ಈ ಹಾರರ್ ಸಿನಿಮಾನ ಒಮ್ಮೆ ನೀವು ನೋಡಿದ್ರೆ ಮುಗೀತು ಕಥೆ.. ರಾತ್ರಿ ಕಣ್ಣು ಬಿಡೋಕೂ ಹಿಂದೆ-ಮುಂದೆ ನೋಡ್ತೀರಾ!

Published : Jul 28, 2026, 11:07 PM IST
Tahkhana Movie

ಸಾರಾಂಶ

ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ‘ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವ’ ಎಂದಿದ್ದಾರೆ ನಟಿ ಪ್ರೀತಿ ಸಪ್ರು.

ಅಮಾವಾಸ್ಯೆಯ ಕತ್ತಲು, ಹಳೇ ಬಂಗಲೆ, ಮತ್ತೆ ಆ ಭೀಕರ ಕಿರುಚಾಟ! 40 ವರ್ಷವಾದ್ರೂ ನಡುಕ ಹುಟ್ಟಿಸುತ್ತೆ ಈ ಸಿನೆಮಾ!

ಇಂದಿನ ಕಾಲದ ಹಾರರ್ ಸಿನಿಮಾಗಳಲ್ಲಿ ಹೈ-ಫೈ ಗ್ರಾಫಿಕ್ಸ್ ಇರುತ್ತೆ, ಸೌಂಡ್ ಎಫೆಕ್ಟ್ಸ್ ಇರುತ್ತೆ. ಆದರೆ, ಯಾವುದೇ ಅದ್ದೂರಿ ತಂತ್ರಜ್ಞಾನ ಇಲ್ಲದ ಕಾಲದಲ್ಲೂ ಜನರನ್ನು ಥಿಯೇಟರ್‌ನ ಸೀಟಿನ ಅಂಚಿಗೆ ಬಂದು ಕೂರುವಂತೆ ಮಾಡಿದ್ದ ಆ 'ಭಯಾನಕ' ಕಾಲ ನೆನಪಿದೆಯೇ? ಹೌದು, ನಾವು ಮಾತನಾಡುತ್ತಿರೋದು 1980ರ ದಶಕದ ಬಗ್ಗೆ. ಆ ಕಾಲದಲ್ಲಿ ಬಾಲಿವುಡ್‌ನ 'ರಾಮ್ಸೆ ಸಹೋದರರು' (Ramsay Brothers) ಸೃಷ್ಟಿಸಿದ ಹಾರರ್ ಲೋಕವೇ ಬೇರೆ! ಅದರಲ್ಲೂ 40 ವರ್ಷಗಳೇ ಕಳೆದರೂ ಇಂದಿಗೂ ಸಿನೆಮಾ ಪ್ರೇಮಿಗಳ ನಿದ್ದೆ ಗೆಡಿಸುತ್ತಿರುವ ಒಂದು ಚಿತ್ರವೆಂದರೆ ಅದು 'ತಹ್ಖಾನಾ' (Tahkhana).

ಏನಿದು 'ತಹ್ಖಾನಾ' ಕಿರಿಕ್?

1986ರಲ್ಲಿ ಬಿಡುಗಡೆಯಾದ ಈ ಚಿತ್ರ ಹಾರರ್ ಪ್ರಿಯರ ಪಾಲಿಗೆ ಒಂದು 'ಕಲ್ಟ್ ಕ್ಲಾಸಿಕ್'. ಇವತ್ತಿನ ದಿನಗಳಲ್ಲಿ ರಾತ್ರಿ ಹೊತ್ತು ಒಂಟಿಯಾಗಿ ಈ ಸಿನೆಮಾ ನೋಡಲು ಧೈರ್ಯವಂತರೂ ಒಮ್ಮೆ ಯೋಚನೆ ಮಾಡುತ್ತಾರೆ. ಕೇವಲ ₹34 ಲಕ್ಷದ ಸಣ್ಣ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹97 ಲಕ್ಷ ಗಳಿಸಿ ಆ ಕಾಲದ ದೊಡ್ಡ ಹಿಟ್ ಎನಿಸಿಕೊಂಡಿತ್ತು.

