Yash Toxic Trailer Launch: ಯಶ್ ಸಿನಿಮಾ 'ಟಾಕ್ಸಿಕ್' ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ ಚೆಲುವೆ ಹುಮಾ ಖುರೇಷಿ!

Published : Aug 08, 2026, 11:14 AM ISTUpdated : Aug 08, 2026, 11:19 AM IST
Huma Qureshi

ಸಾರಾಂಶ

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಇದೀಗ ಟಾಕ್ಸಿಕ್‌ ನಟಿಯರಲ್ಲಿ ಒಬ್ಬರಾದ ಹುಮಾ ಖುರೇಷಿ ಬೆಂಗಳೂರಿಗೆ ಬಂದಿದ್ದಾರೆ. ಕಾರಲ್ಲಿ ಕುಳಿತು ಈ ನಟಿ ಮಾಡಿದ್ದೇನು? ನೋಡಿ..

Huma Qureshi lands in Bangalore for Yash starrer Toxic Trailer Launch: ಟಾಕ್ಸಿಕ್ ಟ್ರೇಲರ್‌ ಲಾಂಚ್‌ಗೆ ಬೆಂಗಳೂರಿಗೆ ಬ<ದಿಳಿದ ನಟಿ ಹುಮಾ ಖುರೇಷಿ!

ಇಂದು, ಅಂದರೆ 08 ಆಗಸ್ಟ್ 2026ರ ಸಾಯಂಕಾಲ ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ನಡೆಯಲಿರುವುದು ಗೊತ್ತೇ ಇದೆ. ಅದಕ್ಕೆ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸೇರಿದಂತೆ ಇಡೀ ಚಿತ್ರತಂಡ ಹಾಜರಾಗುವ ನಿರೀಕ್ಷೆ. ಈ ನಿರೀಕ್ಷೆಗೆ ಸಾಕ್ಷಿ ಎನ್ನುವಂತೆ ಇದೀಗ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ನಟಿ ಹುಮಾ ಖುರೇಷಿ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ. ಕ್ಯಾಮೆರಾ ಕಣ್ಣಿಗೆ ‘ಹಾಯ್’ ಎಂದು ಸನ್ನೆ ಮಾಡಿ ಮುಗುಳ್ನಗು ಬೀರಿದ್ದಾರೆ.

ಹೌದು, ಇಂದು ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಏರಿಯಾದಲ್ಲಿರುವ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಈವೆಂಟ್ ನಡೆಯಲಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಟ್ರೇಲರ್ ಲಾಂಚ್ ಅಂದ್ರೆ ಸುಮ್ನೆನಾ? ಇದು ಕನ್ನಡದ ಹುಡುಗ, ಕೆಜಿಎಫ್ ರಾಕಿ ಭಾಯ್ ನಟನೆಯ, ಹಾಲಿವುಡ್ ರೇಂಜ್‌ನ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್. ಅದಕ್ಕಾಗಿ ಇಡೀ ಚಿತ್ರತಂಡ ಸೇರುವುದು ಖಂಡಿತ ಎನ್ನಲಾಗುತ್ತಿದೆ. ಅನಿವಾರ್ಯ ಕಾರಣದಿಂದ ಯಾರೋ ಒಬ್ಬಿಬ್ಬರು ಗೈರಾಗಬಹುದು ಅಷ್ಟೇ!

ಒಟ್ಟಿನಲ್ಲಿ, ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್; ಸಿನಿಮಾ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಕಾರಣ, ಕೆಜಿಎಫ್‌ ಸಿನಿಮಾ ತೆರೆಗೆ ಬಂದು, ಸಾಕಷ್ಟು ವರ್ಷಗಳ ಗ್ಯಾಪ್ ಬಳಿಕ ಯಶ್ ಅವರು ಅದಕ್ಕಿಂತ ಎಷ್ಟೋ ಪಟ್ಟು ಬಿಗ್ ಪ್ರಾಜೆಕ್ಟ್ ಮೂಲಕ ಮತ್ತೊಮ್ಮೆ ಸ್ಕ್ರೀನ್ ಮೇಲೆ ಸಿನಿಮಾ ಪ್ರೇಕ್ಷಕರಿಗೆ ತಮ್ಮ ದರ್ಶನ ಕೊಡುತ್ತಿದ್ದಾರೆ. ಜೊತೆಗೆ, ಈ ಮೊದಲಿನ ಯಶ್ ನಟನೆಯ ಕೆಜಿಎಫ್ ಸರಣಿಗೆ ಹೋಲಿಸಿದರೂ ಕೂಡ ಟಾಕ್ಸಿಕ್ ಸಿನಿಮಾ ಎಲ್ಲಾ ದೃಷ್ಟಿಯಿಂದಲೂ ಇನ್ನೂ ಹೆಚ್ಚಿನ ಸದ್ದು ಮಾಡಲಿರುವ ಸಿನಿಮಾ ಎಂಬುದು ಶತಃಸಿದ್ಧ. ಬಿಗ್ ಬಜೆಟ್, ಬಿಗ್ ಸ್ಟಾರ್ ಕಾಸ್ಟ್‌ ಜೊತೆಗೆ, ಇದು ಕೆಜಿಎಫ್ ತರಹ ಪ್ಯಾನ್ ಇಂಡಿಯಾ ಅಲ್ಲದ, ಪ್ಯಾನ್ ವರ್ಲ್ಡ್‌ ಸಿನಿಮಾ.

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಜೊತೆಗೆ, ಇಂದಿನ ಈವೆಂಟ್‌ಗೆ ಹಾಜರಾಗಲು ಚಿತ್ರತಂಡದ ಒಬ್ಬಬ್ಬರೇ ಕಲಾವಿದರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸದ್ಯಕ್ಕೆ ಹುಮಾ ಖುರೇಷಿ ಆಗಮನವಾಗಿದೆ. ಮಿಕ್ಕವರ ಎಂಟ್ರಿಗೆ ಕೌಂಟ್‌ಡೌನ್ ನಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Atiq Ahmed: ಗ್ಯಾಂಗಸ್ಟಾರ್ ಅತೀಕ್ ಅಹ್ಮದ್ ಮಗನ ಕಾರು ಶೋಧನೆಯಲ್ಲಿ ಪೊಲೀಸರಿಗೆ ಶಾಕ್! ಸಿಕ್ಕ ಆ ಎರಡು ಪುಸ್ತಕಗಳ ಹಿಂದೆ ಅಡಗಿದ ಕಥೆಯೇನು?
Saif Ali Khan: ಅಣ್ಣನ ಸೀಕ್ರೆಟ್ ಮದುವೆಗೆ ತಂಗಿಯರಿಗೇ ಇರಲಿಲ್ವಾ ಎಂಟ್ರಿ? ಶಾಕ್ ಆಗಿತ್ತು ಇಡೀ ಫ್ಯಾಮಿಲಿ!