಾಂಟ್ ಹಾಗೂ ಅದಕ್ಕೆ ಹೊಂದುವ ಬ್ಲೇಜರ್ ಧರಿಸಿದ್ದರು. ಒಳಗೆ ಆಫ್‌ವೈಟ್ ಬಣ್ಣದ ಶರ್ಟ್ ತೊಟ್ಟು ಗಮನ ಸೆಳೆದಿದ್ದರು.

ವಿಜಯ್ ಪ್ರಮಾಣವಚನ ಸಮಾರಂಭದಲ್ಲೂ ಮಿಂಚಿದ್ದ ತ್ರಿಷಾ!

ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ತ್ರಿಷಾ ಕೃಷ್ಣನ್ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಅವರು ಐಸ್ ಬ್ಲೂ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹರಿಯುವಂತೆ ಪಲ್ಲುವನ್ನು ಸುತ್ತಿಕೊಂಡಿದ್ದ ಅವರು, ಹರಳುಗಳಿಂದ ಅಲಂಕರಿಸಿದ ನೆಕ್ಲೆಸ್ ಹಾಗೂ ಅದಕ್ಕೆ ಹೊಂದುವ ಕಿವಿಯೋಲೆಗಳನ್ನು ಧರಿಸಿದ್ದರು. ಕೆಳಭಾಗದಲ್ಲಿ ಕಟ್ಟಿದ್ದ ಕೂದಲಿನ ಬನ್‌ಗೆ ಬಿಳಿ ಹೂವುಗಳನ್ನು ಮುಡಿದು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದರು.

ಇಷ್ಟೇ ಅಲ್ಲದೆ, ಮುಖ್ಯಮಂತ್ರಿಯಾಗಿ ವಿಜಯ್ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ ಕಾರ್ಯಕ್ರಮದಲ್ಲೂ ತ್ರಿಷಾ ಭಾಗವಹಿಸಿದ್ದರು. ಈ ವೇಳೆ ಅವರು ಸಾಸಿವೆ ಹಳದಿ ಬಣ್ಣದ ಕ್ರೇಪ್ ರೇಷ್ಮೆ ಸೀರೆಗೆ ಕಾಂಟ್ರಾಸ್ಟ್ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದರು. ಮಧ್ಯದಲ್ಲಿ ಸೀಳಿದ ಕೂದಲನ್ನು ಫಿಶ್‌ಟೇಲ್ ಜಡೆಯಾಗಿ ಕಟ್ಟಿಕೊಂಡು, ಮುಂಭಾಗದಲ್ಲಿ ಸುರುಳಿಯಾಕಾರದ ಕೂದಲಿನ ವಿನ್ಯಾಸ ಮಾಡಿದ್ದರು. ಮೇಕಪ್ ಕೂಡ ಸರಳವಾಗಿತ್ತು.

ವಿಜಯ್ ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತ್ರಿಷಾ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಚೆನ್ನೈನ ಮದುವೆ ಆರತಕ್ಷತೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಮತ್ತೊಮ್ಮೆ ಗಮನ ಸೆಳೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

YASH: ರಾವಣನ ಸಿಂಹಾಸನ, ಶೂರ್ಪನಖಿ ರಥಕ್ಕೆ ಅದೆಷ್ಟು ಕೋಟಿ ಖರ್ಚು!? 'ರಾಮಾಯಣ'ದ ಸೆಟ್‌ನಲ್ಲಿ ಏನೆಲ್ಲಾ ಇದೆ?!
ರಾವಣನ ವಿರುದ್ಧ ಹೋರಾಡಿ ರೆಕ್ಕೆ ಕಳೆದುಕೊಂಡ ಜಟಾಯು ಬಿದ್ದಿದ್ದು ಬೆಂಗಳೂರಿನಿಂದ 125 ಕಿಲೋ ಮೀಟರ್ ದೂರದಲ್ಲಿ! ‘ಲೇಪಾಕ್ಷಿ’ ಹೆಸರಿನ ಹಿಂದಿದೆ ರೋಚಕ ರಾಮಾಯಣದ ಕಥೆ