Vijay Simplicity: ಸೂಟು ಬೂಟು ಧರಿಸಿದ್ರೂ ಮನಸ್ಸು ಮಾತ್ರ ಜನರ ಜೊತೆ: ಸಿಎಂ ವಿಜಯ್ ನಡೆ ವೈರಲ್!

Published : Jun 18, 2026, 04:40 PM IST
Thalapathy Vijay

ಸಾರಾಂಶ

Thalapathy Vijay Viral Video: ನೀಲಾಂಗರೈನ ತಮ್ಮ ನಿವಾಸದಿಂದ ಸೆಕ್ರೆಟರಿಯೇಟ್‌ಗೆ ಹೊರಟಿದ್ದ ಸಿಎಂ ವಿಜಯ್, ಚೆನ್ನೈನ ಬಿಸಿಲಿನಲ್ಲಿ ತಮಗಾಗಿ ಕಾಯುತ್ತಿದ್ದ ಜನರನ್ನು ನೋಡಿ ಸುಮ್ಮನೆ ಸಾಗಿಬಿಡಲಿಲ್ಲ.

ರಾಜಕಾರಣಿಗಳು ಅಂದ್ರೆ ವೈಟ್ ಅಂಡ್ ವೈಟ್ ತೊಟ್ಟು ಖಾದಿಧಾರಿಗಳಾಗಿ ಕಾಣಿಸಿಕೊಳ್ಳೋದು ಕಾಮನ್. ಆದ್ರೆ ಸಿನಿರಂಗದಿಂದ ಬಂದು ತಮಿಳುನಾಡಿನ ಸಿಎಂ ಆಗಿರೋ ವಿಜಯ್ ಮಾತ್ರ ಸೂಟು ಬೂಟು ಧರಿಸಿಕೊಂಡು, ದುಬಾರಿ ವಾಚ್ ಕಟ್ಟಿಕೊಂಡು ಸಿನಿಮಾ ಹೀರೋ ರೀತಿಯೇ ಕಾಣಿಸಿಕೊಳ್ತಾ ಇದ್ದಾರೆ. ಆದ್ರೆ ಸೂಟು ಬೂಟು ಸಿಎಂ ಅಂತ ಕರೆಸಿಕೊಂಡರೂ ತಾನೆಷ್ಟು ಸಿಂಪಲ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ವಿಜಯ್. ಪಾಲಿಟೀಷಿಯನ್ಸ್ ಅಂದ ಕೂಡಲೇ ಜನರ ಕಣ್ಮುಂದೆ ಬರೋ ಚಿತ್ರ ವೈಟ್ ಅಂಡ್ ವೈಟ್ ಬಟ್ಟೆ. ರಾಜಕಾರಣಿಗಳು ಅಂದ್ರೆ ಖಾಧಿದಾರಿಗಳು ಅನ್ನೋದು ಫಿಕ್ಸ್ ಆಗಿಬಿಟ್ಟಿದೆ.

ಆದ್ರೆ ಇದಕ್ಕೆ ದಳಪತಿ ವಿಜಯ್ ಮಾತ್ರ ಅಪವಾದ. ಸಿನಿಮಾ ಬಿಟ್ಟು ಪಾಲಿಟಿಕ್ಸ್​​ಗೆ ಬಂದ್ರೂ ವಿಜಯ್ ಥೇಟ್ ಸಿನಿಮಾ ಹೀರೋಗಳಂತೆಯೇ ಸೂಟು ಬೂಟು ಧರಿಸಿಕೊಂಡೇ ಓಡಾಡ್ತಾರೆ. ಸೂಟು ಬೂಟು ಧರಿಸಿ, ಕೈಯಲ್ಲಿ ದುಬಾರಿ ವಾಚ್ ಕಟ್ಟಿ, ಹೈಟೆಕ್ ಎಸ್‌ಯುವಿ ಕಾರುಗಳಲ್ಲಿ ಓಡಾಡೋ ದಳಪತಿಯನ್ನ ಸಹಜವಾಗೇ ಎಲ್ಲರೂ ಸೂಟು ಬೂಟು ಸಿಎಂ ಅಂತಾನೇ ಕರೀತಾ ಇದ್ದಾರೆ. ಹೌದು ನೋಡೋದಕ್ಕೆ ಹೈಫೈ ಆದ್ರೂ ಈ ಸಿಎಂ ಹೃದಯ ಮಾತ್ರ ಸದಾ ಜನಸಾಮಾನ್ಯರಿಗಾಗಿ ಮಿಡಿಯುತ್ತೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ!

ನೀಲಾಂಗರೈನ ತಮ್ಮ ನಿವಾಸದಿಂದ ಸೆಕ್ರೆಟರಿಯೇಟ್‌ಗೆ ಹೊರಟಿದ್ದ ಸಿಎಂ ವಿಜಯ್, ಚೆನ್ನೈನ ಬಿಸಿಲಿನಲ್ಲಿ ತಮಗಾಗಿ ಕಾಯುತ್ತಿದ್ದ ಜನರನ್ನು ನೋಡಿ ಸುಮ್ಮನೆ ಸಾಗಿಬಿಡಲಿಲ್ಲ. ತಕ್ಷಣವೇ ತಮ್ಮ ಐಷಾರಾಮಿ ಕಾರಿನಿಂದ ಕೆಳಗಿಳಿದು, ಜನರತ್ತ ಹೆಜ್ಜೆ ಹಾಕಿದರು. ಬಿಸಿಲಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಸಿಎಂ ವಿಜಯ್​ರ ಈ ನಡೆ ಒಂದು ಸ್ವೀಟ್ ಶಾಕ್ ನೀಡಿರೋದಂತೂ ಸುಳ್ಳಲ್ಲ. ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜೊತೆಗೂ ವಿಜಯ್ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್, "ನಮ್ಮ ಸಿಎಂ ಎಷ್ಟು ಸರಳ ನೋಡಿ, ಸೂಟು ಬೂಟು ಹಾಕಿದ್ರೂ ಅವರಲ್ಲಿರೋ ಜನಸಾಮಾನ್ಯರ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಇವರೇ ನಿಜವಾದ ಪ್ರಜಾಪ್ರಭುತ್ವದ ನಾಯಕ" ಅಂತ ದಳಪತಿಯನ್ನ ಹೊಗಳ್ತಾ ಇದ್ದಾರೆ.

