ತ್ರಿಷಾ ಪ್ರೀತಿಯ ಬಲೆಯಲ್ಲಿ ದಳಪತಿ ವಿಜಯ್? ವಿರೋಧಿಗಳಿಗೆ ಹಬ್ಬ: ಈಗ ತಮಿಳುನಾಡು ಅಧಿಪತಿ!

Published : May 05, 2026, 04:56 PM IST
Thalapathy Vijay

ಸಾರಾಂಶ

ನಟಿ ತ್ರಿಷಾ ಹಾಗು ವಿಜಯ್ ಮಧ್ಯೆ ಗಟ್ಟಿಯಾದ ಗೆಳೆತನ ಬೆಳೆದುಕೊಂಡಿದೆ. ಅದಕ್ಕೆ ಕಾರಣ ಆಗಿದ್ದು ಲಿಯೋ ಸಿನಿಮಾ.. ಈ ಸಿನಿಮಾ ಬರೋ ಮೊದಲು ಇಬ್ಬರು ಸ್ನೇಹಿತರಾಗಿದ್ರು. ಆದ್ರೆ ಲಿಯೋ ಸಿನಿಮಾ ಬರೋ ಸಮಯದಲ್ಲಿ..

ನಟಿ ತ್ರಿಷಾ ಹಾಗು ವಿಜಯ್ ಮಧ್ಯೆ ಗಟ್ಟಿಯಾದ ಗೆಳೆತನ ಬೆಳೆದುಕೊಂಡಿದೆ. ಅದಕ್ಕೆ ಕಾರಣ ಆಗಿದ್ದು ಲಿಯೋ ಸಿನಿಮಾ.. ಈ ಸಿನಿಮಾ ಬರೋ ಮೊದಲು ಇಬ್ಬರು ಸ್ನೇಹಿತರಾಗಿದ್ರು. ಆದ್ರೆ ಲಿಯೋ ಸಿನಿಮಾ ಬರೋ ಸಮಯದಲ್ಲಿ ವಿಜಯ್ ತನ್ನ ದಾಂಪತ್ಯಕ್ಕೆ ಮಂಗಳ ಹಾಡೋ ಮನಸ್ಸು ಮಾಡಿದ್ರು. ಆಗ ತ್ರಿಷಾ ಜೊತೆಗಿನ ಸ್ನೇಹ ಗಟ್ಟಿಯಾಗಿ ಇಂದು ಇಬ್ಬರು ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಮೇ 4 ವಿಜಯ್​​ ರಾಜಕೀಯ ಜೀವನಕ್ಕೆ ಹೊಸ ಹಾದಿ ಕೊಟ್ಟಿದೆ. ಇದೇ ದಿನ ನಟಿ ತ್ರಿಷಾಗೂ ಸರ್​​ಪ್ರೈಸ್​ ಗಿಫ್ಟ್​ ಸಿಕ್ಕಿದೆ. ಪುಷ್ಪ ಸಿನಿಮಾದಲ್ಲಿ ಪುಷ್ಪರಾಜ್​​ ಸಿಎಂನೇ ಬದಲಾಯಿಸಿ ತನ್ನ ಹೆಂಡತಿ ಶ್ರೀವಲ್ಲಿಗೆ ಬರ್ತ್​ಡೇ ಗಿಫ್ಟ್ ಕೊಟ್ಟ ಹಾಗೆ ನಟಿ ತ್ರಿಷಾ ಹುಟ್ಟಿದ ದಿನವೇ ದಳಪತಿ ವಿಜಯ್​​​ ತನ್ನ ಟಿವಿಕೆ ಪಕ್ಷವನ್ನ ಗೆಲುವಿನ ದಡ ಸೇರಿಸಿದ್ದಾರೆ.

