Yash Toxic Trailer Launch: ಟಾಕ್ಸಿಕ್ ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ 'ಟಾಕ್ಸಿಕ್' ಸ್ಪೆಷಲ್ ಲೇಡೀಸ್ & ಬಾಯ್ಸ್‌!

Published : Aug 08, 2026, 12:03 PM IST
Huma, Rukmini, Vivek, Tara, Sudev, Kiara

ಸಾರಾಂಶ

ಇವತ್ತು ಬಿಡುಗಡೆ ಆಗಲಿರುವ ‘ಟಾಕ್ಸಿಕ್’ ಟ್ರೇಲರ್ ಈವೆಂಟ್‌ಗೆ ಹಾಜರಾಗಲು ಚಿತ್ರತಂಡದ ಒಬ್ಬಬ್ಬರೇ ಕಲಾವಿದರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯಕ್ಕೆ ನಟಿ ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್, ಅಕ್ಷಯ್ ಒಬೆರಾಯ್ ಹಾಗೂ ಕಿಯಾರಾ ಅಡ್ವಾನಿ ಆಗಮನವಾಗಿದೆ. ಮಿಕ್ಕವರ ಎಂಟ್ರಿಗೆ ಕೌಂಟ್‌ಡೌನ್ ನಡೆಯುತ್ತಿದೆ.

Vivek Oberoi, Kiara Advani, Huma Qureshi, Tara Sutaria, Rukmini Vasanthm, Sudev Nair lands in Bangalore for Yash starrer Toxic Trailer Launch: ಇಂದು, ಅಂದರೆ 08 ಆಗಸ್ಟ್ 2026ರ ಸಾಯಂಕಾಲ ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ನಡೆಯಲಿರುವುದು ಗೊತ್ತೇ ಇದೆ. ಅದಕ್ಕೆ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸೇರಿದಂತೆ ಇಡೀ ಚಿತ್ರತಂಡ ಹಾಜರಾಗುವ ನಿರೀಕ್ಷೆ. ಈ ನಿರೀಕ್ಷೆಗೆ ಸಾಕ್ಷಿ ಎನ್ನುವಂತೆ ಇದೀಗ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ನಟಿ ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್, ವಿವೇಕ್ ಒಬೆರಾಯ್ ಹಾಗೂ ಕಿಯಾರಾ ಅಡ್ವಾನಿ ಬೆಂಗಳೂರಿಗೆ ಬಂದಿದ್ದಾರೆ.

ಹೌದು, ಇಂದು ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಏರಿಯಾದಲ್ಲಿರುವ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಈವೆಂಟ್ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಟ್ರೇಲರ್ ಲಾಂಚ್ ಅಂದ್ರೆ ಸುಮ್ನೆನಾ? ಇದು ಕನ್ನಡದ ಹುಡುಗ, ಕೆಜಿಎಫ್ ರಾಕಿ ಭಾಯ್ ನಟನೆಯ, ಹಾಲಿವುಡ್ ರೇಂಜ್‌ನ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್. ಅದಕ್ಕಾಗಿ ಇಡೀ ಚಿತ್ರತಂಡ ಸೇರುವುದು ಖಂಡಿತ ಎನ್ನಲಾಗುತ್ತಿದೆ. ಅನಿವಾರ್ಯ ಕಾರಣದಿಂದ ಯಾರೋ ಒಬ್ಬಿಬ್ಬರು ಗೈರಾಗಬಹುದು ಅಷ್ಟೇ!

ಒಟ್ಟಿನಲ್ಲಿ, ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್; ಸಿನಿಮಾ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಕಾರಣ, ಕೆಜಿಎಫ್‌ ಸಿನಿಮಾ ತೆರೆಗೆ ಬಂದು, ಸಾಕಷ್ಟು ವರ್ಷಗಳ ಗ್ಯಾಪ್ ಬಳಿಕ ಯಶ್ ಅವರು ಅದಕ್ಕಿಂತ ಎಷ್ಟೋ ಪಟ್ಟು ಬಿಗ್ ಪ್ರಾಜೆಕ್ಟ್ ಮೂಲಕ ಮತ್ತೊಮ್ಮೆ ಸ್ಕ್ರೀನ್ ಮೇಲೆ ಸಿನಿಮಾ ಪ್ರೇಕ್ಷಕರಿಗೆ ತಮ್ಮ ದರ್ಶನ ಕೊಡುತ್ತಿದ್ದಾರೆ. ಜೊತೆಗೆ, ಈ ಮೊದಲಿನ ಯಶ್ ನಟನೆಯ ಕೆಜಿಎಫ್ ಸರಣಿಗೆ ಹೋಲಿಸಿದರೂ ಕೂಡ ಟಾಕ್ಸಿಕ್ ಸಿನಿಮಾ ಎಲ್ಲಾ ದೃಷ್ಟಿಯಿಂದಲೂ ಇನ್ನೂ ಹೆಚ್ಚಿನ ಸದ್ದು ಮಾಡಲಿರುವ ಸಿನಿಮಾ ಎಂಬುದು ಶತಃಸಿದ್ಧ. ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್‌ ಜೊತೆಗೆ, ಇದು ಕೆಜಿಎಫ್ ತರಹ ಪ್ಯಾನ್ ಇಂಡಿಯಾ ಅಲ್ಲದ, ಪ್ಯಾನ್ ವರ್ಲ್ಡ್‌ ಸಿನಿಮಾ.

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಜೊತೆಗೆ, ಇಂದಿನ ಈವೆಂಟ್‌ಗೆ ಹಾಜರಾಗಲು ಚಿತ್ರತಂಡದ ಒಬ್ಬಬ್ಬರೇ ಕಲಾವಿದರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯಕ್ಕೆ ನಟಿ ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಸುದೇವ್ ನಾಯರ್, ಅಕ್ಷಯ್ ಒಬೆರಾಯ್ ಆಗಮನವಾಗಿದೆ. ಮಿಕ್ಕವರ ಎಂಟ್ರಿಗೆ ಕೌಂಟ್‌ಡೌನ್ ನಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಸೀಸನ್ 13 : ಜನಸಾಮಾನ್ಯರ ಸೆಲೆಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆ
ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ CM ಶುಭೇಂದು ಅಧಿಕಾರಿ