ಮಾರ್ಡನ್ ಲುಕ್‌ನಲ್ಲಿ ಮಾನಸ ಜೋಷಿ

 |  First Published Jun 30, 2018, 5:03 PM IST

ಮಾನಸ ಜೋಷಿ ಮತ್ತೆ ಸಿನಿಮಾ ಜಗತ್ತಿಗೆ ಹೊಸ ಲುಕ್‌ನೊಂದಿಗೆಮರಳುತ್ತಿದ್ದಾರೆ. ಗ್ಲಾಮರಸ್ ಗೆಟಪ್ ಮೂಲಕ ಕಮರ್ಷಿಯಲ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ತೆಲುಗು ಹಾಗೂ ಕನ್ನಡದ ತಲಾ ಒಂದು ಚಿತ್ರಕ್ಕೆ ನಾಯಕಿ ಆಗುತ್ತಿದ್ದಾರಂತೆ. 


ಈಗವರು ಸೀರಿಯಲ್  ನಲ್ಲಿ ಬ್ಯುಸಿ ಆಗಿದ್ದಾರೆ. ‘ಮಹಾದೇವಿ’ ನಂತರ ಸ್ಟಾರ್ ಸುವರ್ಣ ವಾಹಿನಿಯ ‘ಶ್ರೀ’ ಸೀರಿಯಲ್‌ಗೆ ನಾಯಕಿ ಆಗಿದ್ದಾರೆ. ಸದ್ಯಕ್ಕೀಗ ಅದರ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗಿದೆ. 

ಜುಲೈ ೨ರಿಂದ ಪ್ರಸಾರವಾಗಲಿರುವ ‘ಶ್ರೀ’ ತಾಯಿ-ಮಗಳ ಕಥಾನಕ. ಮಾನಸ ಜೋಷಿ ಅವರಿಗೆ ತಮ್ಮ ಸಿರೀಯಲ್ ಜರ್ನಿಯ ಮಟ್ಟಿಗೆ ಇದೊಂದು ಹೊಸ ಬಗೆಯ ಪಾತ್ರ ಎನ್ನುವ ಖುಷಿಯಿದೆ. ‘ಸಿನಿಮಾ ಮತ್ತು ಸೀರಿಯಲ್ಮಟ್ಟಿಗೆ ವೆರೈಟಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಾ ಬರುತ್ತಿದ್ದೇನೆ. ಇದೊಂದು ಒಳ್ಳೆಯ ಪಾತ್ರ ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಆದ್ರೆ, ನನ್ನ ಗಮನ ಸಿನಿಮಾ ಕಡೆಗೇ ಇದೆ. ತೆಲುಗು ಸಿನಿಮಾವೊಂದರ ಆಫರ್ ಬಂದಿದೆ. ಯಾವುದು ಫೈನಲ್ ಆಗಿಲ್ಲ’ ಎನ್ನುತ್ತಾರೆ ಮಾನಸ ಜೋಷಿ.

Tap to resize

Latest Videos

click me!