ರಾಜು ಕನ್ನಡ ಮೀಡಿಯಂನಲ್ಲಿ ಕಿಚ್ಚನ ಪಾತ್ರದ ಗುಟ್ಟು ರಟ್ಟು!

Published : Aug 14, 2017, 01:11 PM ISTUpdated : Apr 11, 2018, 12:57 PM IST
ರಾಜು ಕನ್ನಡ ಮೀಡಿಯಂನಲ್ಲಿ ಕಿಚ್ಚನ ಪಾತ್ರದ ಗುಟ್ಟು ರಟ್ಟು!

ಸಾರಾಂಶ

ನಟ ಗುರುನಂದನ್ ಅವರ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ನರೇಶ್ ಕುಮಾರ್ ನಿರ್ದೇಶಿಸಿ, ಕೆ ಎ ಸುರೇಶ್ ನಿರ್ಮಿಸುತ್ತಿರುವ ಈ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸುದೀಪ್ ಯಾವ ಪಾತ್ರ ಮಾಡುತ್ತಿದ್ದಾರೆಂಬುದು ಮಾತ್ರ ಇಲ್ಲಿವರೆಗೂ ಗುಟ್ಟಾಗಿಯೇ ಇತ್ತು.

ಬೆಂಗಳೂರು(ಆ.14): ನಟ ಗುರುನಂದನ್ ಅವರ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ನರೇಶ್ ಕುಮಾರ್ ನಿರ್ದೇಶಿಸಿ, ಕೆ ಎ ಸುರೇಶ್ ನಿರ್ಮಿಸುತ್ತಿರುವ ಈ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸುದೀಪ್ ಯಾವ ಪಾತ್ರ ಮಾಡುತ್ತಿದ್ದಾರೆಂಬುದು ಮಾತ್ರ ಇಲ್ಲಿವರೆಗೂ ಗುಟ್ಟಾಗಿಯೇ ಇತ್ತು.

ವಿರಾಮದ ನಂತರ ಬಂದು ಚಿತ್ರದ ಕೊನೆಯವರೆಗೂ ಇರುವಂತಹ ಸುದೀಪ್ ಪಾತ್ರ ಹೇಗಿರುತ್ತದೆಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಈ ಚಿತ್ರದಲ್ಲಿ ಸುದೀಪ್ ಅವರ ಆಗರ್ಭ ಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲ್ಟಿ ಮಿಲಿಯೇನಿಯರ್ ಪಾತ್ರ ನಿರ್ವಹಿಸುತ್ತಿರುವ ಸುದೀಪ್ ಅವರಿಗೆ ಗಾಲ್ಫ್ ಆಡುವುದು ಕೂಡ ಪ್ಯಾಷನ್. ಇಂಥ ಆಗರ್ಭ ಶ್ರೀಮಂತ ಹೇಗೆ ಚಿತ್ರದ ನಾಯಕ ಗುರುನಂದನ್ ಅವರಿಗೆ ಸ್ಫೂರ್ತಿಯಾಗುತ್ತಾರೆ ಎಂಬುದು ಕಿಚ್ಚನ ಪಾತ್ರದ ಅಸಲಿ ರಹಸ್ಯ.

ಸುದೀಪ್ ಅವರ ಈ ಕ್ಯಾರೆಕ್ಟರ್ ಅನ್ನು ಗಮನದಲ್ಲಿಟ್ಟುಕೊಂಡೇ ಇಡೀ ಚಿತ್ರದಲ್ಲಿ ಅವರನ್ನು ತುಂಬಾ ಸ್ಟೈಲೀಶ್ ಆಗಿ ತೋರಿಸಲಾಗಿದೆಯಂತೆ. ಹಾಗೆ ನೋಡಿದರೆ ಸುದೀಪ್ ಅವರು ಇದುವರೆಗೂ ಯಾವ ಚಿತ್ರದಲ್ಲಿ ಸಾಲ್ಟ್ ಆ್ಯಂಡ್ ಪೆಪ್ಪರ್ ಗಡ್ಡದಲ್ಲಿ ಕಾಣಿಸಿಕೊಂಡಿಲ್ಲ. ಮುಖದ ಮೇಲೆ ಒಂದೇ ಒಂದು ಬಿಳಿ ಕೂದಲು ಇಲ್ಲದ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿದ್ದು ಸದ್ಯದ ಟ್ರೆಂಡಿ ಲುಕ್ ನಂತಾಗಿದೆ. ಎಲ್ಲ ಕಡೆ ಸುದೀಪ್ ಗಾಲ್ಫ್ ಸ್ಟಿಕ್ ಹಿಡಿದು ನಿಂತಿರುವ ಫೋಟೋಗಳು ವೈರಲ್ ಆಗಿವೆ.

ಹೀಗೆ ಟ್ರೆಂಡಿಯಾಗಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿನ ಸುದೀಪ್ ಲುಕ್ ಕೂಡ ಒಂದು ಹೈಲೈಟ್ ಎನ್ನುವುದು ಚಿತ್ರತಂಡದ ಮಾತ್ರ. ಸದ್ಯಕ್ಕೆ ಚಿತ್ರದಲ್ಲಿ ಕಿಚ್ಚ ಮಲ್ಟಿ ಮಿಲಿಯೇನಿಯರ್ ಪಾತ್ರ ಮಾಡುತ್ತಿರುವ ಗುಟ್ಟು ರಟ್ಟಾಗಿದೆ. ಇನ್ನು ಇಂಥ ಪಾತ್ರದಲ್ಲಿ ಸುದೀಪ್ ಹೇಗೆ ನಟಿಸಿದ್ದಾರೆಂಬುದನ್ನು ನೋಡುವುದಷ್ಟೆ ಬಾಕಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!