
ಬೆಂಗಳೂರು(ಅ.25): ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಚಿತ್ರಗಳಿಂದ ಹವಾ ಕ್ರಿಯೆಟ್ ಮಾಡಿರೋ ಸ್ಟಾರ್ ನಟ. ಸದ್ಯ ದರ್ಶನ್ ತಮ್ಮ ಸಾಂಸಾರಿಕ ವಿಷ್ಯವಾಗಿ ಗಾಂಧಿನಗರದಲ್ಲಿ ಮತ್ತೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಒಟ್ಟಿಗೆ ಇದ್ದರಾ..? ಇಲ್ವಾ.? ಎಂಬ ಹತ್ತು ಹಲವು ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.
ಆದ್ರೆ ದರ್ಶನ್ ರಾಜರಾಜೇಶ್ವರಿ ನಗರದ ಮನೆಯಿಂದ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ವೊಂದು ಹೊರ ಬಿದ್ದಿದೆ. ಕೌಟುಂಬಿಕ ಕಲಹದಿಂದ ದರ್ಶನ್ ಮತ್ತು ವಿಜಯಲಕ್ಷ್ಮಿ ಬೇರೆ ಬೇರೆಯಾಗಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿತ್ತು.ಆದರೆ ಈಗ ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮೀ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ ಎಂಬ ಒಳ್ಳೆ ವಿಷ್ಯ ಹರಿದಾಡುತ್ತಿದೆ.
ಕೆಲ ತಿಂಗಳುಗಳಿಂದ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ರಾಜರಾಜೇಶ್ವರಿ ಮನೆಯಲ್ಲಿದ್ದರೂ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದ್ರೆ ಇತ್ತೀಚಿಗೆ ಆಯುಧಪೂಜೆ ಹಬ್ಬವನ್ನ ದರ್ಶನ್ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. ಈ ವೇಳೆ ಹಬ್ಬದ ಎಲ್ಲಾ ಉಸ್ತುವಾರಿಯನ್ನ ವಿಜಯಲಕ್ಷ್ಮೀ ಅವರೇ ವಹಿಸಿಕೊಂಡಿದ್ದರು ಎನ್ನಲಾಗುತ್ತಿದೆ
ದರ್ಶನ್ ಮನೆಯಲ್ಲಿ ನಡೆದ ಅದ್ದೂರಿ ಆಯುಧ ಪೂಜೆ ಪೂರ್ತಿ ಜವಾಬ್ದಾರಿಯನ್ನ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಹಿಸಿಕೊಂಡಿದ್ರಂತೆ.ಮನೆ, ಕಚೇರಿ, ವಾಹನಗಳ ಪೂಜೆಲ್ಲಿ ವಿಜಯಲಕ್ಷ್ಮಿ ಗಂಡ ದರ್ಶನ್ ಪಕ್ಕ ನಿಂತು ನಡೆಸಿಕೊಟ್ಟಿದ್ದಾರೆ. ಅಲ್ಲದೇ,ಹಬ್ಬದ ಖುಷಿಗೆ ದರ್ಶನ್ ಸ್ನೇಹಿತರು, ಜೊತೆಯಲ್ಲಿರುವ ಹುಡುಗರಿಗೆ, ಡ್ರೈವರ್‌ಗಳು ಸೇರಿದಂತೆ ಮನೆಯಲ್ಲಿರುವ ಎಲ್ಲರಿಗೂ ವಿಜಯಲಕ್ಷ್ಮೀ ಅವರೇ ಸ್ವೀಟ್ ಬಾಕ್ಸ್‌ಗಳನ್ನ ವಿತರಿಸಿದ್ದಾರೆ. ಹೀಗಾಂತ ದರ್ಶನ್ ಆಪ್ತ ಮೂಲಗಳು ಖಚಿತಪಡಿಸಿವೆ
Click Here: ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಮನೆ ನೋಟಿಸ್ ಗೆ ಉತ್ತರಿಸಿದ ವಿಜಯಲಕ್ಷ್ಮಿ
ಅಷ್ಟೇ ಅಲ್ಲಾ ದರ್ಶನ್ ಮನೆ ಸರ್ಕಾರಿ ಜಾಗದಲ್ಲಿದೆ ಎಂದು, ಬೆಂಗಳೂರು ನಗರ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಆಗ, ದರ್ಶನ್ ಚಕವರ್ತಿ ಶೂಟಿಂಗ್‌ಗಾಗಿ ಮಲೇಶಿಯಾದಲ್ಲಿದ್ದರು. ಆ ಸಂದರ್ಭದಲ್ಲಿ ಗಂಡನ ಪರವಾಗಿ ವಿಜಯಲಕ್ಷ್ಮೀಯವರು ಸರ್ಕಾದ ನೋಟಿಸ್‌ಗೆ ಉತ್ತರ ನೀಡಿದ್ರಂತೆ...ಇದೆನೆಲ್ಲಾ ನೋಡ್ತಾ ಇದ್ರೆ ಸುದೀಪ್ ರಂತೆ ದರ್ಶನ್ ಕೂಡ ತಮ್ಮ ಸಾಂಸಾರಿಕ ಜೀವನವನ್ನ ಉಳಿಸಿಕೊಳ್ಳೊದಿಕ್ಕೆ ಮುಂದಾಗಿದ್ದಾರೆ.ಇದೇ ರೀತಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀ ದಾಂಪತ್ಯ ಸುಖಕಾರ ವಾಗಿರಲಿ ಅನ್ನೋದು ಅಭಿಮಾನಿಗಳ ಹಾರೈಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.