ನಟಿಯ ತುಟಿಗೆ ತುಟಿ ಸೇರಿಸಿದ ಚೆಲುವೆಯರ ಕಿಸ್ಸಿಂಗ್ ಕಥೆಗಳು!

By Mahmad Rafik  |  First Published Jun 12, 2024, 2:36 PM IST

ಕೆಲ ನಟಿಯರು ಪಾರ್ಟಿ ಅಂತಹ ಸಮಾರಂಭಗಳಲ್ಲಿ ತಮ್ಮ ಸಹ ನಟಿಗೆ ಕಿಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆ ನಟಿಯರು ಯಾರು ಎಂಬುದರ ಮಾಹಿತಿ ಇಲ್ಲಿದೆ. 


ಇಂದು ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ (Kissing Actress)  ಕಾಮನ್. ಅದರಲ್ಲಿಯೂ ಬಾಲಿವುಡ್ ಸಿನಿಮಾಗಳಲ್ಲಿ (Bollywood Cinema) ಕಿಸ್ಸಿಂಗ್ ಸೀನ್ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಒಂದು ಸಿನಿಮಾ ಹಿಟ್ ಅಗಬೇಕಾದ್ರೆ ರೊಮ್ಯಾಂಟಿಕ್ ಸೀನ್ ಬೇಕೆಂಬ ಪರಿಪಾಟಿಲಿಗೆ ಬಂದಂತೆ ಆಗಿದೆ. ವೀಕ್ಷಕರು ಮಾತ್ರ ಈ ಮಾತನ್ನು ಸುಳ್ಳು ಮಾಡುತ್ತಲೇ ಇದ್ದಾರೆ. ಒಳ್ಳೆ ಕತೆಯ ಸಿನಿಮಾಗಳಿಗೆ ಪ್ರಚಾರ ಮಾಡದಿದ್ದರೂ ಜನರು ಥಿಯೇಟರ್‌ಗೆ ಬರುತ್ತಾರೆ.  ಸನ್ನಿ ಲಿಯೋನ್, ನಿತ್ಯಾ ಮೆನನ್ ಸೇರಿದಂತೆ ಸಿನಿಮಾಗಳಲ್ಲಿ ನಟಿತ ಜೊತೆ ಕಿಸ್ ಮಾಡಿದ್ದರು. ಕೆಲ ನಟಿಯರು ಪಾರ್ಟಿ ಅಂತಹ ಸಮಾರಂಭಗಳಲ್ಲಿ ತಮ್ಮ ಸಹ ನಟಿಗೆ ಕಿಸ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆ ನಟಿಯರು ಯಾರು ಎಂಬುದರ ಮಾಹಿತಿ ಇಲ್ಲಿದೆ. 

1.ನಿತ್ಯಾ ಮೆನನ್ ಮತ್ತು ಶೃತಿ ಬಾಪ್ನಾ Nitya Menon and Shruti Bapna

Tap to resize

Latest Videos

ಅಮೆಜಾನ್ ಪ್ರೈಮ್‌ನ ಬ್ರೀತ್ 2 ವೆಬ್ ಸಿರೀಸ್‌ನಲ್ಲಿ ನಟಿ ನಿತ್ಯಾ ಮೆನನ್ ಮತ್ತು ಶೃತಿ ಬಾಪ್ನಾ ಲಿಪ್ ಲಾಕ್ ಮಾಡಿದ್ದರು. ನಿತ್ಯಾ ಮೆನನ್ ಮತ್ತು ಶೃತಿ ಬಾಪ್ನಾ ರೊಮ್ಯಾಂಟಿಕ್ ದೃಶ್ಯದಲ್ಲಿಯೂ ಇಬ್ರು ನಟಿಸಿದ್ದರು. ಕತೆಯಲ್ಲಿ ಲಿಪ್ ಲಾಕ್ ಸೀನ್ ಅಗತ್ಯವಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ವೆಬ್‌ಸಿರೀಸ್ ನಲ್ಲಿ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

