
ನಟಿ ಶ್ರುತಿ ಹಾಸನ್ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಅತೀಂದ್ರಿಯ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದು, ಈ ಕಥೆ ಕೇಳಿದ ಅಭಿಮಾನಿಗಳ ಮೈ ಜುಮ್ಮೆನ್ನುವಂತಾಗಿದೆ. ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ನಡೆಸಿಕೊಡುವ ಯೂಟ್ಯೂಬ್ ಶೋ 'ಡಬಲ್ ಡೇಟ್'ನಲ್ಲಿ ಭಾಗವಹಿಸಿದ್ದ ಶ್ರುತಿ, ತಮ್ಮ ಮನೆಯಲ್ಲಿ ನಡೆದ ನಿಗೂಢ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಶ್ರುತಿ ಹಾಸನ್ ಅವರ ಈ ಅನುಭವದ ಕೇಂದ್ರಬಿಂದು 'ಫಿಯೋನಾ' ಎಂಬ ಹೆಸರಿನ ಜೀವಂತ ಮನುಷ್ಯನ ಗಾತ್ರದ ಮ್ಯಾನಿಕಿನ್. ಮನೆಯಲ್ಲಿದ್ದ ಹೆಚ್ಚುವರಿ ಕಾಸ್ಟ್ಯೂಮ್ ಪ್ರದರ್ಶನಕ್ಕಿಡಲು ಅವರು ಈ ಮ್ಯಾನಿಕಿನ್ ಬಳಸುತ್ತಿದ್ದರು. ಮನೆಗೆ ಬರುತ್ತಿದ್ದ ಸ್ನೇಹಿತರಿಗೂ ಫಿಯೋನಾ ಪರಿಚಿತವಾಗಿತ್ತು. ಕೆಲವರು ಅದನ್ನು ಕಂಡಾಗ ಸಹಜವಾಗಿಯೇ ಮಾತನಾಡಿಸಿ, ನಗುತ್ತಾ ಸ್ವಾಗತಿಸುತ್ತಿದ್ದರು. ಆದರೆ, ಕ್ರಮೇಣ ಈ ಮ್ಯಾನಿಕಿನ್ ಸುತ್ತ ವಿಚಿತ್ರ ಘಟನೆಗಳು ನಡೆಯಲಾರಂಭಿಸಿದವು.
ಯಾರೂ ಮುಟ್ಟದಿದ್ದರೂ ಜಾಗ ಬದಲಿಸುತ್ತಿದ್ದ 'ಫಿಯೋನಾ'!
ಶ್ರುತಿ ಹೇಳುವ ಪ್ರಕಾರ, ಯಾರೂ ಮುಟ್ಟದಿದ್ದರೂ ಫಿಯೋನಾ ಮ್ಯಾನಿಕಿನ್ ಇದ್ದಕ್ಕಿದ್ದಂತೆ ತನ್ನ ಸ್ಥಾನ ಬದಲಾಯಿಸುತ್ತಿತ್ತು. ಮನೆಯಲ್ಲಿದ್ದ ವಸ್ತುವೊಂದು ಹೀಗೆ ತಾನಾಗಿಯೇ ಚಲಿಸುವುದನ್ನು ಗಮನಿಸಿದ ಅವರಿಗೆ ಆತಂಕ ಶುರುವಾಯಿತು. ಈ ಅನುಭವವನ್ನು 2007ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ಸಿನಿಮಾ 'ಐ ಆ್ಯಮ್ ಲೆಜೆಂಡ್'ನಲ್ಲಿನ ಚಲಿಸುವ ಮ್ಯಾನಿಕಿನ್‌ಗಳ ದೃಶ್ಯಕ್ಕೂ ಹೋಲಿಸಿದ್ದಾರೆ.
ಈ ವಿಚಿತ್ರ ಘಟನೆಗಳಿಂದ ಮುಕ್ತಿ ಪಡೆಯಲು ಶ್ರುತಿ ಆಧ್ಯಾತ್ಮಿಕ ಆಚರಣೆಗಳ ಮೊರೆ ಹೋದರಂತೆ. ನಾಸ್ತಿಕ ವಾತಾವರಣದಲ್ಲಿ ಬೆಳೆದಿದ್ದರೂ, ತಾನು ಆಳವಾದ ಧಾರ್ಮಿಕ ನಂಬಿಕೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ವಿಕ್ಕಾ ಮತ್ತು ಪೇಗನ್ ಸಂಪ್ರದಾಯಗಳ ಬಗ್ಗೆಯೂ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಮನೆಯಲ್ಲಿನ ನಕಾರಾತ್ಮಕ ವಾತಾವರಣ ದೂರವಾಗಲಿ ಎಂಬ ಉದ್ದೇಶದಿಂದ ಶ್ರುತಿ ಹನುಮಾನ್ ಚಾಲೀಸಾ ಹಾಕಿದ್ದರಂತೆ. ರಕ್ಷಣಾತ್ಮಕ ಕ್ರಮವಾಗಿ ಉಪ್ಪನ್ನೂ ಬಳಸಿದ್ದಾರೆ. ಅಷ್ಟೇ ಅಲ್ಲ, ಫಿಯೋನಾ ಮ್ಯಾನಿಕಿನ್ ಅನ್ನು ಒಂದೊಂದೇ ಭಾಗವಾಗಿ ಬಿಚ್ಚಿ ತೆಗೆದು, ಮನೆಯ ಶುದ್ಧೀಕರಣಕ್ಕಾಗಿ ವಿವಿಧ ಆಚರಣೆಗಳನ್ನೂ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಶ್ರುತಿ ಪ್ರಕಾರ, ಈ ಆಚರಣೆಗಳ ಬಳಿಕ ಆ ವಿಚಿತ್ರ ಘಟನೆಗಳು ನಿಂತುಹೋದವು. ಅಂದಿನಿಂದ ಮುಂಬೈನ ಅವರ ಅಪಾರ್ಟ್‌ಮೆಂಟ್‌ನಲ್ಲಿ ಯಾವುದೇ ತೊಂದರೆಯಿಲ್ಲದೆ ನೆಮ್ಮದಿಯ ವಾತಾವರಣವಿದೆ.
ಇನ್ನು ಶ್ರುತಿ ಹಾಸನ್ ಹಂಚಿಕೊಂಡಿರುವ ಈ ನಿಗೂಢ ಅನುಭವ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮನೆಯಲ್ಲಿದ್ದ ಸಾಮಾನ್ಯ ಮ್ಯಾನಿಕಿನ್ 'ಫಿಯೋನಾ' ಹೀಗೆ ವಿಚಿತ್ರ ಘಟನೆಗಳ ಕೇಂದ್ರವಾಗಿದ್ದು ಹೇಗೆ ಎಂಬ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.