
ನಾನಿ ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ 'ದಿ ಪ್ಯಾರಡೈಸ್'. ಶ್ರೀಕಾಂತ್ ಓದೆಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕೂರಿ ನಿರ್ಮಾಣ ಮಾಡಿದ್ದಾರೆ. ಮೋಹನ್ ಬಾಬು ವಿಲನ್ ಆಗಿ ಅಬ್ಬರಿಸಲಿದ್ದು, ಸಂಪೂರ್ಣೇಶ್ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಇದೇ ತಿಂಗಳ 24ರಂದು ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚೆಗೆ ನಡೆದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಾನಿ ಮಾಧ್ಯಮಗಳ ಜೊತೆ ಮಾತನಾಡಿದರು. ಜಡೆ ವಿವಾದ ಹಾಗೂ ಅಮ್ಮ ಕೊಟ್ಟ ವಾರ್ನಿಂಗ್ ಬಗ್ಗೆ ಅವರು ಸ್ಪಷ್ಟನೆ ನೀಡಿದರು.
'ಇಂಥ ಸಿನಿಮಾ ಯಾಕೆ ಮಾಡ್ತೀಯಾ'
ನಾನಿ ಅಂದ್ರೆ ಫ್ಯಾಮಿಲಿ ಹಾಗೂ ಲವ್ ಸ್ಟೋರಿ ಸಿನಿಮಾಗಳು ನೆನಪಾಗುತ್ತವೆ. ಆದರೆ ಇತ್ತೀಚೆಗೆ ಅವರು 'ಸರಿಪೋದಾ ಶನಿವಾರಂ', 'ಹಿಟ್ 3' ನಂತಹ ಮಾಸ್ ಆಕ್ಷನ್ ಸಿನಿಮಾಗಳನ್ನು ಮಾಡ್ತಿದ್ದಾರೆ. 'ದಿ ಪ್ಯಾರಡೈಸ್' ಕೂಡ ಪಕ್ಕಾ ಆಕ್ಷನ್ ಸಿನಿಮಾ. ಈ ಸಿನಿಮಾದ ಜಡೆ ಲುಕ್ ನೋಡಿದ ಅವರ ಅಮ್ಮ, ಇಂಥ ಸಿನಿಮಾಗಳು ಯಾಕೆ ಮಾಡ್ತೀಯಾ, ಫ್ಯಾಮಿಲಿ ಜೊತೆ ಕೂತು ನೋಡುವ ಕೂಲ್ ಸಿನಿಮಾಗಳನ್ನು ಮಾಡು ಅಂತ ವಾರ್ನಿಂಗ್ ಕೊಟ್ಟಿದ್ದಾರಂತೆ. ಆದರೆ ಈ ಸಿನಿಮಾದಲ್ಲಿ ತಾಯಿಯ ಎಮೋಷನ್ ಹೈಲೈಟ್ ಆಗಿದೆ, ಆಕ್ಷನ್ ಜೊತೆಗೆ ಎಮೋಷನ್ ಕೂಡ ಪ್ರೇಕ್ಷಕರನ್ನು ಕಾಡುತ್ತದೆ ಎಂದು ನಾನಿ ಹೇಳಿದ್ದಾರೆ.
ಇತ್ತೀಚೆಗೆ ಪ್ರಮೋಷನ್ ವೇಳೆ ಹುಡುಗಿಯರು ಕೂಡ ಜಡೆ ಹಾಕಿಕೊಳ್ಳಬೇಕು ಎಂದು ನಾನಿ ಕಾಮೆಂಟ್ ಮಾಡಿದ್ದರು. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಜಡೆ ಹಾಕಿಕೊಂಡರೆ ಆ ನೋವು ಎಷ್ಟಿರುತ್ತದೆ ಎಂದು ನನಗೆ ಗೊತ್ತಾಗಿದೆ, ಸುಮ್ಮನೆ ತಮಾಷೆಗೆ ಹುಡುಗಿಯರು ಜಡೆ ಹಾಕಿಕೊಳ್ಳಬೇಕು ಎಂದಿದ್ದೆ ಅಷ್ಟೇ ಎಂದಿದ್ದಾರೆ. ಆದರೆ ಇದನ್ನೇ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಾನು ಏನೇ ಮಾತನಾಡಿದರೂ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಜಡೆ ಬಗ್ಗೆ ನಾನು ಮಾಡಿದ್ದು ಕೇವಲ ತಮಾಷೆ ಮಾತ್ರ, ಸೀರಿಯಸ್ ಅಲ್ಲ ಎಂದು ನಾನಿ ಸ್ಪಷ್ಟನೆ ನೀಡಿದ್ದಾರೆ.
