
ಮಹಿಳೆಯರು ತಮ್ಮ ಜೀವನಪೂರ್ತಿ ಉದ್ದನೆಯ ಕೂದಲನ್ನು ಹೇಗೆ ತಾನೇ ಮೇಂಟೇನ್ ಮಾಡ್ತಾರೋ? ಇದಕ್ಕಾಗಿ ಅವರಿಗೆ ಒಂದು ದೊಡ್ಡ ನಮಸ್ಕಾರ ಹಾಕಬೇಕು ಎಂದು ನಟ ನಾನಿ ಹೇಳಿದ್ದಾರೆ. ಅವರ ಈ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟಾಲಿವುಡ್ ಸ್ಟಾರ್ ನಟ ನಾನಿ ಈಗ ಶ್ರೀಕಾಂತ್ ಒಡೆಲಾ ನಿರ್ದೇಶನದ 'ದಿ ಪ್ಯಾರಡೈಸ್' ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ನಟಿಸುತ್ತಿದ್ದಾರೆ.
ರಾಘವ್ ಜುಯಲ್, ಕಯಾದು ಲೋಹರ್, ಸೋನಾಲಿ ಕುಲಕರ್ಣಿ ಮತ್ತು ಮೋಹನ್ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೀರ್ತಿ ಸುರೇಶ್ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. 'ದಿ ಪ್ಯಾರಡೈಸ್' ಚಿತ್ರಕ್ಕಾಗಿ ನಾನಿ ಉದ್ದನೆಯ ಕೂದಲು ಬಿಟ್ಟು ಜಡೆ ಹಾಕಿಕೊಂಡಿದ್ದಾರೆ. ಹೀರೋ ಜಡೆ ಹಾಕಿಕೊಂಡರೆ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ನನಗಿತ್ತು. ಮಹಿಳೆಯರು ಜಡೆ ಹಾಕಿದರೆ ಚೆನ್ನಾಗಿರುತ್ತೆ, ಆದರೆ ಹೀರೋಗೆ ಇದು ಸೆಟ್ ಆಗುತ್ತಾ ಎಂಬ ಪ್ರಶ್ನೆ ಇತ್ತು.
ಆದರೂ ಧೈರ್ಯ ಮಾಡಿ ನಟಿಸಿದೆ, ಈಗ ಫ್ಯಾನ್ಸ್ ಇದನ್ನು ಇಷ್ಟಪಟ್ಟಿದ್ದಾರೆ ಎಂದು ನಾನಿ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ನಾನಿ ಮಾತನಾಡಿದ್ದಾರೆ. "ಉದ್ದನೆಯ ಕೂದಲು ಬಿಟ್ಟು, ಜಡೆ ಹೆಣೆದುಕೊಂಡು ನಟಿಸುವುದು ನನಗೆ ದೊಡ್ಡ ಸವಾಲಾಗಿತ್ತು. 160 ದಿನಗಳ ಶೂಟಿಂಗ್ ಉದ್ದಕ್ಕೂ ಇದೇ ಲುಕ್‌ನಲ್ಲಿ ಇರುವುದು ತುಂಬಾನೇ ಕಷ್ಟವಾಯ್ತು" ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
"ಮಹಿಳೆಯರು ತಮ್ಮ ಜೀವನಪೂರ್ತಿ ಕೂದಲನ್ನು ಹೇಗೆ ತಾನೇ ಕಾಪಾಡಿಕೊಳ್ಳುತ್ತಾರೋ? ಇದಕ್ಕಾಗಿ ಅವರಿಗೆ ಒಂದು ದೊಡ್ಡ ನಮಸ್ಕಾರ ಹಾಕಬೇಕು. ಈ ಸಿನಿಮಾದ ಅನುಭವದ ನಂತರ ನನಗೆ ಮಹಿಳೆಯರ ಮೇಲೆ ಗೌರವ ಇನ್ನಷ್ಟು ಹೆಚ್ಚಾಗಿದೆ" ಎಂದು ನಾನಿ ಮನಬಿಚ್ಚಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.