ಮತ್ತೊಮ್ಮೆ ಕನ್ನಡಕ್ಕೆ ಬರ್ತಿದ್ದಾರೆ ತಮನ್ನಾ ಭಾಟಿಯಾ

First Published Jun 6, 2018, 12:04 PM IST
Highlights

ರಮೇಶ್ ಅರವಿಂದ್ ಫೆಂಟಾಸ್ಟಿಕ್ ಡೈರೆಕ್ಟರ್. ಅವರೊಂದಿಗೆ ಕೆಲಸ ಮಾಡುವ ಅನುಭವವೇ ಅದ್ಭುತ. ನಾನು ನಾಯಕಿಯಾಗಿ ಅಭಿನಯಿಸುತ್ತಿರುವ ತೆಲುಗು ವರ್ಷನ್‌ಗೆ ಬೇರೆಯವರು ನಿರ್ದೇಶಕರು. ಆದ್ರೆ ಒಂದೇ ಸೆಟ್‌ನಲ್ಲಿ ಶೂಟಿಂಗ್ ನಡೆಯುವಾಗ ಅವರು ಜತೆಗೇ ಇರುತ್ತಾರೆ. ಅದು ಹಾಗಲ್ಲ, ಹೀಗೆ ಅಂತ ಸಲಹೆ ನೀಡುತ್ತಾರೆ ಎಂದು ರಮೇಶ್ ಅರವಿಂದ್’ರನ್ನು ಶ್ಲಾಘಿಸಿದ್ದಾರೆ ತಮನ್ನಾ.

ತಮನ್ನಾ ಬಾಟಿಯಾ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ‘ಜಾಗ್ವಾರ್’ ಚಿತ್ರದ ನಂತರ ಮತ್ತೊಂದು ಅದ್ಧೂರಿ ವೆಚ್ಚದ ಚಿತ್ರದಲ್ಲಿ ತಮನ್ನಾ ಬಣ್ಣ ಹಚ್ಚುವುದು ನಿಶ್ಚಿತ. ಇದೇ ವರ್ಷ ಕನ್ನಡದ  ಮತ್ತೊಂದು ಸಿನಿಮಾದಲ್ಲಿ ತಾವು ಅಭಿನಯಿಸುವುದು ಖಚಿತ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.

‘ಇಷ್ಟರಲ್ಲಿಯೇ ನಾನು ಮತ್ತೊಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಕಾರಣಾಂತರಗಳಿಂದ ಅದು ಕೈ ತಪ್ಪಿತು. ಈಗ ಮತ್ತೆ ಅದಕ್ಕೆ ಕಾಲ ಕೂಡಿ ಬಂದಿದೆ. ಇದೇ ವರ್ಷ ಮತ್ತೊಂದು ಅದ್ಧೂರಿ ವೆಚ್ಚದ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ’ಎಂದರು ತಮನ್ನಾ.

ಬಾಹುಬಾಲಿ ಖ್ಯಾತಿಯ ತಮನ್ನಾ ಈಗ ಹಿಂದಿಯ ‘ಕ್ವೀನ್’ ಚಿತ್ರದ ತೆಲುಗು ವರ್ಷನ್‌ಗೆ ನಾಯಕಿ. ಅದರ ಚಿತ್ರೀಕರಣಕ್ಕೀಗ ಮೈಸೂರಿಗೆ ಬಂದಿದ್ದಾರೆ. ಮೈಸೂರಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಕೃಷ್ಣ  ಪ್ರಸಾದ್ ನಿವಾಸದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಏಕಕಾಲದಲ್ಲೇ ‘ಕ್ವೀನ್’ ರಿಮೇಕ್ ಕನ್ನಡದ ‘ಬಟರ್‌ಫ್ಲೈ’ ಸೇರಿದಂತೆ ಅದರ ತೆಲುಗು ಹಾಗೂ ತಮಿಳು ವರ್ಷನ್‌ಗೂ ಅಲ್ಲಿ ಚಿತ್ರೀಕರಣ ಸಾಗಿದೆ.

