'ಏಳುಮಲೆ' ಸಿನಿಮಾ ದಾಖಲೆ ಬರೆಯುತ್ತಾ? ಸಕ್ಸಸ್‌ ಮೀಟ್‌ನಲ್ಲಿ ತರುಣ್ ಸುಧೀರ್ ಏನಂದ್ರು?

Published : Sep 12, 2025, 01:09 PM IST
Tharun Sudheer Movie Elumale Success meet

ಸಾರಾಂಶ

ಏಳುಮಲೆ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾ ಗೆಲುವಿನ ಬಗ್ಗೆ ನಿರ್ಮಾಪಕ ತರುಣ್ ಸುಧೀರ್ 'ಏಳುಮಲೆ‌ ಸಿನಿಮಾಗೆ ಸಿಕ್ಕುತ್ತಿರುವ ಅದ್ಭುತ ಪ್ರತಿಕ್ರಿಯೆ. ಪಾಸಿಟಿವ್ ಟಾಕ್ ಬರಲು ಟೀಂ, ಪ್ರೇಕ್ಷಕರು, ಮೀಡಿಯಾ ಕಾರಣ.‌ ಇವರೆಲ್ಲರಿಗೂ ಧನ್ಯವಾದಗಳು.

ಈ ವರ್ಷದ ಮತ್ತೊಂದು ಒಳ್ಳೆ ಸಿನಿಮಾಗಳ ಸಾಲಿಗೆ ಏಳುಮಲೆ ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ (Tharun Sudhir) ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಿರುವ ಏಳುಮಲೆ (Elumale) ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. 

ಪ್ರೇಕ್ಷಕರ ಹೃದಯ ಗೆದ್ದ 'ಏಳುಮಲೆ'.. ಸಕ್ಸಸ್‌ ಮೀಟ್‌ನಲ್ಲಿ ತರುಣ್ ಸುಧೀರ್ ಹೇಳಿದ್ದೇನು?

ಇನ್ನೂ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪುನೀತ್ ರಂಗಸ್ವಾಮಿಯಂತಹ ಒಳ್ಳೆ ನಿರ್ದೇಶಕರು ಸಿಕ್ಕಿದ್ದಾರೆ. ಯಶಸ್ವಿ ಹಾದಿಯಲ್ಲಿ ಚಿತ್ರ ಸಾಗುತ್ತಿದ್ದು, ಚಿತ್ರತಂಡ ಈ ಬಗ್ಗೆ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ‌ ಎಂಎಂಬಿ ಲೆಗಸಿಯಲ್ಲಿ ಏಳುಮಲೆ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾ ಗೆಲುವಿನ ಬಗ್ಗೆ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ಏಳುಮಲೆ‌ ಸಿನಿಮಾಗೆ ಸಿಕ್ಕುತ್ತಿರುವ ಅದ್ಭುತ ಪ್ರತಿಕ್ರಿಯೆ. 

ಪಾಸಿಟಿವ್ ಟಾಕ್ ಬರಲು ಟೀಂ, ಪ್ರೇಕ್ಷಕರು ಹಾಗೂ ಮೀಡಿಯಾ ಕಾರಣ.‌ ಇವರೆಲ್ಲರಿಗೂ ಧನ್ಯವಾದಗಳು. ನಾನು ಈ ಸಿನಿಮಾ ಮಾಡಲು ನಾನು ನಂಬಿದ್ದು ಎರಡನ್ನೇ. ಈ ಕಥೆ ಹಾಗೂ ಕನ್ನಡ ಪ್ರೇಕ್ಷಕರನ್ನು. ಒಳ್ಳೆ ಕಂಟೆಂಟ್ ನ್ನು ಪ್ರೇಕ್ಷಕರು ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಚೌಕ ಸಿನಿಮಾ ಹೇಗೆ ನಿಧಾನವಾಗಿ ಪಿಕಪ್ ಆಯ್ತು. ಅದೇ ರೀತಿ ಏಳುಮಲೆ ಸಿನಿಮಾ ಕೂಡ ಪಿಕಪ್ ಆಯ್ತು. ಇಲ್ಲಿಯವರೆಗೂ ಅದ್ಭುತವಾದ ಕಲೆಕ್ಷನ್ ಆಗಿದೆ. ಈ ಸಿನಿಮಾ ಚಾಲೆಂಜಿಂಗ್. ಅದನ್ನು ಇಡೀ‌ ತಂಡ ಫುಲ್ ಮಾಡಿದೆ ಎಂದರು.

ಪ್ರೇಕ್ಷಕರ ಹೃದಯ ಗೆದ್ದ 'ಏಳುಮಲೆ'.. ಸಕ್ಸಸ್‌ ಮೀಟ್‌:

ಕರ್ನಾಟಕ ಹಾಗೂ ತಮಿಳುನಾಡಿ ಗಡಿ ಪ್ರದೇಶದಲ್ಲಿ ನಡೆಯುವ ನೈಜ ಕಥೆ ಸಿನಿಮಾಪ್ರೇಮಿಗಳಿಗೆ ಇಷ್ಟವಾಗಿದೆ. ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರೀಕ್ಷೆ ಇಟ್ಟುಕೊಳ್ಳದೇ ಥಿಯೇಟರ್ ಗೆ ಹೋದರೆ ನಿರೀಕ್ಷೆಗೂ‌ ಮೀರಿ ಇಷ್ಟವಾಗುವ ಸಿನಿಮಾ ಏಳುಮಲೆ.

ಏಳುಮಲೆ ಚಿತ್ರ ರಿಲೀಸ್ ಆಗಿದ್ದು ಯಾವಾಗ?

ಏಳುಮಳೆ ಚಿತ್ರ ಸೆಪ್ಟೆಂಬರ್-5 ರಂದು ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಒಳ್ಳೆ ಅಭಿಪ್ರಾಯ ಪಡೆದುಕೊಂಡಿದೆ. ಆ ಬಳಿಕ ಮೌತ್ ಪಬ್ಲಿಸಿಟಿ ಮೂಲಕ ಜನ ಏಳುಮಲೆ ಕಡೆ ಮುಖ‌ ಮಾಡಿದರು. ಚಿತ್ರ ನೋಡಿ ಪ್ರೇಕ್ಷಕರು ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪುನೀತ್ ರಂಗಸ್ವಾಮಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರ. ತರುಣ್ ಸುಧೀರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಿ ಇಮ್ಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?