2.ನಿಯಾ ಶರ್ಮಾ ಮತ್ತು ರೆಹನಾ ಮಲ್ಹೋತ್ರಾ Nia Sharma and Reyhna Malhotra

ಜಮಾಯಿ ರಾಜಾ ಧಾರಾವಾಹಿಯಲ್ಲಿ ನಿಯಾ ಮತ್ತು ರೆಹನಾ ಜೊತೆಯಾಗಿ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ತುಟಿಗೆ ತುಟಿ ಸೇರಿಸಿರುವ ಫೋಟೋ ಲೀಕ್ ಆಗಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ನಿಯಾ ಶರ್ಮಾ, ಇದೆನೋ ದೊಡ್ಡ ವಿಷಯವಲ್ಲ. ನಾವಿಬ್ಬರೂ ಪ್ರತಿದಿನ ಹಗ್ ಮಾಡಿ ಚುಂಬಿಸುತ್ತೇವೆ. ಇದೊಂದು ಜಸ್ಟ್ ಕಿಸ್‌. ಇದನ್ನ ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದರು. ರೆಹನಾ ಮಾತನಾಡಿ, ಅದೊಂದು ಜಸ್ಟ್ ಫನ್. ಕಿಸ್ ಮಾಡುವಾಗ ನಮ್ಮಲ್ಲಿ ಯಾವ ಕೆಟ್ಟ ಭಾವನೆಗಳು ಇರಲಿಲ್ಲ ಮತ್ತು ಮುಂದೆಯೂ ಇರಲ್ಲ ಎಂದು ಸ್ಪಷ್ಟಪಡಿಸಿದ್ದರು.

3.ರಾಖಿ ಸಾವಂತ್ ಮತ್ತು ಕೈನಾಜ್ ಪೆರ್ವೀಸ್- Rakhi Sawant And Kainaaz Pervees

ಡ್ರಾಮಾ ಕ್ವೀನ್ ಅಂತಾನೇ ಫೇಮಸ್ ಆಗಿರೋ ರಾಖಿ ಸಾವಂತ್ ಪಾರ್ಟಿಯೊಂದರಲ್ಲಿ ಕೈನಾಜ್ ಪೆರ್ವೀಸ್ ಎಂಬವರೊಂದಿಗೆ ಕಿಸ್ ಮಾಡಿದ್ದರು. ಅಂದು ಇವರಿಬ್ಬರ ಚುಂಬನದ ಸುದ್ದಿ ಪತ್ರಿಕೆಗಳ ಫ್ರಂಟ್‌ ಪೇಜ್‌ನಲ್ಲಿ ಬಂದಿತ್ತು. ಇದಕ್ಕೂ ಮುನ್ನ ರಾಖಿಗೆ ಗಾಯಕ ಮಿಲ್ಕಾ ಸಿಂಗ್ ಸಾರ್ವಜನಿಕವಾಗಿ ಕಿಸ್ ಮಾಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೈನಾಜ್, ಪಾರ್ಟಿಯಲ್ಲಿ ಕಿಸ್ ಮಾಡುವಂತೆ ಮಾಡಿದರು ಎಂದು ಹೇಳಿದ್ದರು. ಈ ಘಟನೆ ಬಳಿಕ ನೀವೂ ರಾಖಿಯನ್ನು ಇಷ್ಟಪಡಲ್ಲ ಆದ್ರೆ ದ್ವೇಷ ಮಾಡಲು ಸಹ ಆಗಲ್ಲ. ಹಾಗಂತ ರಾಖಿಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂಬ ಮಾತು ಚಾಲ್ತಿಯಲ್ಲಿ ಬಂತು.

ಕದ್ದುಮುಚ್ಚಿ ಥಾಯ್ಲೆಂಡ್ ಪ್ರವಾಸ, ಸೀರಿಯಲ್ ನಟ-ನಟಿಯ ಕಿಸ್ಸಿಂಗ್ ವಿಡಿಯೋ ವೈರಲ್!

4.ಸಾರಾ ಖಾನ್ ಮತ್ತು ಪ್ರತ್ಯುಷಾ ಬ್ಯಾನರ್ಜಿ- Sara Khan and Pratyusha Banerjee

ನಟಿ ಸಾರಾ ಖಾನ್ ತಮ್ಮ ಬರ್ತ್ ಡೇ ಪಾರ್ಟಿಗೆ ಆಗಮಿಸಿದ್ದ ಪ್ರತ್ಯುಷಾ ಬ್ಯಾನರ್ಜಿಗೆ ಕಿಸ್ ಮಾಡಿದ್ದರು. ಇದಕ್ಕೂ ಮೊದಲು ಪೂಜಾ ಬೋಸ್‌ಗೆ ಕಿಸ್ ಮಾಡುವ ಮೂಲಕ ಸಾರಾ ಸುದ್ದಿಯಲ್ಲಿದ್ದರು. ಇದಾದ ಕೆಲವೇ ದಿನಗಳಲ್ಲಿ ಪ್ರತ್ಯುಷಾರನ್ನು ಚುಂಬಿಸಿದ್ದರು. ಬಾಲಿಕಾ ವಧು ಧಾರಾವಾಹಿ ಮೂಲಕ ಪ್ರತ್ಯುಷಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಸಾರಾ ತನ್ನ ಎಲ್ಲಾ ಗೆಳತಿಯರಿಗೆ ಕಿಸ್ ಮಾಡಲು ಬಯಸುತ್ತಾಳೆ. ಸಾರಾಗೆ ನಟಿಯರಿಗೆ ಕಿಸ್ ಮಾಡುವ ಮೂಲಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಮಾತನಾಡಿದ್ದ ಸಾರಾ ಖಾನ್, ನನಗೆ ಪ್ರತ್ಯುಷಾ ಸ್ನೇಹಿತೆ ಅಲ್ಲ. ಆಕೆ ನನ್ನ ಗೆಳೆಯನ ಸ್ನೇಹಿತೆ. ನನ್ನ ಹೆಸರು ಬಳಸಿಕೊಂಡು ಸುದ್ದಿಯಲ್ಲಿರಲು ಪ್ರತ್ಯುಷಾ ಬಯಸುತ್ತಾಳೆ ಎಂದು ಆರೋಪಿಸಿದ್ದರು.

