'ಆಶೀರ್ವಾದ ಮತ್ತು ರಕ್ಷಣೆ ಪಡೆದಿದ್ದೇನೆ': ಸೀಮಂತದ ಫೋಟೋಸ್ ಹಂಚಿಕೊಂಡ ನಟಿ ಸಮಂತಾ!

Published : Sep 14, 2026, 07:50 PM IST
Samantha Seemantham

ಸಾರಾಂಶ

ನಟಿ ಸಮಂತಾ ರುತ್ ಪ್ರಭು ತಮ್ಮ ಸೀಮಂತ ಕಾರ್ಯಕ್ರಮದ ಸುಂದರ ಫೋಟೋ-ವಿಡಿಯೋ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಲುಕ್‌ನಲ್ಲಿರುವ ನಟಿಯ ಫೋಟೋಗಳು ಇದೀಗ ಗಮನ ಸೆಳೆಯುತ್ತಿವೆ. ಜೊತೆಗೆ ಈ ವಿಶೇಷ ಶಾಸ್ತ್ರದ ಬಗ್ಗೆ ತಮ್ಮ ಅನುಭವವನ್ನೂ ಬರೆದುಕೊಂಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸರಳ ಹಾಗೂ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ, ಸಕಾರಾತ್ಮಕತೆಯಿಂದ ಕೂಡಿದ್ದ ಈ ಕಾರ್ಯಕ್ರಮದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

ಸದ್ಯ ಗರ್ಭಿಣಿಯಾಗಿರುವ ನಟಿ ಸಮಂತಾ ರುತ್ ಪ್ರಭು, ಸೋಮವಾರ ತಮ್ಮ ಸೀಮಂತ ಕಾರ್ಯಕ್ರಮದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು, ತಮ್ಮ ನಟನೆ ಹಾಗೂ ಸೌಂದರ್ಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ಸಮಂತಾ, ಈಗ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.

ಸಮಂತಾರ ಸಿಂಪಲ್ ಸೀಮಂತ!

ಅಭಿಮಾನಿಗಳ ದಿನವನ್ನು ಮತ್ತಷ್ಟು ವಿಶೇಷವಾಗಿಸಿದ ಸಮಂತಾ, ಅರಿಶಿನ ಬಣ್ಣದ ಚೂಡಿದಾರದಲ್ಲಿ ಕಂಗೊಳಿಸಿದ್ದಾರೆ. ಪತಿ ರಾಜ್ ನಿಡಿಮೋರು, ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಡೆದ ಈ ಸೀಮಂತ ಕಾರ್ಯಕ್ರಮದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು, ಈ ಶಾಸ್ತ್ರದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಈಗ ನಾನು ಆಶೀರ್ವಾದ ಮತ್ತು ರಕ್ಷಣೆ ಪಡೆದಿದ್ದೇನೆ ಎಂದು ಅನಿಸುತ್ತಿದೆ. ಈ ಸುಂದರ ಸಮಾರಂಭವನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ನನ್ನ ಪ್ರೀತಿಯ ಗೆಳತಿ ಶಿಲ್ಪಾ ರೆಡ್ಡಿ ಅವರಿಗೆ ನಾನು ಆಭಾರಿ ಎಂದು ಬರೆದುಕೊಂಡಿದ್ದಾರೆ.

ಸಮಂತಾರ ಪ್ರೆಗ್ನೆನ್ಸಿ ಜರ್ನಿ!

ಕೆಲವೇ ದಿನಗಳ ಹಿಂದೆ, ಸಮಂತಾ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿದ್ದರು. ತಾವು ಮದುವೆಯಾಗಿದ್ದ ಈಶ ಯೋಗ ಕೇಂದ್ರಕ್ಕೆ ಭೇಟಿ ನೀಡಿದ ಬಗ್ಗೆಯೂ ಬರೆದುಕೊಂಡಿದ್ದರು. ನಿಮ್ಮನ್ನು ವಿಸ್ತರಿಸುವ ಜನರನ್ನು ಮತ್ತು ಸ್ಥಳಗಳನ್ನು ಹುಡುಕಿ. ಜೀವನದ ಒಂದು ಹಂತದಲ್ಲಿ, ನಾವು ಯಾರೆಂದು ನಮಗೆ ತಿಳಿದಿದೆ ಎಂದು ನಾವು ನಂಬಲು ಪ್ರಾರಂಭಿಸುತ್ತೇವೆ. ಕಳೆದ ಐದು ವರ್ಷಗಳು ನನಗೆ ಬೇರೆಯದನ್ನೇ ಕಲಿಸಿವೆ.

ನಾನು ಇಲ್ಲಿಗೆ ಬಂದಾಗಲೆಲ್ಲಾ, ಇನ್ನಷ್ಟು ಕಲಿಯಲು, ಬದಲಾಗಲು ಮತ್ತು ಬೆಳೆಯಲು ಅವಕಾಶವಿದೆ ಎಂಬ ಭಾವನೆಯೊಂದಿಗೆ ಹಿಂತಿರುಗುತ್ತೇನೆ. ಸರಿಯಾದ ಮಾರ್ಗದರ್ಶಕರು ಇದನ್ನೇ ಮಾಡುತ್ತಾರೆ. ನೀವು ಏನಾಗಬೇಕೆಂದು ಅವರು ಹೇಳುವುದಿಲ್ಲ. ನೀವು ಸದಾ ಬೆಳೆಯುತ್ತಲೇ ಇರಬೇಕು ಎಂಬುದನ್ನು ನೆನಪಿಸುತ್ತಾರೆ. ಅಂತಹ ಜನರನ್ನು, ಅಂತಹ ಸ್ಥಳಗಳನ್ನು ಹುಡುಕಿ. ಸದಾ ಬೆಳೆಯುತ್ತಿರಿ. ನಿಮ್ಮಲ್ಲಿ ಅನ್ವೇಷಿಸಲು ಇನ್ನೂ ಬಹಳಷ್ಟಿದೆ ಎಂದು ಅವರು ಬರೆದಿದ್ದರು.

ಗರ್ಭಧಾರಣೆ ಬಗ್ಗೆ

ಇನ್ನು ಸಮಂತಾ ರುತ್ ಪ್ರಭು ಮತ್ತು ಅವರ ಪತಿ ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 2026 ರಲ್ಲಿ ಮಗುವಿನ ಜನನವಾಗಲಿದೆ. ಇತ್ತೀಚೆಗೆ 'ಹಾಲಿವುಡ್ ರಿಪೋರ್ಟರ್' ಜೊತೆಗಿನ ಸಂದರ್ಶನವೊಂದರಲ್ಲಿ, ಈ ಗರ್ಭಧಾರಣೆ ಅನಿರೀಕ್ಷಿತವಾಗಿತ್ತು ಎಂದು ಸಮಂತಾ ಬಹಿರಂಗಪಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಣೇಶ ಹಬ್ಬಕ್ಕೆ 'ರಾಮನಾಮ'ದ ಸರ್ಪ್ರೈಸ್: ರಾಮಾಯಣದ 'ಜೈ ಜೈ ರಾಮ್' ಸಾಂಗ್ ಕೇಳಿದ್ರಾ?
ಶಿವಣ್ಣನಿಗೆ ರಾಖಿ ಕಟ್ಟಿದ ನಟ ಜಗ್ಗೇಶ್: ಗೀತಾ ದಂಪತಿ ಕೊಟ್ಟ ಗಿಫ್ಟ್‌ ನೋಡಿ ಭಾವುಕರಾದ ನವರಸನಾಯಕ!