ಅಷ್ಟೆ ಅಲ್ಲ ನಟ ದಳಪತಿ ಕನಸು ನನಸಾಗಲಿ ಅಂತ ನಟಿ ತ್ರಿಷಾ ಹರಕೆ ಹೊತ್ತಿದ್ರೋ ಏನೋ ಗೊತ್ತಿಲ್ಲ. ಟಿವಿಕೆ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರ ಹೊಮ್ಮುತ್ತಿದ್ದಂತೆ ನಟಿ ತ್ರಿಷಾ ತಿರುಪತಿಗೆ ಹೋಗಿ ವಿಜಯ್ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಬಳಿಕ ನೇರವಾಗಿ ಚನ್ನೈನಲ್ಲಿರೋ ವಿಜಯ್ ಮನೆಗೆ ಹೋಗಿ ಶುಭಾಷಯ ತಿಳಿಸಿದ್ದಾರೆ. ಇದನ್ನೆಲ್ಲಾ ನೋಡಿ ಜಯಲಲಿಯಾ ಹಾಗು ಎಂಜಿಆರ್​ ಗೆ ನಟಿ ತ್ರಿಷಾ ಹಾಗಿ ವಿಜಯ್​​ರನ್ನ ಹೋಲಿಸಿ ಹಿಸ್ಟರಿ ರಿಪೀಟ್ ಎನ್ನುತ್ತಿದ್ದಾರೆ. ವಿಜಯ್ ಹಾದಿಯಲ್ಲಿ ತ್ರಿಷಾ ಕೂಡ ತಮಿಳುನಾಡು ರಾಜಕೀಯರಂಗ ಪ್ರವೇಶಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಎಂಜಿಆರ್ ಜೊತೆ ಜಯಲಲಿತಾ ರಾಜಕೀಯರಂಗಕ್ಕೆ ಬಂದಿದ್ದರು.

ಅದೇ ರೀತಿ ವಿಜಯ್ ಜೊತೆ ತ್ರಿಷಾ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳಿಂದ ಚರ್ಚೆ ನಡೀತಿದೆ. ಅದಕ್ಕೆ ಕಾರಣ ಈ ವೀಡಿಯೋ..10 ವರ್ಷಗಳ ಹಿಂದೆಯೇ ಸಂದರ್ಶನವೊಂದರಲ್ಲಿ ತ್ರಿಷಾ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರು. ಆಗ ಅದು ಕೆಲವರಿಗೆ ತಮಾಷೆ ಎನ್ನಿಸಿತ್ತು. ಆದರೆ ಆಕೆಯ ಕೋರಿಕೆ ನಿಜವಾಗೋ ಸಾಧ್ಯತೆ ಇದೆ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ ತ್ರಿಷಾಗೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬಹುದು. ಯಾವುದಾದರೂ ಒಂದು ಖಾತೆ ಕೊಡಬಹುದು ಎಂದು ಹೇಳಲಾಗುತ್ತಿದೆ.

ದಳಪತಿ ವಿಜಯ್ ಇವತ್ತು ಟಿವಿಕೆ ಪಕ್ಷವನ್ನ ಅಧಿಕಾರಕ್ಕೆ ತರಲು ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಮೆ. 7ಕ್ಕೆ ವಿಜಯ್ ಅಧಿಕಾರ ಸ್ವೀಕಾರ ಅನ್ನೋ ಮಾತುಗಳು ಶುರುವಾಗಿದೆ. ಆದ್ರೆ ವಿಜಯ್ ರಾಜಕೀಯಕ್ಕೆ ಎಂಟ್ರಿ ಆದ ದಿನದಿಂದ ಏನೆಲ್ಲಾ ಸವಾಲುಗಳನ್ನ ಆರೋಪಗಳನ್ನ ಎದುರಿಸಿದ್ದಾರೆ ಅಂತ ನೋಡಿದ್ರೆ ನಿಜಕ್ಕು ಆಶ್ಚರ್ವವಾಗುತ್ತೆ. ಯಾಕಂದ್ರೆ ವಿಜಯ್ ಹೆಜ್ಜೆ ಹೆಜ್ಜೆಗೂ ಆಪಾದನೆಗಳು ಸುತ್ತಿಕೊಂಡಿವೆ. ನಟ ವಿಜಯ್ ಟಿವಿಕೆ ಪಕ್ಷ ಕಟ್ಟಿಕೊಂಡು 2024ರಿಂದ ಪ್ರಚಾರಕ್ಕೆ ಧುಮುಕಿದ್ರು. ಆಗ ವಿಜಯ್​​​ಗೆ ರಾಜಕೀಯದ ಆಳ ಅಗಲ ಸಂಪೂರ್ಣವಾಗಿ ಇನ್ನೂ ಅರ್ಥವೇ ಆಗಿರಲಿಲ್ಲ. ಆಗಷ್ಟೇ ಉತ್ಸಾಹದಿಂದ ಜನರನ್ನು ಸೇರಿಸಿ ಸಾರ್ವಜನಿಕ ಸಭೆ, ಅಭಿಯಾನ ಅಂತ ಶುರು ಮಾಡಿದ್ದ ವಿಜಯ್​​ಗೆ ಕರೂರು ಕಾಲ್ತುಳಿತ ದೊಡ್ಡ ಸವಾಲು.