ಒಂದೇ ಸೆಟ್‌ನಲ್ಲಿ ಮೂರು ಚಿತ್ರಗಳ ಚಿತ್ರೀಕರಣ, ಅದರ ಜತೆಗೆ ಮೂರು ಸ್ಟಾರ್ ನಾಯಕಿಯರ ಸಮಾಗಮ. ನಟ, ನಿರ್ದೇಶಕ ರಮೇಶ್ ಅರವಿಂದ್ ಅಧಿಕೃತವಾಗಿ ಇದರ ಕನ್ನಡ ಮತ್ತು ತಮಿಳು ವರ್ಷನ್ ನಿರ್ದೇಶಿಸುತ್ತಿದ್ದರೂ, ಸೆಟ್‌ನಲ್ಲಿ ಮಾತ್ರ ಮೂರು ವರ್ಷನ್‌ಗೂ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಪಾರೂಲ್ ಯಾದವ್ ಹುಟ್ಟು ಹಬ್ಬ ಆಚರಿಸಿಕೊಂಡರು. ಔಪಚಾರಿಕವಾಗಿ ಮಾತಿಗೆ ಸಿಕ್ಕ ತಮನ್ನಾ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಸುಳಿವು ನೀಡಿದರು.

ತಮನ್ನಾ ಸ್ಪೀಕಿಂಗ್

ಬಾಹುಬಲಿ ಚಿತ್ರದ ಮೂಲಕವೇ ಕನ್ನಡದ ಜತೆಗಿನ ನಂಟು ಜಾಸ್ತಿ ಆಗಿದೆ. ಆ ಚಿತ್ರದ ತೆಲುಗು ವರ್ಷನ್‌ಗೆ ಇಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದರ ಬಗ್ಗೆ ಚಿತ್ರ ತಂಡ ಮಾಹಿತಿ ನೀಡಿತ್ತು. ಅವತ್ತಿನಿಂದಲೇ ಬೆಂಗಳೂರು ಬಗ್ಗೆ ನನಗೊಂದು ಆಕರ್ಷಣೆ ಶುರುವಾಗಿತ್ತು.

ಕಾಕತಾಳೀಯ ಎನ್ನುವ ಹಾಗೆ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್ ’ ಮೂಲಕ ಇಲ್ಲಿಗೆ ಬರುವಂತಾಯಿತು. ಅದರ ಬೆನ್ನಲೇ ನನಗೆ ಕನ್ನಡದ ಮತ್ತೊಂದು ಸಿನಿಮಾದ ಆಫರ್ ಬಂತು. ಇನ್ನೇನು ಅದನ್ನು ಒಪ್ಪಿಕೊಳ್ಳಬೇಕೆನ್ನುವ ಹೊತ್ತಿಗೆ ಅದು ನಿಂತು ಹೋಯಿತು.

ಈಗ ಮತ್ತೊಂದು ಕನ್ನಡ ಸಿನಿಮಾದ ಆಫರ್ ಬಂದಿದೆ. ಸದ್ಯಕ್ಕೆ ಅದು ಇನ್ನೂ ಮಾತುಕತೆ ಹಂತದಲ್ಲಿದೆ. ಈಗಲೇ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ. ಏನೇ ಆದ್ರೂ ಅದು ಇದೇ ವರ್ಷ ಸೆಟ್ಟೇರುವುದು ಗ್ಯಾರಂಟಿ.
 

ರಮೇಶ್ ಅರವಿಂದ್ ಫೆಂಟಾಸ್ಟಿಕ್ ಡೈರೆಕ್ಟರ್. ಅವರೊಂದಿಗೆ ಕೆಲಸ ಮಾಡುವ ಅನುಭವವೇ ಅದ್ಭುತ. ನಾನು ನಾಯಕಿಯಾಗಿ ಅಭಿನಯಿಸುತ್ತಿರುವ ತೆಲುಗು ವರ್ಷನ್‌ಗೆ ಬೇರೆಯವರು ನಿರ್ದೇಶಕರು. ಆದ್ರೆ ಒಂದೇ ಸೆಟ್‌ನಲ್ಲಿ ಶೂಟಿಂಗ್ ನಡೆಯುವಾಗ ಅವರು ಜತೆಗೇ ಇರುತ್ತಾರೆ. ಅದು ಹಾಗಲ್ಲ, ಹೀಗೆ ಅಂತ ಸಲಹೆ ನೀಡುತ್ತಾರೆ.

 

click me!