5.ವೀಣಾ ಮಲೀಕ್ ಮತ್ತು ಬಾಬಿ ಡಾರ್ಲಿಂಗ್ - Veena Malik And Bobby Darling

ಪಾಕಿಸ್ತಾನಿ ನಟಿ ವೀಣಾ ಮಲೀಕ್ ತನ್ನ ಬರ್ತ್ ಡೇ ಪಾರ್ಟಿಯಲ್ಲಿ ಸಹ ನಟ ಬಾಬಿ ಡಾರ್ಲಿಂಗ್‌ಗೆ ಸಾರ್ವಜನಿಕವಾಗಿ ಕಿಸ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಇವರಿಬ್ಬರ ಕಿಸ್ ಬರ್ತ್ ಡೇ ಪಾರ್ಟಿಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು. ವೀಣಾ ಮಲಿಕ್ ಮತ್ತು ಬಾಬಿ ಡಾರ್ಲಿಂಗ್ ಇಬ್ಬರೂ ಬಾಲಿವುಡ್ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಸ್ ಬಗ್ಗ ಇಬ್ಬರು ಓಕೆ ಅಂತೇಳಿದ್ದರು. ಆದ್ರೆ ಪಾರ್ಟಿಯಲ್ಲಿ ನಡೆದ ಈ ಘಟನೆಯಿಂದ ಅತಿಥಿಗಳು ಒಂದು ಕ್ಷಣ ಶಾಕ್ ಆಗಿದ್ದರು.

ಡಕಾಯತ್​ ಚಿತ್ರದಲ್ಲಿ ಸನ್ನಿ ಡಿಯೋಲ್​ಗೆ ಕಿಸ್​ ಮಾಡಿದಾಗ ಏನಾಯ್ತೆಂದು ತಿಳಿಸಿದ ನಟಿ ಮೀನಾಕ್ಷಿ ಶೇಷಾದ್ರಿ

6.ಸಾರಾ ಖಾನ್  ಮತ್ತು ಪೂಜಾ ಬೋಸ್: Sara Khan And Poja Bose

ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾದಾಗ ಇಬ್ಬರು ನಟಿಯರು ಇದು ಸುಳ್ಳು ಎಂದು ಹೇಳಿಕೊಂಡಿದ್ದರು. ಆದ್ರೆ ಕೆಲ ದಿನಗಳ ಬಳಿಕ ಸಾರಾ ಖಾನ್ ಕಿಸ್ ಮಾಡಿರೋದನ್ನು ಒಪ್ಪಿಕೊಂಡಿದ್ದರು. ನಾನು ಪೂಜಾ ತುಟಿಗಳಿಗೆ ಚುಂಬಿಸಿದ್ದೇನೆ. ಆದ್ರೆ ನಾವಿಬ್ಬರು ಸಲಿಂಗಿಗಳು ಅಲ್ಲ. ಇದು ಒಬ್ಬರಿಗೊಬ್ಬರು ಪ್ರೀತಿಯನ್ನು ತೋರಿಸುವ ರೀತಿ ಎಂದು ಸಾರಾ ಹೇಳಿಕೊಂಡಿದ್ದರು.

7. ಮಿಂಕ್ ಬ್ರಾರ್ ಮತ್ತು ಮಾಲ್  Mink Brar And Model

ಬಿಗ್ ಬಾಸ್ ಸ್ಪರ್ಧಿ ಮಿಂಕ್ ಬ್ರಾರ್ ಈಜುಕೊಳದಲ್ಲಿ ಮಾಡೆಲ್ ಒಬ್ಬರ ತುಟಿಗೆ ತಮ್ಮ ತುಟಿಗಳನ್ನು ಸೇರಿಸಿದ್ದರು. ಈ ಫೋಟೋ ಲೀಕ್ ಬಳಿಕ ಮಿಂಕ್ ತಾನು ಲೆಸ್ಬಿಯನ್ ಎಂದು ಘೋಷಿಸಿಕೊಂಡಿದ್ದರು.

click me!