ಜಡೆ ಲುಕ್ ಕಥೆಯಿಂದಲೇ ಹುಟ್ಟಿಕೊಂಡಿದೆ. ಈ ಪಾತ್ರ ಸಮಾಜದಲ್ಲಿ ಬೆಳೆದ ವ್ಯಕ್ತಿಯದ್ದಲ್ಲ, ಆತನಿಗೆ ಮೊದಲಿನಿಂದಲೂ ಒಂದು ಮ್ಯಾಡ್‌ನೆಸ್ ಇರುತ್ತದೆ. ತೆಲುಗಿಗೆ ಇದೊಂದು ಹೊಸ ಬಗೆಯ ಪಾತ್ರ. ತಾಯಿ-ಮಗನ ಎಮೋಷನ್ ಅದ್ಭುತವಾಗಿ ಮೂಡಿಬಂದಿದೆ. ಪ್ರತಿಯೊಂದು ಆಕ್ಷನ್ ಹಿಂದೆಯೂ ಒಂದು ಎಮೋಷನ್ ಇರುತ್ತದೆ. ಟೀಸರ್‌ನಲ್ಲಿ ಕೂಡ ತಾಯಿಯ ಎಲಿಮೆಂಟ್ ಹೈಲೈಟ್ ಮಾಡಿದ್ದೇವೆ. ಸಿನಿಮಾ ಶುರುವಾಗುವುದು ಹಾಗೂ ಮುಗಿಯುವುದು ತಾಯಿಯ ಎಮೋಷನ್ ಮೂಲಕವೇ. ಸಿನಿಮಾ ನೋಡಿದ ಮೇಲೆ ಮೂರ್ನಾಲ್ಕು ದಿನ 'ಪ್ಯಾರಡೈಸ್' ಗುಂಗು ನಿಮ್ಮಿಂದ ಹೋಗಲ್ಲ ಎಂದು ನಾನಿ ಭರವಸೆ ನೀಡಿದ್ದಾರೆ.
ನಾನೇ ಸ್ವಂತವಾಗಿ ಮಾಡಿದ್ದೇನೆ
ನಿರ್ದೇಶಕ ಶ್ರೀಕಾಂತ್ ಓದೆಲ ಪಕ್ಕಾ ಮಾಸ್ ಆಡಿಯನ್ಸ್ ನಾಡಿಮಿಡಿತ ಬಲ್ಲವರು. ಥಿಯೇಟರ್‌ನಲ್ಲಿ ಪ್ರೇಕ್ಷಕರು ಹೇಗೆ ರಿಯಾಕ್ಟ್ ಮಾಡ್ತಾರೆ ಎಂದು ಊಹಿಸಿಯೇ ಅವರು ಟೇಕ್ ಓಕೆ ಮಾಡ್ತಾರೆ. ಈ ಸಿನಿಮಾದಲ್ಲಿ ಎರಡು ಎಪಿಸೋಡ್‌ಗಳನ್ನು ತುಂಬಾ ರಾಡಿಕಲ್ ಆಗಿ ತೆಗೆದಿದ್ದಾರೆ. ಸಿನಿಮಾದಲ್ಲಿ ರಿಸ್ಕಿ ಆಕ್ಷನ್ ದೃಶ್ಯಗಳನ್ನು ನಾನೇ ಸ್ವಂತವಾಗಿ ಮಾಡಿದ್ದೇನೆ. ಇನ್ನು 15 ವರ್ಷಗಳ ಕಾಲ ನಾನು ಡ್ಯೂಪ್ ಬಳಸಲ್ಲ. ಕೈ, ಕಾಲು ಕಾಣುವ ಶಾಟ್‌ಗಳನ್ನೂ ನಾನೇ ಮಾಡ್ತೀನಿ. ಸ್ಕ್ರೀನ್ ಮೇಲೆ ನೋಡಿದಾಗ ಅದು ಡ್ಯೂಪ್ ಅಂತ ಅನಿಸಿದರೆ ನನಗೆ ಸಮಾಧಾನ ಆಗಲ್ಲ ಎಂದು ನಾನಿ ಹೇಳಿದ್ದಾರೆ.
ಸಿನಿಮಾದಲ್ಲಿ ಸವಾರಿ ಬೊಟ್ಟು, ಮೂಗುತಿ, ಚೈನ್ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಮೇಕಪ್ ಹಾಕಲು ಒಂದು ಗಂಟೆ ನಲವತ್ತು ನಿಮಿಷ, ತೆಗೆಯಲು 20 ನಿಮಿಷ ಬೇಕಾಗುತ್ತಿತ್ತು. ಕೆಲವೊಮ್ಮೆ ಸತತ 36 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದೇವೆ. ತಲೆಯೆಲ್ಲಾ ಕೆಂಪಾಗುತ್ತಿತ್ತು. ಜಡೆ ಹಾಕಿಕೊಂಡು ರೋಪ್ ವರ್ಕ್ ಮಾಡುವುದು ತುಂಬಾ ಕಷ್ಟವಾಗಿತ್ತು. ಫೈಟ್ ಮಾಸ್ಟರ್‌ಗಳೇ ನನ್ನ ಕಷ್ಟ ನೋಡಿ ಅಯ್ಯೋ ಎನ್ನುತ್ತಿದ್ದರು. ಔಟ್‌ಪುಟ್ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಂಡಿಲ್ಲ. ಮಕ್ಕಳನ್ನು ಹೊರತುಪಡಿಸಿ ಫ್ಯಾಮಿಲಿ ಹಾಗೂ ದೊಡ್ಡವರು ನೋಡಬಹುದಾದ ಸಿನಿಮಾ ಇದು. ಕಯಾದು ಲೋಹರ್ ಪಾತ್ರ ಕೂಡ ಸರ್ಪ್ರೈಸ್ ಕೊಡಲಿದೆ ಎಂದು ನಾನಿ ವಿವರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.