ವಿಜಯ್​​​​ರನ್ನ ನೋಡಲು ಬಂದಿದ್ದ ಲಕ್ಷಾಂತರ ಜನರಲ್ಲಿ 40ಕ್ಕೂ ಹೆಚ್ಚು ಕಾಲ್ತುಳಿತದಿಂದ ಪ್ರಾಣ ಬಿಟ್ಟಿದ್ರು. ಈ ದುರಂತ ವಿಜಯ್ ರಾಜಕೀಯ ಭವಿಷ್ಯವನ್ನೇ ಬುಡಮೇಲು ಮಾಡೋ ಹಾಗೆ ದೊಡ್ಡದಾಗಿತ್ತು. ಅಭಿಯಾನಗಳಿಗೆ ಅನುಮತಿ ಕೊಟ್ಟು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಆಗುತ್ತಿತ್ತು. ಇದು ತನ್ನ ಪಕ್ಷದ ಪ್ರಚಾರಕ್ಕೆ ವಿಜಯ್​ಗೆ ದೊಡ್ಡ ಹಿನ್ನಡೆಯಾಗಿತ್ತು. ಮುಂದಿನ ತಮಿಳು ನಾಡು ವಿಧಾನ ಸಭೆಗೆ ತನ್ನ ಟಿವಿಕೆ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕೆ ಶತ ಪ್ರಯತ್ನ ಮಾಡುತ್ತಿದ್ದ ದಳಪತಿ ವಿಜಯ್​​​​ಗೆ ಮತ್ತೊಂದು ದೊಡ್ಡ ತಲೆನೋವಾಗಿದ್ದು, ಪತ್ನಿ ಸಂಗೀತಾ ಜೊತೆಗಿನ ವಿಚ್ಛೇಧನ ಪ್ರಕರಣ. ಜನ ಸೇವೆ ಮಾಡೋದಕ್ಕೆ ನನಗೆ ಅವಕಾಶ ಕೊಡಿ ಅಂತ ಕೇಳುತ್ತಿದ್ದ ವಿಜಯ್​​​ ಗೆ ಸಂಸಾರವನ್ನೇ ನೆಟ್ಟಗೆ ಇಟ್ಟುಕೊಳ್ಳಲು ಬರುತ್ತಿಲ್ಲ ಅಂತ ಚರ್ಚೆಗಳು ಶುರುವಾಗಿದ್ವು.

ಅನೈತಿಕ ಸಂಬಂಧ ಇದೆ?

ಯಾಕಂದ್ರೆ ಪ್ರೀತಿಸಿ ಮದುವೆ ಆಗಿದ್ದ ಪತ್ನಿ ಸಂಗೀತಾ ವಿಜಯ್​​​ ಬಳಿ ಡಿವೋರ್ಸ್​​ ಕೇಳಿದ್ರು. ಹೌದು, ವಿಜಯ್​​​​ ಹಾಗು ತ್ರಿಷಾ ಮಧ್ಯೆ ಪ್ರೀತಿ ಮೊಳಕೆ ಒಡೆದಿದೆ ಅನ್ನೋ ಸುದ್ದಿ ತಮಿಳು ನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ನಟಿ ತ್ರಿಷಾ ಜೊತೆ ವಿಜಯ್ ಎಲ್ಲಂದರಲ್ಲಿ ಸುತ್ತೋಕೆ ಶುರು ಮಾಡಿದ್ರು. ಇದೇ ವಿಷಕ್ಕೆ ವಿಜಯ್​ರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ಅನ್ನೋ ಸುದ್ದಿಯೂ ಇದೆ. ನಟಿಯೊಬ್ಬಳ ಜೊತೆಗೆ ವಿಜಯ್ ಅನೈತಿಕ ಸಂಬಂಧ ಇದೆ ಅಂತ ಸಂಗೀತಾ ಕೋರ್ಟ್​ ಮೊರೆ ಹೋಗಿದ್ದಾರೆ.

