
ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿಯ ಮುಂದಿನ ಸಿನಿಮಾ ಯಾವುದು ಅನ್ನೋದು ರಿವೀಲ್ ಆಗಿದೆ.
ರಾಮ್ ಚರಣ್ ತೇಜಾ ಮತ್ತು ಜೂನಿಯರ್ ಎನ್ ಟಿ ಆರ್ ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಓಡುವ ಕುದುರೆಗಳು. ಮಗಧೀರ, ಯಮದೊಂಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಾರಂದ್ರೆ ಹೇಗಿರಬಹುದು ನೀವೇ ಲೆಕ್ಕಾ ಹಾಕಿ. ಈ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ ಥ್ರಿಲ್ ಆಗೋ ನ್ಯೂಸ್ ವೊಂದನ್ನ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಈ ಬಿಗ್ ಸ್ಟಾರ್ ಗಳು ಸ್ಕ್ರೀನ್ ಹಂಚಿಕೊಳ್ಳೊದಿಕ್ಕೆ ಕಾಲ ಕೂಡಿ ಬಂದಿದೆ.
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜಕ್ಕಣ್ಣ ಅಂತಾ ಕರಿಸಿಕೊಳ್ಳುವ ಏಕೈಕ ನಿರ್ದೇಶಕ ಅಂದ್ರೆ ಎಸ್ ಎಸ್ ರಾಜಮೌಳಿ. ಬಾಹುಬಲಿ ಸಿನಿಮಾ ಮೂಲಕ ವಿಶ್ವದ ಗಮನ ಸೆಳೆದ ಜಕ್ಕಣ್ಣ, ಇಬ್ಬರು ಬಿಗ್ ಸ್ಟಾರ್'ಗಳನ್ನ ಹಾಕಿಕೊಂಡು ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಸಜ್ಜಾಗಿದ್ದಾರೆ.
ಬಾಹುಬಲಿ ಭರ್ಜರಿ ಯಶಸ್ಸಿನಿಂದಾಗಿ ರಾಜಮೌಳಿ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಯಮಧೀರ ಅಂತಾ ಟೈಟಲ್ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ರಾಮಚರಣ್ ತೇಜಾ ಹಾಗೂ ಜೂನಿಯರ್ ಎನ್'ಟಿಆರ್ ನಟಿಸುತ್ತಿದ್ದಾರೆ. ಈ ಹಿಂದೆ ಈ ಇಬ್ಬರು ಸ್ಟಾರ್'ಗಳಿಗೆ ಬಿಗ್ ಬ್ರೇಕ್ ಕೊಟ್ಟಿದ್ದ ರಾಜಮೌಳಿ, ಬಹಳ ವರ್ಷಗಳ ನಂತರ ಇಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಕ್ಕೆ ಕಥೆ ಬರೆದಿದ್ದಾರಂತೆ.ಕೀರವಾಣಿ ಸಂಗೀತ.
ಕೆಲ ತಿಂಗಳುಗಳ ಹಿಂದೆ ರಾಮ್ ಚರಣ್ ತೇಜಾ ಹಾಗೂ ಎನ್ ಟಿ ಆರ್ ಜೊತೆ ಫೋಟೋ ತೆಗೆದುಕೊಂಡಿದ್ದ ರಾಜಮೌಳಿ ಲೆಕ್ಕಾಚಾರ ಈಗ ವರ್ಕ್ ಔಟ್ ಆಗಿದೆ. ಈಗಾಗ್ಲೇ ಈ ಸ್ಟಾರ್ ನಟರು ಈ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಯಮಧೀರ ಸಿನಿಮಾ ಸೆಟ್ಟೇರಲಿದೆ. ಇದು ಯಾವ ಕತೆ ಪೌರಾಣಿಕಾನಾ? ಸೋಷಿಯೋ ಫ್ಯಾಂಟಸಿ ಚಿತ್ರವೋ? ಎನ್ಟಿಆರ್ - ರಾಮ್ ಚರಣ್ಗೆ ನಾಯಕಿಯರು ಯಾರಾಗ್ತಾರೆ? ಎಲ್ಲಕ್ಕೂ ಉತ್ತರ ಸದ್ಯದಲ್ಲೆ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.