ಕಥೆಯಲ್ಲಿದೆ ಮೈ ನಡುಗಿಸುವ ಟ್ವಿಸ್ಟ್:

ಈ ಚಿತ್ರದ ಕಥೆ ಶುರುವಾಗುವುದು ಠಾಕೂರ್ ಸುರ್ಜಿತ್ ಸಿಂಗ್ ಅವರ ಕುಟುಂಬದಿಂದ. ಆಸ್ತಿಗಾಗಿ ಹಪಹಪಿಸುವ ಮತ್ತು ಮಾಟಮಂತ್ರದ ಹಿಂದೆ ಬೀಳುವ ದುಷ್ಟ ಮಗ 'ದುರ್ಜನ್' ಈ ಕಥೆಯ ವಿಲನ್. ತಂದೆಯಿಂದ ಬಹಿಷ್ಕೃತನಾದ ಈತ ಒಂದು ನೆಲಮಾಳಿಗೆಯಲ್ಲಿ (ತಹ್ಖಾನಾ) ಬಂದಿಯಾಗುತ್ತಾನೆ. ಆದರೆ ಅಲ್ಲಿಂದಲೇ ಅಸಲಿ ಆಟ ಶುರುವಾಗುತ್ತದೆ. ಮಾಟಮಂತ್ರ, ದುಷ್ಟ ಶಕ್ತಿಗಳು ಮತ್ತು ಬಾಲ್ಯದಲ್ಲೇ ಬೇರ್ಪಟ್ಟ ಇಬ್ಬರು ಸಹೋದರಿಯರ ನೋವಿನ ಕಥೆ ಇದರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಚಿತ್ರದಲ್ಲಿ 'ಶಂಸುದ್ದೀನ್' ಎಂಬ ನಟ ನಿರ್ವಹಿಸಿದ ಆ ಭಯಾನಕ ದೆವ್ವದ ಪಾತ್ರವಿದೆಯಲ್ಲ... ಅದು ಇಂದಿಗೂ ಹಾರರ್ ಅಭಿಮಾನಿಗಳ ಪಾಲಿಗೆ ಒಂದು ದುಃಸ್ವಪ್ನ!

ಶೂಟಿಂಗ್ ಹೇಗಿರುತ್ತಿತ್ತು ಗೊತ್ತಾ?

ಆ ಕಾಲದಲ್ಲಿ ಹಾರರ್ ಸಿನೆಮಾಗಳಲ್ಲಿ ನಟಿಸುವುದು ಸುಲಭದ ಮಾತಾಗಿರಲಿಲ್ಲ. ನಟಿ ಪ್ರೀತಿ ಸಪ್ರು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಶೂಟಿಂಗ್ ಬಹುತೇಕ ತಡರಾತ್ರಿಯಲ್ಲೇ ನಡೆಯುತ್ತಿತ್ತು. ದಟ್ಟವಾದ ಮಂಜು ಮತ್ತು ಸ್ಮಶಾನದಂತಹ ನಿಶ್ಯಬ್ದದ ನಡುವೆ ರಾತ್ರಿಯಿಡೀ ಕಿರುಚಾಡುತ್ತಾ, ದೆವ್ವಗಳಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳಲ್ಲಿ ಅಭಿನಯಿಸುವುದು ನಿಜಕ್ಕೂ ಮೈ ಜುಂ ಎನ್ನುವ ಅನುಭವವಂತೆ. ಪುನೀತ್ ಇಸ್ಸಾರ್, ಹೇಮಂತ್ ಬಿರ್ಜೆ ಅಂತಹ ಸ್ಟಾರ್ ನಟರಿದ್ದರೂ, ತೆರೆಯ ಮೇಲೆ ದೆವ್ವ ಬಂದಾಗ ಪ್ರೇಕ್ಷಕರು ನಟರನ್ನು ಮರೆತು ಹೌಹಾರಿ ಹೋಗುತ್ತಿದ್ದರು.