ಈ ಪ್ರಕರಣ ಇದು ವಿಜಯ್ ವಿರೋಧಿಗಳಿಗಹೆ ರಾಮ ಬಾಣವಾಗಿತ್ತು. ಇನ್ನು ವಿಜಯ್ ಸಿನಿಮಾ ಖರಿಯರ್.. ವಿಜಯ್ ಚುನಾವಣೆಗೆ ಸ್ಪರ್ಧಿಸೋದಾಗಿ ಘೋಷಣೆ ಮಾಡಿದ ಮೇಲೆ ತನ್ನ ಕೊನೆ ಸಿನಿಮಾ ಜನ ನಾಯಗನ್ ಅಂತ ಅನೌನ್ಸ್ ಮಾಡಿದ್ರು. ಈ ಸಿನಿಮಾ ಪೊಲಿಟಿಕಲ್ ಡ್ರಾಮ ಆಗಿದ್ರಿಂದ ಹೇಗಿರುತ್ತೆ ಅನ್ನೋ ಕುತೂಹಲ ಇತ್ತು. ಕಳೆದ ಜನವರಿ 9 ರಂದು ಜನ ನಾಯಗನ್​ ರಿಲೀಸ್ ಆಗಬೇಕಿತ್ತು. ಆದ್ರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಾಗಲಿಲ್ಲ.

ಚುನಾವಣೆ, ಡಿವೋರ್ಸ್, ವಿಚಾರಣೆ, ಪ್ರಚಾರ ಅಂತ ಸಾಕಷ್ಟು ಸಮಸ್ಯೆಗಳ ಮಧ್ಯೆ ಒದ್ದಾಡುತ್ತಿದ್ದ ವಿಜಯ್​​ಗೆ ಜನ ನಾಯಗನ್ ಸಿನಿಮಾ ಲೀಕ್ ಮತ್ತಷ್ಟು ಬಲವಾದ ಹೊಡೆತವಾಗಿತ್ತು. ಸಿನಿಮಾ ಥಿಯೇಟರ್​ಗೆ ಬರುವ ಮೊದಲೇ ಲೀಕ್ ಆಗಿ ನಿರ್ಮಾಣ ಸಂಸ್ಥೆಗೂ ನಷ್ಟವಾಯಿತು. ವಿಜಯ್​​ ಚುನಾವಣೆ ಎದುರಿಸೋದು ಅಷ್ಟು ಸುಲಭ ಆಗಿರಲಿಲ್ಲ. ಆದ್ರೆ ಇಂದು ದಳಪತಿ ಎಲ್ಲವನ್ನೂ ಮೀರಿ ನಿಂತಿದ್ದಾರೆ. ವಿಜಯ್ ಟಿವಿಕೆ ಗೆಲುವು ಭಾರೀ ದೊಡ್ಡಮಟ್ಟದ್ದಾಗಿದೆ. ಈ ರೀತಿ ವಿಜಯ್ ಗೆಲ್ಲಬಹುದು ಎಂದು ನಿರೀಕ್ಷೆಯೂ ಇರಲಿಲ್ಲ. ಆದ್ರೆ ತಮಿಳು ನಾಡು ಜನ ಯಾವುದಕ್ಕೂ ಕೇರ್​ ಮಾಡದೇ ಇವತ್ತು ವಿಜಯ್​​ರನ್ನ ಗೆಲ್ಲಿಸಿ ನಿಲ್ಲಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Deepika Padukone: 2ನೇ ಮಗುವಿಗೆ ಕ್ಷಣಗಣನೆ; ಮಗಳ ಹುಟ್ಟುಹಬ್ಬಕ್ಕೆ ಬೇಬಿಬಂಪ್​ ಷೋ- ಕ್ಯೂಟ್​ ಫೋಟೋಸ್​
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು