
ಏಕಕಾಲಕ್ಕೆ ಪಂಚಭಾಷೆಗಳಲ್ಲಿ ತೆರೆ ಕಂಡ ಡಾರ್ಲಿಂಗ್ ’ಸಾಹೋ’ ಸಿನಿಮಾ ಅಭಿಮಾನಿಗಳ ಮನಸ್ಸು ಕದ್ದಿರುವುದಂತೂ ಗ್ಯಾರಂಟಿ. 2019 ಮೋಸ್ಟ್ ಟಾಕ್ ಆಫ್ ದಿ ಸಿನಿಮಾ ಆಗಿದ್ದು ಮೊದಲ ಪ್ರದರ್ಶನ ಯಶಸ್ಸಿಯಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಸಾಹೋ ಸಿನಿಮಾ ಭೀತಿ!
ಗುರುವಾರ ರಾತ್ರಿ ದುಬೈನಲ್ಲಿ ಪ್ರೀಮಿಯರ್ ಶೋ ರಿಲೀಸ್ ಆಗಿದ್ದು ಅಭಿಮಾನಿಗಳು ಪ್ರಭಾಸ್ ಆ್ಯಕ್ಷನ್ ಸೀನ್ ಹಾಗೂ ಕ್ಯಾಮೆರಾ ವರ್ಕ್‌ಗೆ ಬೋಲ್ಡ್ ಆಗಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಸಿದ್ಧಾಂತ್ ನಂದನ್ ಸಾಹೋ ಎಂಬ ಅಂಡರ್ ಕವರ್ ಕ್ರಿಮಿನಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನೀಲ್ ನಿತಿನ್ ಮುಕೇಶ್, ಮುರಳಿ ಶರ್ಮಾ ಹಾಗೂ ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸೂಪರ್ ಆಗಿ ಅಭಿನಯಿಸಿದ್ದು ಆಕೆಯ ಕಾಸ್ಟ್ಯೂಮ್ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತದೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ.
ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?
ಚಿತ್ರದ ಹಾಡುಗಳನ್ನು ನಿರ್ದೇಶಕ ಸುಜೀತ್ ಅದ್ಭುತ ತಾಣಗಳಲ್ಲಿ ಶೂಟ್ ಮಾಡಿದ್ದು ವಸ್ತ್ರ ವಿನ್ಯಾಸ ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು '#Saaho ಸಿನಿಮಾ ನೋಡಿ ಪ್ರಭಾಸ್ ಗೆ ಜೈಕಾರ ಹಾಕುತ್ತಿದ್ದಾರೆ. ಈಗ ಪ್ರಭಾಸ್ ಗೆ ದುಬೈನಲ್ಲಿ ಅಭಿಮಾನಿಗಳ ಸಂಘ ಶುರು ಆಗುವುದರಲ್ಲಿ ಅನುಮಾನವೇ ಇಲ್ಲ. ಚಿತ್ರದ ಲಾಸ್ಟ್ 30 ನಿಮಿಷ ಸಿನಿಮಾ ಸೂಪರ್ ' ಎಂದು ಟ್ಟೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಹಾ..! ಪ್ರಭಾಸ್ ಮದ್ವೆಯಂತೆ! ಕನ್ಯೆ ಯಾರು ನೋಡುವಿರಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.