ಟೈಗರ್ ಶ್ರಾಫ್, ಸಲ್ಮಾನ್ , ಕಪಿಲ್ ಶರ್ಮಾ ಸೇರಿ ಬಿಷ್ಣೋಯ್ ಗ್ಯಾಂಗ್ ಲಿಸ್ಟ್‌ನಲ್ಲಿ 8 ಸೆಲೆಬ್ರೆಟಿಸ್

Published : Oct 19, 2026, 11:16 AM IST
Bishnoi Gang List Salman Khan to Tiger Shroff

ಸಾರಾಂಶ

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸದ್ಯ ಜೈಲಿನಲ್ಲಿದ್ದರೂ ಆತನ ಶಾರ್ಪ್ ಶೂಟರ್ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಲ್ಮಾನ್ ಖಾನ್‌ ಕೃಷ್ಣಮೃಗ ಬೇಟೆ ಪ್ರಕರಣದಿಂದ ಶುರುವಾದ ದ್ವೇಷ ಇದೀಗ ಸಲ್ಮಾನ್ ಜೊತೆ ಗುರುತಿಸಿಕೊಂಡವರ ಮೇಲೂ ವಿಸ್ತರಿಸಿದೆ. ಬಿಷ್ಣೋಯ್ ಟಾರ್ಗೆಟ್ ಮಾಡಿದ 8 ಬಾಲಿವುಡ್ ಸೆಲೆಬ್ರಿಟಿಸ್ ಯಾರು?

ಮುಂಬೈ (ಅ.19) ಬಾಲಿವುಟ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಯಾಗಿದೆ. ಜುಹು ಬಳಿ ಕಾರಿನಲ್ಲಿ ಬರುತ್ತಿದ್ದ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಕನಿಷ್ಠ ಮೂವರು ಕಂಟ್ರಿಮೇಡ್ ಪಿಸ್ತೂಲ್ ಮೂಲಕ ದಾಳಿ ಮಾಡಿದ್ದಾರೆ. 7 ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಪೈಕಿ ಓರ್ವನ ಪಿಸ್ತೂಲ್ ಜಾಮ್ ಆದ ಕಾರಣ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೈ, ಎದೆಗೆ ಗಾಯಗಳಾಗಿದೆ. ದಾಳಿ ಬೆನ್ನಲ್ಲೇ ಗ್ಯಾಂಗ್‌ಸ್ಟರ್ ರವಿ ಬಿಷ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ. ಈ ಘಟನೆ ಬಾಲಿವುಡ್ ಸೆಲೆಬ್ರೆಟಿಗಳನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ. ರವಿ ಬಿಷ್ಣೋಯ್ ಗ್ಯಾಂಗ್‌ನ ಲಿಸ್ಟ್‌ನಲ್ಲಿ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳಿದ್ದಾರೆ. ಈ ಪೈಕಿ 8 ಮಂದಿ ಮೇಲೆ ದಾಳಿ ಪ್ರಯತ್ನಗಳು, ಬೆದರಿಕೆ ಪ್ರಯತ್ನಗಳು ನಡೆದಿದೆ.

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ಹಿಂದೆ ಬೀಳಲು ಕಾರಣವೇನು?

ರಾಜಸ್ಥಾನ ಬಿಷ್ಣೋಯ್ ಸಮುದಾಯ ಕೃಷ್ಣಮೃಗವನ್ನು ಸಮುದಾಯದ ಗುರು ಜಂಬಾಜಿ (ಜಂಬೇಶ್ವರ) ಅವತಾರ ಎಂದು ನಂಬಿಕೆ ಇಟ್ಟಿದೆ. ಬಿಷ್ಣೋಯ್ ಸಮುದಾಯ ಪ್ರಕೃತಿಯನ್ನು ದೇವರಂತೆ ಆರಾಧಿಸುವ ಸಮುದಾಯ. ಆದರೆ ಬಾಲಿವುಡ್ ನಟ ಸಲ್ಮಾನ್ ಖಾನ್ 1998ರಲ್ಲಿ ಶೂಟಿಂಗ್ ವಿರಾಮದ ವೇಳೆ ರಾಜಸ್ಥಾನದ ಜೋಧಪುರದಲ್ಲಿ ಕೃಷ್ಣಮೃಗ ಭೇಟೆಯಾಡಿದ ಗಂಭೀರ ಆರೋಪವಿದೆ. ಬಿಷ್ಣೋಯ್ ಸಮುದಾಯದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ , ಸಲ್ಮಾನ್ ಖಾನ್ ಕೃಷ್ಣಮೃಗ ಭೇಟೆಯಿಂದ ಕೆರಳಿ ಪದೇ ಪದೆ ದಾಳಿಗೆ ಮುಂದಾಗಿದ್ದಾರೆ. ಸಲ್ಮಾನ್ ಖಾನ್ ಮೇಲೆ ಹಲವು ಬಾರಿ ದಾಳಿ ನಡೆದಿದೆ. 2024ರಲ್ಲಿ ಸಲ್ಮಾನ್ ಖಾನ್ ಬಾಂದ್ರಾ ಮನೆಯ ಮೇಲೂ ಗುಂಡಿನ ದಾಳಿ ನಡೆದಿತ್ತು. 2022ರಲ್ಲಿ ಪತ್ರದ ಮೂಲಕ ಬೆದರಿಕೆ ಹಾಕಲಾಗಿತ್ತು. ಹಲವು ಬಾರಿ ಸಲ್ಮಾನ್ ಖಾನ್ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಗೆ ಯತ್ನಿಸಿದೆ.

