ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಸಿದ ಟಾಪ್-5 ಮಲಯಾಳಂ ಸಿನಿಮಾಗಳು; ಈಗ ಮತ್ತೊಂದು ಸೇರ್ಪಡೆ!

Published : Sep 08, 2026, 03:35 PM IST
malayalam movies in karnataka box office

ಸಾರಾಂಶ

ಕರ್ನಾಟಕದಲ್ಲಿ ಮಲಯಾಳಂ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸುತ್ತಿದ್ದು, ಕಂಟೆಂಟ್ ಆಧಾರಿತ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕರ್ನಾಟಕ ಟಾಕೀಸ್' ವರದಿಯ ಪ್ರಕಾರ, ಟಾಪ್-5 ಮಲೆಯಾಳಂ ಚಿತ್ರಗಳ ಗಳಿಕೆ ಎಷ್ಟಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಬೆಂಗಳೂರು (ಸೆ.08): ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ (ಮಾಲಿವುಡ್) ಸಿನಿಮಾಗಳ ಹವಾ ಕರ್ನಾಟಕದಲ್ಲೂ ಜೋರಾಗಿದೆ. ಕಂಟೆಂಟ್ ಆಧಾರಿತ ಕಥೆಗಳಿಗೆ ಕನ್ನಡಿಗರು ಯಾವಾಗಲೂ ಮುಕ್ತ ಮನಸ್ಸಿನಿಂದ ಸ್ವಾಗತ ಕೋರುತ್ತಾರೆ ಎಂಬುದಕ್ಕೆ ಇಲ್ಲಿನ ಬಾಕ್ಸ್ ಆಫೀಸ್ ಗಳಿಕೆಯೇ ಸಾಕ್ಷಿ. ಮೊದಲಿಗೆ ಬೆಂಗಳೂರು ಮತ್ತು ಮೈಸೂರಿನಂತಹ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ಮಲಯಾಳಂ ಸಿನಿಮಾಗಳ ಮಾರುಕಟ್ಟೆ, ಈಗ ರಾಜ್ಯಾದ್ಯಂತ ವಿಸ್ತರಿಸಿದೆ. ಡಬ್ಬಿಂಗ್ ವರ್ಷನ್‌ಗಳ ಜೊತೆಗೆ ಮೂಲ ಚಿತ್ರಗಳಿಗೂ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಇದೀಗ ಕರ್ನಾಟಕದ ಪ್ರಮುಖ ಬಾಕ್ಸ್ ಆಫೀಸ್ ಟ್ರ್ಯಾಕರ್ ಆದ 'ಕರ್ನಾಟಕ ಟಾಕೀಸ್' ನೀಡಿರುವ ವರದಿಯ ಪ್ರಕಾರ, ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್-5 ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ:

ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್-5 ಮಲಯಾಳಂ ಚಿತ್ರಗಳು:

ಮಂಜುಮ್ಮೆಲ್ ಬಾಯ್ಸ್ (Manjummel Boys): ₹15.80 ಕೋಟಿ

ಸರ್ವೈವಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದ ಈ ಚಿತ್ರ ಕರುನಾಡಿನ ಪ್ರೇಕ್ಷಕರನ್ನು ಕಟ್ಟಿಹಾಕಿತ್ತು. ಕರ್ನಾಟಕದಲ್ಲಿ ಸಾರ್ವಕಾಲಿಕ ದಾಖಲೆಯೊಂದಿಗೆ ಈ ಚಿತ್ರ ಮೊದಲ ಸ್ಥಾನದಲ್ಲಿದೆ.

ಲೋಕಾಯ (Lokaya): ₹15.15 ಕೋಟಿ

ಅದ್ಭುತ ಕಥಾವಸ್ತುವಿನ ಮೂಲಕ ಸೆಳೆದ ಈ ಚಿತ್ರ ಎರಡನೇ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ.

ದೃಶ್ಯಂ 3 (Drishyam 3): ₹14.22 ಕೋಟಿ

ಸಸ್ಪೆನ್ಸ್ ಹಾಗೂ ರೋಚಕ ಟ್ವಿಸ್ಟ್‌ಗಳಿಂದ ಪ್ರೇಕ್ಷಕರನ್ನು ಸೆಳೆದು ₹14 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮೂರನೇ ಸ್ಥಾನದಲ್ಲಿದೆ.

