ಆಕ್ಷನ್‌ ಕಿಂಗ್‌ ಮನೆಯಲ್ಲಿ ಮದುವೆ ಸಡಗರ, ಮುಹೂರ್ತ ಫಿಕ್ಸ್; ಫೋಟೋಗಳು ವೈರಲ್‌ ಆಗಿವೆ

Published : Oct 09, 2026, 07:45 AM IST
Arjun Sarja daughter Anjana marriage

ಸಾರಾಂಶ

ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಎರಡನೇ ಮಗಳು ಅಂಜನಾ ಅಕ್ಟೋಬರ್‌ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಗಳ 13 ವರ್ಷಗಳ ಪ್ರೀತಿಗೆ ಸರ್ಜಾ ಕುಟುಂಬ ಗ್ರೀನ್ ಸಿಗ್ನಲ್ ನೀಡಿದೆ.

ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಕ್ಟೋಬರ್‌ 18 ರಂದು ಅರ್ಜುನಾ ಸರ್ಜಾ ಅವರ ಎರಡನೇ ಮಗಳಾದ ಅಂಜನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಶುಭ ಕಾರ್ಯ ನೆರವೇರಲಿದ್ದು, ಸರ್ಜಾ ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿ ನಡೀತಿದೆ.

ಸರ್ಜಾ ಮಗಳು ಅಂಜನಾ ಕಳೆದ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಅವರನ್ನೇ ವರಿಸಲಿದ್ದಾರೆ. ಆದರೆ ಅವರ ಕುಟುಂಬದಿಂದ ಮದುವೆ ಹುಡುಗನ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿಯನ್ನ ನೀಡಿಲ್ಲ. ವೃತ್ತಿಯಲ್ಲಿ ಫ್ಯಾಷನ್‌ ಡಿಸೈನರ್‌ ಆಗಿರುವ ಅಂಜನಾ, ವಿದೇಶಿ ಹುಡುಗನನ್ನು ಪ್ರೀತಿಸುತ್ತಿದ್ದಾರೆ. 2025ರಲ್ಲಿ ಈ ಜೋಡಿ ಎಂಗೇಜ್‌ ಆಗಿದೆ. ಅಂಜನಾ ಅರ್ಜುನ್ ಎಂಗೇಜ್ ಆಗಿರುವ ಭಾವೀ ಪತಿಯ ಹೆಸರು Isaiah. ಆದರೆ Isaiah ಯಾರು? ಆತನ ಹಿನ್ನೆಲೆ ಏನು? ಅನ್ನೋದ್ರ ಬಗ್ಗೆ ಸರ್ಜಾ ಕುಟುಂಬ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. 13 ವರ್ಷಗಳ ಬಳಿಕ ಇವರ ಪ್ರೀತಿಗೆ ಸರ್ಜಾ ಕುಟುಂಬದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎಂದು ಹೇಳಲಾಗಿದೆ.

ಇನ್ನು ಈ ಜೋಡಿ 2025ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. Isaiah ಇಟಲಿಯ ಮೂಲದವರು. ಇಟಲಿಯ ಲೇಕ್ ಕೋಮೋದಲ್ಲಿ ಇವರಿಬ್ಬರ ಎಂಗೇಜ್ಮೆಂಟ್‌ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅಂಜನಾ ಮತ್ತು ಆಕೆಯ ಭಾವಿ ಪತಿಯ ಫೋಟೋಗಳು ವೈರಲ್‌ ಆಗ್ತಿವೆ. ಪ್ರೇಮಿಗಳ ಫೋಟೋ ನೋಡಿರುವ ಅಭಿಮಾನಿಗಳು ಜೋಡಿ ಹಕ್ಕಿಗಳಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

ಅರ್ಜುನ್‌ ಸರ್ಜಾ 1988ರಲ್ಲಿ ನಟಿ ನಿವೇದಿತಾ ಅವರನ್ನು ಪ್ರೀತಿಸಿ ಮದುವೆ ಆದರು. ಈ ಜೋಡಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಯ ಮಗಳು ಐಶ್ವರ್ಯ ಹೀರೋಯಿನ್‌ ಆಗಿದ್ದು 2024ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಎರಡನೇ ಪುತ್ರಿ ಅಂಜನಾ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಇನ್ನು ಐಶ್ವರ್ಯ ಅರ್ಜುನ್‌ ಸರ್ಜಾ ಅವರ ವ್ಯವಹಾರ ಹಾಗೂ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಅಂಜನಾ ಸಿನಿಮಾ ರಂಗದಿಂದ ದೂರ ಇದ್ದಾರೆ.

ಅಂಜನಾ ಏನು ಮಾಡುತ್ತಿದ್ದಾರೆ?

ಅಂಜನಾ ಅರ್ಜುನ್ ಪಾರ್ಸನ್ಸ್‌ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಫ್ಯಾಶನ್ ಮಾರ್ಕೆಟಿಂಗ್ ವ್ಯಾಸಂಗ ಮಾಡಿದ್ದಾರೆ. ಅಂಜನಾ 2023ರಲ್ಲಿ ಹ್ಯಾಂಡ್‌ಬ್ಯಾಗ್‌ ತಯಾರಿಕಾ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ವಿಶೇಷ ಅಂದರೆ ಇವರು ಸ್ಥಾಪಿಸಿದ ಕಂಪನಿಯಿಂದ ಹಣ್ಣಿನ ಸಿಪ್ಪೆಗಳು, ತರಕಾರಿ ಸಿಪ್ಪೆ ಹಾಗೂ ಲಿನಿನ್‌ನಿಂದತಯಾರಿಸಿದ ಸಿಪ್ಪೆಗಳಿಂದ ಬ್ಯಾಗ್‌ಗಳನ್ನ ತಯಾರಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಇವರ ಪ್ರಾಡೆಕ್ಟ್‌ಗಳಿಗೆ ಭಾರೀ ಡಿಮ್ಯಾಂಡ್‌ ಇದೆ. ಬ್ಯುಸಿನೆಸ್‌ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rural star Anjan: ಹುಲಿಬೀರ್‌ ಕ್ಲೈ ಮಾಕ್ಸ್‌; ನಂದೇನು ಇಲ್ಲ ಎಲ್ಲ ಎಲ್ಲವನ ಪವಾಡ ಎಂದ ಅಂಜನ್!
ಶೀಘ್ರದಲ್ಲಿ ಪ್ರೇಕ್ಷಕರಿಗೆ ವಿದಾಯ ಹೇಳಲಿದೆ ಜನಮೆಚ್ಚಿದ ಜೋಡಿಯ ಬ್ಲಾಕ್ ಬಸ್ಟರ್ ಸೀರಿಯಲ್