ಇಂದಿಗೂ ಯಾಕೆ ಫೇಮಸ್?

ಇವತ್ತಿನ ಹಾರರ್ ಸಿನಿಮಾಗಳಲ್ಲಿ ಲಾಜಿಕ್ ಹುಡುಕಬಹುದು, ಆದರೆ ರಾಮ್ಸೆ ಬ್ರದರ್ಸ್ ಚಿತ್ರಗಳಲ್ಲಿ ಇದ್ದದ್ದು ಕೇವಲ 'ಮ್ಯಾಜಿಕ್' ಮತ್ತು 'ಭಯ'. ಆ ಕೆಂಪು ಕಣ್ಣುಗಳು, ಉದ್ದನೆಯ ಉಗುರುಗಳು, ಹಳೇ ಬಂಗಲೆಯ ಬಾಗಿಲು ತೆರೆಯುವ ಆ 'ಕಿರ್ರ್..' ಎಂಬ ಶಬ್ದ... ಇವೆಲ್ಲವೂ ಈಗಿನ ಹಾರರ್ ಪ್ರಿಯರಿಗೂ ಕಿಕ್ ನೀಡುತ್ತವೆ.

ನಿಮಗೂ ಧೈರ್ಯವಿದ್ದರೆ, ಯಾವುದಾದರೂ ಒಂದು ಶುಕ್ರವಾರದ ರಾತ್ರಿ ಲೈಟ್ ಆಫ್ ಮಾಡಿ ಈ 'ತಹ್ಖಾನಾ' ಸಿನೆಮಾ ನೋಡಲು ಕುಳಿತುಕೊಳ್ಳಿ. ಆದರೆ ನೆನಪಿರಲಿ, ಆ ನೆಲಮಾಳಿಗೆಯ ಒಳಗಿರುವ ಶಕ್ತಿ ನಿಮ್ಮನ್ನೂ ಬೆನ್ನಟ್ಟಬಹುದು! ಆದ್ರೂ.. ಯಾವುದಕ್ಕೂ ಹುಶಾರ್!!! ಏಕೆಂದರೆ, ಒಮ್ಮೆ ಈ ತಹ್ಖಾನಾ ಸಿನಿಮಾ ನೋಡಿದವ್ರು ಹೆಸರು ಹೇಳೋಕೂ ಹೆದರ್ತಾರೆ! ಅಷ್ಟೊಂದು ಭಯಾನಕ ಹಾರರ್ ಸಿನಿಮಾ ಇದು!!

ಸಂಕ್ಷಿಪ್ತ ಮಾಹಿತಿ:

ಚಿತ್ರ: ತಹ್ಖಾನಾ (1986)

ನಿರ್ದೇಶನ: ತುಳಸಿ ರಾಮ್ಸೆ ಮತ್ತು ಶ್ಯಾಮ್ ರಾಮ್ಸೆ

ಬಜೆಟ್: ₹34 ಲಕ್ಷ

ಗಳಿಕೆ: ₹97 ಲಕ್ಷ (ಜಾಗತಿಕವಾಗಿ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಂದೆ ನಿಧನರಾದ ಲಂಡನ್ ಆಸ್ಪತ್ರೆಯಲ್ಲೇ ಮಗನ ಕೊನೆಯುಸಿರು: ಹಿರಿಯ ನಟ ದೇವಾನಂದ್‌ ಪುತ್ರ ಸುನೀಲ್ ಆನಂದ್ ವಿಧಿವಶ!
Bigg Boss 13ಕ್ಕೆ ಬಂತು ಆಫರ್​: ಷೋಗೆ ಹೋಗಲ್ಲ ಎಂದ ಮುಸ್ಲಿಂ ಮುಖಂಡ ಏನ್​ ಹೇಳಿದ್ರು ಕೇಳಿ