ಸಾಲದ ಸುಳಿಯಲ್ಲಿ ರಾಜ್ಯ.. ಡ್ರಾಮಾ ಮಾಡ್ತಿದ್ದಾರಾ ವಿಜಯ್..?

ರಾಜಕೀಯಕ್ಕೆ ಬಂದ ಮೇಲೆ ಎಲ್ಲರನ್ನೂ , ಎಲ್ಲವನ್ನೂ ಅನುಮಾನದ ಕಣ್ಣಿನಿಂದಲೇ ನೋಡಲಾಗುತ್ತೆ. ಸದ್ಯ ವಿಜಯ್ ಜನಸಾಮಾನ್ಯರನ್ನ ಭೇಟಿ ಮಾಡಿರೋದ್ರ ಬಗ್ಗೆಯೂ ಟೀಕೆ ಮಾಡ್ತಾ ಇದ್ದಾರೆ. ಇದೆಲ್ಲಾ ಕೇವಲ ಒಂದು ಪಬ್ಲಿಸಿಟಿ ಸ್ಟಂಟ್. ರಾಜ್ಯದಲ್ಲಿ ಇಷ್ಟೊಂದು ಆಡಳಿತಾತ್ಮಕ ಸಮಸ್ಯೆಗಳಿರುವಾಗ, ಇಂತಹ ಶೋ ಆಫ್‌ಗಳ ಅಗತ್ಯವಿಲ್ಲ. ಜನರ ಗಮನವನ್ನ ಬೇರೆಡೆ ಸೆಳೆಯಲು ಮಾಡುತ್ತಿರುವ ತಂತ್ರ" ಅಂತ ವಿರೋಧ ಪಕ್ಷದವರು ಟೀಕೆ ಮಾಡ್ತಾ ಇದ್ದಾರೆ.

ತಮಿಳುನಾಡಿನ ಹಣಕಾಸು ಸಚಿವೆ ಮೇರಿ ವಿಲ್ಸನ್ ಇತ್ತೀಚೆಗೆ ತಮಿಳುನಾಡು ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಗಣನೀಯ ಆರ್ಥಿಕ ಕುಸಿತ ಕಂಡುಬಂದಿದೆ ಅಂತ ಆರೋಪಿಸಿದ್ದಾರೆ.ರಾಜ್ಯದ ಬಾಕಿ ಸಾಲಗಳು ಏಪ್ರಿಲ್ 2021 ರಲ್ಲಿ 5.13 ಲಕ್ಷ ಕೋಟಿ ರೂ.ಗಳಿಂದ ಮಾರ್ಚ್ 2026 ರ ವೇಳೆಗೆ ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಅಂತ ವರದಿ ಹೇಳಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳ ಸಾಲಗಳನ್ನ ಒಳಗೊಂಡಂತೆ, ತಮಿಳುನಾಡು ಸರ್ಕಾರಕ್ಕೆ ಒಟ್ಟು 13.18 ಲಕ್ಷ ಕೋಟಿ ರೂಪಾಯಿ ಸಾಲ ಇರುವುದಾಗಿ ಅಂದಾಜಿಸಲಾಗಿದೆ. ಸೋ ತಮಿಳುನಾಡಿನ ಪ್ರತಿ ವ್ಯಕ್ತಿ ಮೇಲೆ 1.28 ಲಕ್ಷ ಸಾಲ ಇದೆ. ರಾಜ್ಯದ ಆರ್ಥಿಕಥೆ ಹೀಗಿರೋವಾಗ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನ ಈಡೇರಿಸುವ ಚಾಲೇಂಜ್ ವಿಜಯ್ ಎದುರಿಗಿದೆ. ಆ ಆರ್ಥಿಕ ಸವಾಲುಗಳನ್ನ ಈ ಸೂಟು ಬೂಟು ಕಂ ಸಿಂಪಲ್ ಸಿಎಂ ಹೇಗೆ ಎದುರಿಸಿ ನಿಲ್ತಾರೆ ಅನ್ನೋದೇ ಸದ್ಯ ಎಲ್ಲರಲ್ಲೂ ಇರುವ ಪ್ರಶ್ನೆ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Controversy: ದರ್ಶನ್‌ಗಾಗಿ ಒಂಟಿ ಹೋರಾಟ: ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ!
ರಾಜಮಾತೆ ಶಿವಗಾಮಿ ಈಗ ಲವ್ ಗುರು: ಬ್ರೇಕಪ್ ಆದವರ ಕಷ್ಟ ಕೇಳಲು 'ಸೆಕೆಂಡ್‌ ಲವ್‌' ಅಂತಾ ಬರ್ತಿದ್ದಾರೆ ರಮ್ಯಕೃಷ್ಣ