ಸಲ್ಮಾನ್ ಖಾನ್ ಆಪ್ತ ಮಾಜಿ ಸಚಿವ ಬಾಬಾ ಸಿದ್ದಿಕ್ಕಿ ಹತ್ಯೆ

2024ರ ಅಕ್ಟೋಬರ್ 12ರಂದು ಸಲ್ಮಾನ್ ಖಾನ್ ಆಪ್ತ, ಮಾಜಿ ಸಚಿವ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಬಾಬಾ ಸಿದ್ದಿಕ್ ಕಚೇರಿಯಲ್ಲಿರುವಾಗ ಗುಂಡಿನ ದಾಳಿ ನಡೆದಿತ್ತು. ಸಲ್ಮಾನ್ ಖಾನ್‌ ಆಪ್ತ ಹಾಗೂ ಹಲವು ಕಾರ್ಯಕ್ರಮಗಳು, ವೈಯುಕ್ತಿಕ ಕಾರ್ಯಕ್ರಮಗಳಲ್ಲಿ ಸಲ್ಮಾನ್ ಖಾನ್‌ಗೆ ನೆರವು ನೀಡುತ್ತಿದ್ದಾರೆ ಅನ್ನೋ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಬಾಬಾ ಸಿದ್ದಿಕ್ ಬಾಲಿವುಡ್ ಸೆಲೆಬ್ರೆಟಿಗಳ ಆಪ್ತರಾಗಿದ್ದರು.

ಕಪಿಲ್ ಶರ್ಮಾ ಕೆಫೆ ಮೇಲೆ ದಾಳಿ

ಕಪಿಲ್ ಶರ್ಮಾ ತನ್ನ ಕಾಮಿಡಿ ಶೋನಲ್ಲಿ ಸಲ್ಮಾನ್ ಖಾನ್ ಕರೆಸಿದ್ದಾರೆ ಎಂಬ ಆರೋಪದಡಿ ಕಪಿಲ್ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೆನಾಡದಲ್ಲರುವ ಕೆಫೆ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿತ್ತು.

ರಣವೀರ್ ಸಿಂಗ್, ರೋಹಿತ್ ಶೆಟ್ಟಿ ಸೇರಿ ಹಲವರಿಗೆ ಬೆದರಿಕೆ

ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಈ ವರ್ಷದ ಆರಂಭದಲ್ಲಿ ಬೆದರಿಕೆ ಕರೆಗಳು, ಇಮೇಲ್ ಬಂದಿತ್ತು. ಇತ್ತ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿಗಳು ನಡೆದಿತ್ತು. 2026ರ ಜುಲೈನಲ್ಲಿ ಸೋಶಿಯಲ್ ಮೀಡಿಯಾ, ಆಡಿಯೋ ಮೆಸೇಜ್ ಮೂಲಕ ನಟ ಆಮೀರ್ ಖಾನ್‌ಗೆ ಬೆದರಿಕೆ ಬಂದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಂದು ಹೇಳಿಕೊಂಡು ಈ ಬೆದರಿಕೆಗಳು ಬಂದಿತ್ತು.

ಕಾಮಿಡಿಯನ್ ಮುನಾವರ್ ಫಾರೂಖಿ, ಆಯುಷ್ ಶರ್ಮಾ ಸೇರಿದಂತೆ ಪ್ರಮುಖ ಬಾಲಿವುಡ್ ನಟರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಗಳು ಬಂದಿದೆ. ಬಿಷ್ಣೋಯ್ ಗ್ಯಾಂಗ್ ಲಿಸ್ಟ್‌ನಲ್ಲಿ ಹಲವು ಸೆಲೆಬ್ರೆಟಿಗಳಿದ್ದಾರೆ. ಹಲವರ ಮೇಲೆ ಪ್ರಯತ್ನಗಳು ನಡೆಯುತ್ತಲೇ ಇದೆ. ಇದೀಗ ಟೈಗರ್ ಶ್ರಾಫ್‌ ಮೇಲೆ ದಾಳಿಯಿಂದ ಬಿಷ್ಣೋಯ್ ಗ್ಯಾಂಗ್ ಆತಂಕ ಹೆಚ್ಚಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Who Is Anil Pandit: ಟೈಗರ್ ಶ್ರಾಫ್ ಮೇಲೆ ಫೈರಿಂಗ್, ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ ಅನಿಲ್ ಪಂಡಿತ್ ಯಾರು, ಎಲ್ಲಿದ್ದಾನೆ?
TIGER SHROFF: ಗುಂಡಿನ ದಾಳಿ ಬಳಿಕ ಟೈಗರ್‌ ಶ್ರಾಫ್‌ ಹೇಗಿದ್ದಾರೆ? ಅವ್ರ ಬಂಗ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?