ಎಂಬುರಾನ್ (Empuraan): ₹12.65 ಕೋಟಿ

ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾ ಕರ್ನಾಟಕದಲ್ಲೂ ಭರ್ಜರಿ ಪ್ರದರ್ಶನ ಕಂಡು ನಾಲ್ಕನೇ ಸ್ಥಾನ ಪಡೆದಿದೆ.

ಬೆತ್ಲಹೇಂ ಕುಟುಂಬ ಯೂನಿಟ್ (Bethlehem Kudumba Unit): ₹11.43 ಕೋಟಿ (ಕೇವಲ 17 ದಿನಗಳಲ್ಲಿ)

ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಚಿತ್ರ ಕೇವಲ 17 ದಿನಗಳಲ್ಲಿ ₹11.43 ಕೋಟಿ ಬಾಚಿ, ಟಾಪ್-5 ಪಟ್ಟಿಗೆ ಲಗ್ಗೆ ಇಟ್ಟಿದೆ. ಮುಂಬರುವ ದಿನಗಳಲ್ಲಿ ಇದರ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ವಿಶ್ವಾದ್ಯಂತ ₹270 ಕೋಟಿ ಕ್ಲಬ್ ಸೇರಿದ 'ಬೆತ್ಲಹೇಂ'!

ಕರ್ನಾಟಕದಲ್ಲಿ ಮಾತ್ರವಲ್ಲದೆ, ವಿಶ್ವಾದ್ಯಂತ 'ಬೆತ್ಲಹೇಂ ಕುಟುಂಬ ಯೂನಿಟ್' ಚಿತ್ರವು ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದೆ. ಈ ಸಿನಿಮಾ ಈಗಾಗಲೇ ಜಾಗತಿಕವಾಗಿ ₹270 ಕೋಟಿ ರೂಪಾಯಿ ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ 'ಎಂಬುರಾನ್' (₹268 ಕೋಟಿ) ಚಿತ್ರದ ಸಾರ್ವಕಾಲಿಕ ದಾಖಲೆಯನ್ನು ಮುರಿದಿದೆ. ಚಿತ್ರದ ತೆಲುಗು ಮತ್ತು ತಮಿಳು ಅವತರಣಿಕೆಗಳಿಗೂ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಯಶಸ್ವಿ ಜೋಡಿಯ ಕಮಾಲ್:

ಸೂಪರ್ ಹಿಟ್ 'ಪ್ರೇಮಲು' ಚಿತ್ರದ ನಂತರ ಖ್ಯಾತ ನಿರ್ಮಾಣ ಸಂಸ್ಥೆ 'ಭಾವನಾ ಸ್ಟುಡಿಯೋಸ್' ನಿರ್ಮಿಸಿರುವ 6ನೇ ಚಿತ್ರವಿದು. ದಿಲೀಶ್ ಪೋತನ್, ನಟ ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದು, ಗಿರೀಶ್ ಎ.ಡಿ. ನಿರ್ದೇಶಿಸಿದ್ದಾರೆ. ವಿಶೇಷವೆಂದರೆ, ನಾಯಕ ನಿವಿನ್ ಪೌಳಿ ಮತ್ತು ಭಾವನಾ ಸ್ಟುಡಿಯೋಸ್ ಕಾಂಬಿನೇಶನ್‌ನ ಮೊದಲ ಚಿತ್ರವೇ ಈ ಮಟ್ಟದ ಐತಿಹಾಸಿಕ ಯಶಸ್ಸು ಕಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೆ ರಾಕಿ ಭಾಯ್ ಹವಾ.. 'KGF 3' ಕಥೆ ರೆಡಿ: ಪ್ರಶಾಂತ್ ನೀಲ್ ಕೊಟ್ರು ಬಿಗ್ ಅಪ್‌ಡೇಟ್
New OTT Cinema 'DC': ನಿರ್ದೇಶಕನೇ ಹೀರೋ, OOTಗೆ ಬಂತು 'ಡಿಸಿ'; 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಲ್ಲಿ ನೋಡಬಹುದು?