
ಬೆಂಗಳೂರು[ಅ.17]: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ದಿ ವಿಲನ್ ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಚಿತ್ರ ಕೆಲವು ಕಡೆ ಇಂದು ಮಧ್ಯರಾತ್ರಿಯೇ ರಿಲೀಸ್ ಆಗುತ್ತಿದೆ. ಇಬ್ಬರು ದಿಗ್ಗಜರು ನಟಿಸಿರುವ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಂತೆಯೇ ಚಿತ್ರ ಮಂದಿರಗಳ ಮಾಲೀಕರಿಗೆ ನಡುರಾತ್ರಿಯಲ್ಲಿಯೇ ದಿ ವಿಲನ್ ಚಿತ್ರದ ಪ್ರದರ್ಶನ ಆರಂಭಿಸಲು ಬೇಡಿಕೆ ಇಡುತ್ತಿದ್ದಾರೆ.
ಇನ್ನೂ ದಿ ವಿಲನ್ ಸಿನಿಮಾದ ಬಿಡುಗಡೆಗೆ ಮುನ್ನವೇ ಮೂರು ದಿನ ಮುಂಚೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ತನ್ವಿ ಫಿಲ್ಮ್ಸ್ ಮತ್ತು ಜಯಾದಿತ್ಯ ಪ್ರೊಡಕ್ಷನ್ ಹೌಸ್‌ನಿಂದ ಚಿತ್ರ ನಿರ್ಮಿಸಲಾಗಿದೆ. ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದಾರೆ. ಸ್ಟಾರ್ ನಟಿಯರಾದ ರಚಿತಾ ರಾಮ್, ಭಾವನಾ ರಾವ್, ಸಂಯುಕ್ತಾ ಹೊರನಾಡು, ರಾಧಿಕಾ ಚೇತನ್, ಶ್ರದ್ಧಾ ಶ್ರೀನಾಥ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಲೋಹಿತಾಶ್ವ, ಕುರಿ ಪ್ರತಾಪ್, ಮಂಡ್ಯ ರಮೇಶ್ ಮತ್ತಿತರರು ನಟಿಸಿದ್ದಾರೆ.
ಮತ್ತೊಂದು ಗಂಧದ ಗುಡಿ ಆಗುತ್ತಾ ದಿ ವಿಲನ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.